ಬೆಂಗಳೂರು : ಐಪಿಎಲ್ 2022 ರ ಮೆಗಾ ಹರಾಜು ಬೆಂಗಳೂರಿನಲ್ಲಿ ಫೆಬ್ರವರಿ 7 ಮತ್ತು 8 ರಂದು ನಡೆಯಲಿದೆ.

ಈ ಬಗ್ಗೆ ಬಿಸಿಸಿಐ ಅಧಿಕಾರಿಯೋರ್ವರು ತಿಳಿಸಿದ್ದಾರೆ. ಕಾರಣಾಂತರಗಳಿಂದ ಈ ಬಾರಿ ಎರಡು ದಿನಗಳ ಕಾಲ ಮೆಗಾ ಹರಾಜು ನಡೆಸಲು ಬಿಸಿಸಿಐ ಚಿಂತಿಸಿದೆ. ಆದರೆ, ಸದಾ ಮುಂಬೈನಲ್ಲಿ ನಡೆಯುವ ಐಪಿಎಲ್ ಹರಾಜು ಈ ಬಾರಿ ಬೆಂಗಳೂರಿನಲ್ಲಿ ನಡೆಸುವ ನಿರೀಕ್ಷೆ ಇದೆ.

ಹರಾಜು ಪ್ರಕ್ರಿಯೆಯನ್ನು ಮುಂದಿನ ವರ್ಷ ಜನವರಿಯಲ್ಲಿ ನಿಗದಿಪಡಿಸಲಾಗಿತ್ತು. ಆದರೆ ಅಹಮದಾಬಾದ್ ಫ್ರಾಂಚೈಸಿಗೆ ಸಂಬಂಧಿಸಿದ ಒಂದು ಸಮಸ್ಯೆ ಬಗೆಹರಿಯದ ಕಾರಣ ಹರಾಜನ್ನು ಫೆಬ್ರವರಿಗೆ ಮುಂದೂಡಲಾಗಿದೆ. ಹೊಸ ತಂಡಗಳ (ಅಹಮದಾಬಾದ್, ಲಖನೌ) ಆಟಗಾರರ ಆಯ್ಕೆಯ ಗಡುವನ್ನು ಬಿಸಿಸಿಐ ಕೂಡ ವಿಸ್ತರಿಸಿದೆ ಎಂದು ತಿಳಿದುಬಂದಿದೆ.
ಹೊಸ ತಂಡಗಳಾದ ಅಹಮದಾಬಾದ್ ಗೆ ಶ್ರೇಯಸ್ ಅಯ್ಯರ್ ಮತ್ತು ಲಕ್ನೋ ಗೆ ಕೆಎಲ್ ರಾಹುಲ್ ನಾಯಕರಾಗಿ ಆಯ್ಕೆಯಾಗುವ ಸಂಭವವಿದೆ.

