ಸಮಾಜದಲ್ಲಿ ಕಲುಷಿತ ವಾತಾವರಣ ನಿರ್ಮಿಸಲು ಭಗವದ್ಗೀತೆ ಹೇಳಿದ್ಯಾ ..? : ಕುಮಾರಸ್ವಾಮಿ

1 Min Read

ಬೆಂಗಳೂರು: ಪಠ್ಯ ಪುಸ್ತಕದಲ್ಲಿ ಭಗವದ್ಗೀತೆ ಅಳವಡಿಸುವ ಬಗ್ಗೆ ಹಲವರು ಅಸಮಾಧಾನ ಹೊರ ಹಾಕಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಅವರು ಕೂಡ ಇದರ ಅವಶ್ಯಕತೆ ಏನಿದೆ ಎಂದಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ನಮಗೆ ಬೇಕಾಗಿರೋದು ಜನರ ಬದುಕನ್ನ ಕಟ್ಟಿಕೊಡುವ ಕೆಲಸವಾಗಬೇಕಿದೆ. ಗುಜರಾತ್‌ ನಲ್ಲಿ ಭಗವದ್ಗೀತೆ ಇಟ್ಟಿದ್ದಾರೆಂದು ಇಲ್ಲಿಯೂ ರಿಪೀಟ್ ಮಾಡಬೇಕು ಎಂದುಕೊಂಡಿದ್ದಾರೆ. ಭಗವದ್ಗೀತೆಯನ್ನ ಕುಟುಂಬದಲ್ಲೆ ಹೇಳಿಕೊಡ್ತಾರೆ. ಮಕ್ಕಳ ಭವಿಷ್ಯವನ್ನ ಕಟ್ಟಿಕೊಡಲು ಸರ್ಕಾರ ಇರುವುದು.

ಶಿಕ್ಷಣ ಕ್ಷೇತ್ರ ಮಕ್ಕಳ ಭವಿಷ್ಯ ನಿರ್ಮಾಣ ಮಾಡುವಂತ ಸಬ್ಜೆಕ್ಟ್ ಗಳು ಶಾಲೆಯಲ್ಲಿ ಇರುವುದು. ಯಾವುದೇ ಕಾರಣಕ್ಕೂ ಹಿಂದೂ ಸಮಾಜದ ಎಲ್ಲಾ ಬಂಧುಗಳಿಗೂ ಮನವಿ ಮಾಡುತ್ತೇನೆ, ನಾವೂ ಹುಟ್ಟಿರುವುದು ಹಿಂದೂ ಸಮಾಜದಲ್ಲೇ. ನಮ್ಮ ಕುಟುಂಬದಲ್ಲಿ ದೇವರ ಬಗ್ಗೆ ನಂಬಿಕೆ ಇದೆ. ನಾವೂ ದೇವರಿಗೆ ನಡೆದುಕೊಳ್ಳುವ ಭಯ ಭಕ್ತಿ ಬೇರೆ ಯಾರಿಗೂ ಇಲ್ಲ.

ಇವತ್ತು ರಾಜ್ಯದಲ್ಲಿ‌ನಡೆಯುತ್ತಿರುವುದು ಮತ ಬ್ಯಾಂಕ್ ಗೆ. ಒಂದು ಕಾಲದಲ್ಲಿ ವಿದ್ಯೆ ಎಂಬುದು ಒಂದು ವರ್ಗಕ್ಕೆ ಸೇರಿರುವಂತದ್ದು ಎಂಬುದಿತ್ತು. ಆದ್ರೆ ಈಗ ಆ ವರ್ಗದವರೇ ಈ ರೀತಿಯ ವಾತಾವರಣ ವನ್ನ ಎಲ್ಲರ ಮೇಲೆ ಹೇರೋದಕ್ಕೆ ಹೊರಟಿದ್ದಾರೆ. ಮಕ್ಕಳು ತಮ್ಮ ಜ್ಞಾನವನ್ನ ಬೆಳೆಸಿಕೊಳ್ಳಬೇಕಾದರೆ ಹೀಗಿರತಕ್ಕಂತ ಶಿಕ್ಷಣ ವ್ಯವಸ್ಥೆಯಲ್ಲಿ ಹಕವಾರು ನ್ಯೂನತೆ ಇಟ್ಟುಕೊಂಡಿದ್ದೇವೆ. ಸಮಾಜದಲ್ಲಿ ಕಲುಷಿತ ವಾತಾವರಣ ಸೃಷ್ಟಿ ಮಾಡಲು ಭಗವದ್ಗೀತೆ ಹೇಳಿದ್ಯಾ. ಧರ್ಮೋ ರಕ್ಷತೀ ರಕ್ಷಿತಃ ಅನ್ನೋದು ಭಗವದ್ಗೀತೆಯಲ್ಲಿ.

ಇಲ್ಲಿ ನನ್ನ ಅಭಿಪ್ರಾಯ ಕುಟುಂಬದಲ್ಲಿ ಒಂದು ನೆಮ್ಮದಿಯ ಸಾಮರಸ್ಯ ಜೀವನವಾಗಬೇಕು. ತಂದೆ ತಾಯಿ ಸಹೋದರ ನಡುವಿನ ಬಾಂಧವ್ಯ ಸೃಷ್ಟಿಸುವಂತಾಗಬೇಕು. ಇವತ್ತು ರಾಗಿ ಖರೀದಿ‌ಮಾಡಿಲ್ಲ ಅಂತೇಳು ರೈತರು ಕಣ್ಣೀರು ಹಾಕುತ್ತಿದ್ದಾರೆ. ಮನೆ ಸಿಕ್ಕಿಲ್ಲ ಅಂತಾರೆ. ಸರ್ಕಾರ ಜವಬ್ದಾರಿಯುತ ಕೆಲಸ ಮಾಡಬೇಕು. ಈ ರೀತಿಯ ವಾತಾವರಣ ನಿರ್ಮಾಣ ಮಾಡೋದು ಸರಿಯಲ್ಲ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *