ಸುದ್ದಿಒನ್ ಡೆಸ್ಕ್
ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐಪಿಎಲ್ 2023 ರ ವಿಜೇತರಾಗಿ ಹೊರಹೊಮ್ಮಿದರು. ಬಹುತೇಕ ಸೋಲಿನ ಅಂಚಿನಲ್ಲಿದ್ದ ಚೆನ್ನೈ ತಂಡವನ್ನು ಅಂತಿಮವಾಗಿ ರವೀಂದ್ರ ಜಡೇಜಾ ಗೆಲುವಿನ ದಡ ಸೇರಿಸಿದರು.ಕೊನೆಯ ಓವರ್ ಬೌಲ್ ಮಾಡಿದ ಮೋಹಿತ್ ಶರ್ಮಾ ಮೊದಲ ನಾಲ್ಕು ಎಸೆತಗಳನ್ನು ಮಿತವಾಗಿ ಬೌಲ್ ಮಾಡಿದರಾದರೂ ಕೊನೆಯ ಎರಡು ಎಸೆತಗಳನ್ನು ಎಸೆಯುವ ವೇಳೆ ನಿಯಂತ್ರಣ ಕಳೆದುಕೊಂಡರು. ಇದರೊಂದಿಗೆ ಕೊನೆಯ ಎರಡು ಬಾಲ್ ಗಳಿಗೆ ಜಡೇಜಾ ಸತತ 6 ಮತ್ತು 4 ರನ್ ಗಳಿಸಿ ಚೆನ್ನೈಗೆ ಐದನೇ ಬಾರಿಗೆ ಪ್ರಶಸ್ತಿ ತಂದುಕೊಡುವಲ್ಲಿ ಯಶಸ್ವಿಯಾದರು.
ಮುಖ್ಯಾಂಶಗಳು:
• ಚೆನ್ನೈ ಐಪಿಎಲ್ 2023 ರ ವಿಜೇತ ತಂಡ
• ಕೊನೆಯ ಓವರ್‌ನಲ್ಲಿ ಮ್ಯಾಜಿಕ್ ಮಾಡಿದ ಜಡೇಜಾ
• ಮಳೆಯಿಂದಾಗಿ ಪಂದ್ಯವನ್ನು 15 ಓವರ್‌ಗಳಿಗೆ ಮೊಟಕು.
• ಚೆನ್ನೈ ಐದನೇ ಬಾರಿಗೆ ಐಪಿಎಲ್ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
𝗗𝗢 𝗡𝗢𝗧 𝗠𝗜𝗦𝗦!
Two shots of excellence and composure!
Finishing in style, the Ravindra Jadeja way 🙌#TATAIPL | #Final | #CSKvGT pic.twitter.com/EbJPBGGGFu
— IndianPremierLeague (@IPL) May 29, 2023
ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ 2023 ರ ವಿಜೇತರಾದರು. ಐಪಿಎಲ್ 2023 ರ ಫೈನಲ್ ಪಂದ್ಯದಲ್ಲಿ ಸೋಮವಾರ ಗುಜರಾತ್ ಟೈಟಾನ್ಸ್ ವಿರುದ್ಧ ರೋಚಕ ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 5 ವಿಕೆಟ್‌ಗಳಿಂದ ಜಯಗಳಿಸಿತು.
ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ತಂಡ 214 ರನ್ ಗಳಿಸಿತು.ಚೆನ್ನೈ ತಂಡ ಕೊನೆಯ ಎಸೆತದಲ್ಲಿ ಐದು ವಿಕೆಟ್ ನಷ್ಟಕ್ಕೆ 171 ರನ್‌ಗಳ ಗುರಿಯನ್ನು ತಲುಪಿತು. ಚೆನ್ನೈ ಗೆಲುವಿಗೆ ಕೊನೆಯ 6 ಎಸೆತಗಳಲ್ಲಿ 13 ರನ್‌ಗಳ ಅಗತ್ಯವಿತ್ತು. ಈ ಹಂತದಲ್ಲಿ ಕೊನೆಯ ಓವರ್ ಬೌಲ್ ಮಾಡಿದ ಮೋಹಿತ್ ಶರ್ಮಾ ಮೊದಲ 4 ಎಸೆತಗಳಲ್ಲಿ ಕೇವಲ ಮೂರು ರನ್‌ಗಳನ್ನು ನೀಡಿ ಪಂದ್ಯದ ರೋಚಕತೆಯನ್ನು ತುತ್ತ ತುದಿಗೆ ಕೊಂಡೊಯ್ದರು. ಆದರೆ ಕೊನೆಯ ಎರಡು ಬಾಲ್ ಗಳಲ್ಲಿ ರವೀಂದ್ರ ಜಡೇಜಾ ಅವರು ಕ್ರಮವಾಗಿ 6 ಮತ್ತು 4 ರನ್ ಪಡೆಯುವ ಮೂಲಕ ಪಂದ್ಯದ ಚಿತ್ರಣವೇ ಬದಲಾಗಿ ಚೆನ್ನೈ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು.
A fairytale ending 😇
Congratulations to #TATAIPL 2023 Champion Ambati Rayudu on a remarkable IPL career 👏🏻👏🏻#TATAIPL | #Final | #CSKvGT | @RayuduAmbati pic.twitter.com/4U7N3dQdpw
— IndianPremierLeague (@IPL) May 29, 2023
ಈ ಪಂದ್ಯವನ್ನು ಗೆಲ್ಲುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಐದನೇ ಬಾರಿಗೆ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಇದುವರೆಗೆ ಮುಂಬೈ ಇಂಡಿಯನ್ಸ್ ಮಾತ್ರ ಐದು ಬಾರಿ ಪ್ರಶಸ್ತಿ ಗೆದ್ದಿದೆ. ಮತ್ತೊಂದೆಡೆ, ಗುಜರಾತ್ ಟೈಟಾನ್ಸ್ ಸತತ ಎರಡನೇ ಬಾರಿಗೆ ಫೈನಲ್ ತಲುಪಿದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.