ಕೊಪ್ಪಳ: ಪ್ರತಾಪ್ ಸಿಂಹ ವಿರುದ್ಧ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಗರಂ ಆಗಿದ್ದಾರೆ. ಪ್ರಿಯಾಂಕ್ ಖರ್ಗೆ ಬಗ್ಗೆ ಪ್ರತಾಪ್ ಸಿಂಹ ಮಾತಾಡಿದ ಮಾತಿಗೆ ತಿರುಗೇಟು ನೀಡಿದ್ದಾರೆ.
ಗಂಗಾವತಿಯಲ್ಲಿ ಮಾತನಾಡಿದ ಮಾಜಿ ಸಚಿವ ಅನ್ಸಾರಿ, ಪ್ರಿಯಾಂಕ್ ಖರ್ಗೆಗೆ ಹೆಣ್ಣಲ್ಲ ಗಂಡಲ್ಲ ಎಂದು ಹೇಳಿದ್ದ ಪ್ರತಾಪ್ ಸಿಂಹ ವಿರುದ್ಧ ಕಾಂಗ್ರೆಸ್ ನಾಯಕರು ಹೌಹಾರಿದ್ದಾರೆ. ಪ್ರತಾಪ್ ಸಿಎಂ ಎಂಪಿ ಆಗೋದಕ್ಕೆ ಲಾಯಾಕ್ಕಿಲ್ಲ. ಮೊದಲು ಆತ ಹೆಣ್ಣೋ ಗಂಡೋ ನೋಡಿಕೊಳ್ಳಲಿ. ಪ್ರತಾಪ್ ಸಿಂಹನಿಗೆ ಟ್ಯಾಲೆಂಟ್ ಝೀರೋ ಇದೆ. ಕಾಂಗ್ರೆಸ್ ಮುಖಂಡರ ಬಗ್ಗೆ ಮಾತನಾಡಿದ್ರೆ ಆತನ ವಿರುದ್ಧ ಪ್ರತಿಭಟನೆ ಮಾಡ್ತೀವಿ ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರತಾಪ್ ಸಿಂಹ ಪ್ರಿಯಾಂಕ್ ಖರ್ಗೆ ಅವರ ಬಳಿ ತಕ್ಷಣವೇ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ಮುಂದಿನ ಪರಿಣಾಮ ಎದುರಿಸಬೇಕಾಗುತ್ತದೆ. ಬಿಟ್ ಕಾಯಿನ್ ವಿಚಾರದಲ್ಲಿ ಬಿಜೆಪಿಯವರು ತುಂಬಾ ಜನ ಭಾಗಿಯಾಗಿದ್ದಾರೆ. ಬಿಜೆಪಿ ಮುಖಂಡರು ಸುಮ್ನೆ ಬಾಯಿಗೆ ಬಂದಂಗೆ ಏನೇನೋ ಮಾತಾಡ್ತಾರೆ. ಬಿಜೆಪಿಯವರೇ ಅದರಲ್ಲಿ ಭಾಗಿಯಾಗಿದ್ದಾರೆ. ಅವರ ತನಿಖೆ ಸಂಸ್ಥೆಯಿಂದ ಎಲ್ಲವನ್ನು ಮರೆಮಾಚುವುದೇ ಅವರ ಕೆಲಸ. ಬೇರೆ ಪಕ್ಷದವರ ಮೇಲೆ ಆರೋಪ ಮಾಡಿ, ಜನರನ್ನ ಬೇರೆ ಕಡೆ ಸೆಳೆಯುವುದೇ ಅವರ ಕೆಲಸ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.