ವಿಶ್ವದ 5ನೇ ಬ್ಯಾಟ್ಸ್ ಮನ್ ಎನಿಸಿಕೊಂಡ ಕೊಹ್ಲಿ.. ಆ ಹೊಸ ದಾಖಲೆ ಯಾವುದು ಗೊತ್ತಾ..?

IPL 2022 ಪಂದ್ಯಗಳು ಆರಂಭವಾಗಿವೆ. ಆದ್ರೆ ತಾವಿಷ್ಟ ಪಡುವ ಟೀಂಗಳ ಆಟ ಅದೇಕೋ ಕ್ರಿಕೆಟ್ ಪ್ರೇಮಿಗಳಿಗೆ ಅಷ್ಟು ಖುಷ ಕೊಟ್ಟಿಲ್ಲ. ಇದರ ನಡುವೆ ಕ್ಯಾಪ್ಟನ್ ನಿಂದ ಹೊರ ಬಂದಿರುವ ವಿರಾಟ್ ಕೊಹ್ಲಿ ಹೊಸ ದಾಖಲೆ ಮಾಡಿದ್ದಾರೆ. ಇದು ಕೊಹ್ಲಿ ಫ್ಯಾನ್ಸ್ ದಿಲ್ ಖುಷ್ ಮಾಡಿದೆ.

ಈ ಬಾರಿಯ ಐಪಿಎಲ್ ನಲ್ಲಿ ಆರ್ಸಿಬಿ ತಂಡದಿಂದ ಕೊಹ್ಲಿ ಹೊರ ಬಂದಿದ್ದಾರೆ. ಕೊಹ್ಲಿ ಅಂದ್ರೆ ಅದೊಂದು ಕ್ರೇಜ್. ಅವರ ರಾಜೀನಾಮೆ ಘೋಷಣೆಯಿಂದ ಫ್ಯಾನ್ಸ್ ಸಾಕಷ್ಟು ಬೇಸರ ತೋಡಿಕೊಂಡಿದ್ದರು. 15ನೇ ಆವೃತ್ತಿಯಲ್ಲಿ ಕೊಹ್ಲಿ ಸ್ಥಾನವನ್ನ ಫಾಫ್ ನಿರ್ವಹಿಸುತ್ತಿದ್ದಾರೆ. ಏನೇ ಬೇಸರ ಇದ್ದರು ಆರ್ಸಿಬಿ ಅನ್ನೋ ಕ್ರೇಜ್ ಗೆ ಆರ್ಸಿಬಿ ಫ್ಯಾನ್ಸ್ ಸಪೋರ್ಟ್ ಮಾಡ್ತಾನೆ ಇದ್ದಾರೆ. ಆದ್ರೆ ಈ ನಡುವೆ ಬೇಸರವೊಂದನ್ನ ಹೊರ ಹಾಕಿದ್ದಾರೆ. ಫಾಫ್ ಕೊಹ್ಲಿ ಬಳಿ ಸಲಹೆಯನ್ನಾದರೂ ಕೇಳಬಹುದಿತ್ತು. ಅದಾಗುತ್ತಿಲ್ಲ ಎಂಬುದು.

ಇದೀಗ ಫಾಫ್ ನೇತೃತ್ವದಲ್ಲಿ ಮೊದಲ ಪಂದ್ಯವನ್ನೆ ಆರ್ಸಿಬಿ ಸೋತಿದೆ. ಫಾಫ್ 57 ಎಸೆತಗಳಲ್ಲಿ 88 ರನ್ ಗಳಿಸಿದ್ದರೆ, ಮಾಜಿ ನಾಯಕ ಕೊಹ್ಲಿ 29 ಎಸೆತಗಳಲ್ಲಿ 41 ರನ್ ಗಳಿಸಿದ್ದಾರೆ. ಕೊಹ್ಲಿ ಟಿ20 ಕ್ರಿಕೆಟ್ ನಲ್ಲಿ ಒಟ್ಟು 10314 ರನ್ ಗಳಿಸಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಶ್ವದ 5ನೇ ಬ್ಯಾಟ್ಸ್ ಮನ್ ಆಗಿದ್ದಾರೆ‌.

Share This Article
Leave a Comment

Leave a Reply

Your email address will not be published. Required fields are marked *