ಸುದ್ದಿಒನ್ ವೆಬ್ ಡೆಸ್ಕ್
ಟಿ20 ವಿಶ್ವಕಪ್ ಅಂತಿಮ ಹಂತ ತಲುಪಿದೆ. ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದ ಟೀಂ ಇಂಡಿಯಾ ಸೆಮಿಫೈನಲ್ ನಲ್ಲಿ ಸೋಲುವ ಮೂಲಕ ಅಭಿಮಾನಿಗಳಿಗೆ ತೀವ್ರ ನಿರಾಸೆಯಾಗಿದೆ.
ಸೂಪರ್-12 ಹಂತದಲ್ಲೇ ಮನೆ ಕಡೆಗೆ ಮುಖ ಮಾಡಿದ್ದ ಪಾಕಿಸ್ತಾನ, ಕೆಲವು ಅನಿರೀಕ್ಷಿತವಾದ ಕಾರಣದಿಂದಾಗಿ ಇತರೆ ತಂಡಗಳ ಸೋಲು ಮತ್ತು ಗೆಲುವುಗಳ ಮಾನದಂಡಗಳು ಪಾಕಿಸ್ತಾನಕ್ಕೆ ವರವಾಗಿ ಪರಿಣಮಿಸಿದವು. ಅಂತಿಮವಾಗಿ ಸೆಮೀಸ್‌ನಲ್ಲಿ ಕಿವೀಸ್ ವಿರುದ್ಧ ಗೆದ್ದು ಫೈನಲ್ ಪ್ರವೇಶಿಸಿತು.
ಸೆಮಿಸ್‌ನಲ್ಲಿ 10 ವಿಕೆಟ್‌ಗಳಿಂದ ಗೆದ್ದು ಟೀಂ ಇಂಡಿಯಾಗೆ ಇತಿಹಾಸದಲ್ಲೇ ಸ್ಮರಣೀಯ ಸೋಲನುಭವಿಸಿತ್ತು. ಎಲ್ಲಕ್ಕಿಂತ ಮಿಗಿಲಾಗಿ ನವೆಂಬರ್ 13 ರಂದು ಮೆಲ್ಬೋರ್ನ್ ನಲ್ಲಿ ಪಾಕಿಸ್ತಾನ ಮತ್ತು ಇಂಗ್ಲೆಂಡ್ ತಂಡಗಳು ವಿಶ್ವಕಪ್ ಹೋರಾಟದಲ್ಲಿ ಮುಖಾಮುಖಿಯಾಗಲಿವೆ.
ಫೈನಲ್ ಪಂದ್ಯಕ್ಕೆ ಮುನ್ನವೇ ಕ್ರೀಡಾ ಪಂಡಿತರು ವಿಜೇತರು ಯಾರೆಂದು ಭವಿಷ್ಯ ನುಡಿಯುತ್ತಿದ್ದಾರೆ. ಅನೇಕ ಕ್ರೀಡಾ ಪಂಡಿತರು 1992 ರ ODI(ಅಂತರರಾಷ್ಟ್ರೀಯ ಏಕದಿನ ಪಂದ್ಯ) ವಿಶ್ವಕಪ್ ಪಂದ್ಯದ ಫಲಿತಾಂಶ ಪುನರಾವರ್ತನೆಯಾಗುತ್ತದೆ ಎಂದು ಲೆಕ್ಕ ಹಾಕುತ್ತಿದ್ದಾರೆ. ಕೆಲವರ ಪ್ರಕಾರ ಅಂತಹ ಫೈನಲ್‌ನಲ್ಲಿ ಇಂಗ್ಲೆಂಡ್ ಭರ್ಜರಿ ಜಯ ಸಾಧಿಸಿ ಪ್ರಶಸ್ತಿ ಗೆಲ್ಲಲಿದೆ ಎಂದು ಕೆಲವರು ಊಹಿಸಿದ್ದಾರೆ.
ಈ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಪ್ರದರ್ಶನವು ಕಾಕತಾಳೀಯವೇನೋ ಎಂಬಂತೆ ಫೈನಲ್ ತಲುಪಿದೆ. ಇದು ಯಥಾಪ್ರಕಾರ 1992 ರ ODI ವಿಶ್ವಕಪ್ ಅನ್ನು ನೆನಪಿಸುತ್ತದೆ. 1992ರ ಏಕದಿನ ವಿಶ್ವಕಪ್‌ನಲ್ಲಿ ಇಮ್ರಾನ್ ಖಾನ್ ಪಾಕಿಸ್ತಾನವನ್ನು ಮುನ್ನಡೆಸಿದ್ದರು.
ಆ ವಿಶ್ವಕಪ್ ನಲ್ಲಿ ಲೀಗ್ ಹಂತದಲ್ಲಿ ಟೀಂ ಇಂಡಿಯಾ ಎದುರು ಸೋತು.. ನಂತರ ತವರಿಗೆ ಹೋಗಬೇಕಿದ್ದ ಪಾಕಿಸ್ತಾನದ ಅದೃಷ್ಟ ಖುಲಾಯಿಸಿ ಉಳಿದ ಲೀಗ್ ಪಂದ್ಯಗಳಲ್ಲಿ ಅಮೋಘ ಪ್ರದರ್ಶನ ನೀಡಿ ಸೆಮೀಸ್ ಗೆ ಬಂದಿತ್ತು. ನಂತರ ಸೆಮೀಸ್ ಗೆದ್ದು ಯಾರೂ ಊಹಿಸದ ರೀತಿಯಲ್ಲಿ ನ್ಯೂಜಿಲೆಂಡ್ ಜೊತೆಗೆ ಫೈನಲ್ ತಲುಪಿತ್ತು.
ಈ ವಿಶ್ವಕಪ್‌ನಲ್ಲಿಯೂ ಕೂಡಾ ಬಾಬರ್ ತಂಡವು 1992 ರ ಪರಿಸ್ಥಿತಿಯನ್ನು ನೆನಪಿಸುತ್ತಿದೆ. ಸೂಪರ್-12 ಹಂತದಲ್ಲಿ ಟೀಂ ಇಂಡಿಯಾ ಕೈಯಲ್ಲಿ ಸೋಲು.. ನಂತರ ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವು ಸಾಧಿಸಿ ಸೆಮೀಸ್ ಪ್ರವೇಶಿಸಿದ ಪಾಕಿಸ್ತಾನ, ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಮೂರನೇ ಬಾರಿಗೆ ಫೈನಲ್ ಪ್ರವೇಶಿಸಿದೆ.
► 1992ರ ODI ವಿಶ್ವಕಪ್ ಮತ್ತು 2022 T20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಸಾಗಿ ಬಂದ ದಾರಿ…
1992 ODI ವಿಶ್ವಕಪ್: ಅಂದಿನ ವಿಶ್ವಕಪ್ ಆತಿಥ್ಯವನ್ನು ಆಸ್ಟ್ರೇಲಿಯಾ ವಹಿಸಿಕೊಂಡಿತ್ತ.
2022 T20 ವಿಶ್ವಕಪ್: ಆಸ್ಟ್ರೇಲಿಯಾವೇ ಈಗಲೂ ಆತಿಥ್ಯ ವಹಿಸಿದೆ.
1992: ಮೆಲ್ಬೋರ್ನ್‌ನಲ್ಲಿ ಟೀಮ್ ಇಂಡಿಯಾ ವಿರುದ್ಧದ ಮೊದಲ ಪಂದ್ಯದಲ್ಲಿಯೇ ಸೋಲು
2022: ಅದೇ ಮೆಲ್ಬೋರ್ನ್‌ನಲ್ಲಿ ಟೀಮ್ ಇಂಡಿಯಾ ವಿರುದ್ಧದ ಪಂದ್ಯದಲ್ಲಿ ಮತ್ತೆ ಸೋಲು.
1992: ಅದರ ನಂತರ ಸತತ ಮೂರು ಪಂದ್ಯಗಳನ್ನು ಗೆದ್ದಿತ್ತು.
2022: ಈ ಬಾರಿಯೂ ಕೂಡಾ ನೆದರ್ಲೆಂಡ್ಸ್, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ವಿರುದ್ಧ ಸತತ ಮೂರು ಪಂದ್ಯಗಳನ್ನು ಗೆದ್ದಿದೆ.
1992: ಪಾಕಿಸ್ತಾನವು ಲೀಗ್ ಹಂತದ ಕೊನೆಯ ದಿನದಂದು ಒಂದು ಅಂಕದೊಂದಿಗೆ ಸೆಮಿಸ್‌ಗೆ ಅರ್ಹತೆ ಪಡೆದಿತ್ತು.
2022: ಈ ವಿಶ್ವಕಪ್‌ನಲ್ಲಿ ಸೂಪರ್-12 ಹಂತದಲ್ಲಿ ದಕ್ಷಿಣ ಆಫ್ರಿಕಾ ನೆದರ್‌ಲ್ಯಾಂಡ್ಸ್ ವಿರುದ್ಧ ಸೋತ ಕಾರಣ ಪಾಕಿಸ್ತಾನ ಸೆಮೀಸ್ ಗೆ ತಲುಪಿತು.
1992: ಫೈನಲ್
ತಲುಪಲು ಸೆಮಿಸ್‌ನಲ್ಲಿ ನ್ಯೂಜಿಲೆಂಡ್ ಅನ್ನು ಸೋಲಿಸಿತ್ತು.
2022 : ಈ ಬಾರಿಯ ಸೆಮಿಸ್‌ನಲ್ಲಿಯೂ ನ್ಯೂಜಿಲೆಂಡ್ ಅನ್ನು ಸೋಲಿಸಿ ಫೈನಲ್ ತಲುಪಿತು.
1992: ಅಂದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಫೈನಲ್‌ನಲ್ಲಿ ಇಂಗ್ಲೆಂಡ್ ಅನ್ನು ಸೋಲಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.
2022: ಕಾಕತಾಳೀಯಬೆಂಬಂತೆ ಈ ಬಾರಿಯೂ ಕೂಡಾ ಪಾಕಿಸ್ತಾನವು ಫೈನಲ್‌ನಲ್ಲಿ ಇಂಗ್ಲೆಂಡ್ ಅನ್ನು ಎದುರಿಸಲಿದೆ.
ಈ ಬಾರಿ ಟಿ20 ವಿಶ್ವಕಪ್ ಆಗಿರುವುದರಿಂದ ಈ ನಿರೀಕ್ಷೆಗಳು ನಿಜವಾಗುತ್ತವೆ ಎಂದು ಹೇಳಲಾಗದು. ಏಕೆಂದರೆ ಶಾರ್ಟ್ ಫಾರ್ಮ್ಯಾಟ್ ನಲ್ಲಿ ಯಾವಾಗ ಏನಾಗುತ್ತದೆ ಎಂದು ಹೇಳುವುದು ಕಷ್ಟ. ಆದರೆ ವಿಶ್ಲೇಷಣೆ ನೋಡಿದರೆ ಪಾಕಿಸ್ತಾನ ಪ್ರಶಸ್ತಿ ಗೆಲ್ಲುವುದರಲ್ಲಿ ಅನುಮಾನವಿಲ್ಲ.
ಆದರೆ ಈಗಿನ ಫಾರ್ಮ್ ನಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸುವುದೇ ಪಾಕಿಸ್ತಾನಕ್ಕೆ ದೊಡ್ಡ ಸವಾಲಾಗಿದೆ. ಮತ್ತು ಪಾಕಿಸ್ತಾನ ಆ ಸವಾಲನ್ನು ಮೆಟ್ಟಿನಿಂತು ವಿಶ್ವ ಚಾಂಪಿಯನ್ ಆಗಿ ನಿಲ್ಲುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿಯಲು ನವೆಂಬರ್ 13 ರವರೆಗೆ ಕಾಯಬೇಕು.