IPL 2022: ಈಗಿನ ಆವೃತ್ತಿಗೆ ಕೆಲವು ಆಟಗಾರರು ಸೂಕ್ತವೆನಿಸಲ್ಲ : ಸುರೇಶ್ ರೈನಾ ಅನ್ ಸೋಲ್ಡ್ ಬಗ್ಗೆ ಹೊರ ಬಿತ್ತು ವಿಚಾರ..!

ಈ ಬಾರಿಯ ಐಪಿಎಲ್ ನಲ್ಲಿ ಯಾವ್ಯಾವ ತಂಡದಲ್ಲಿ ಯಾರ್ ಯಾರಿದ್ದಾರೆ ಎಂಬುದು ಈಗಾಗಲೇ ಎಲ್ಲರಿಗೂ ತಿಳಿದಿದೆ. ಇನ್ನೇನು ಕೆಲವೇ ದಿನದಲ್ಲಿ ಐಪಿಎಲ್ ಆಟ ಕೂಡ ಶುರುವಾಗಲಿದೆ. ಆದ್ರೆ ಇದರ ನಡುವೆಯೂ ಕ್ರಿಕೆಟ್ ಪ್ರಿಯರ ತಲೆಯಲ್ಲಿ ಪ್ರಶ್ನೆಯೊಂದು ಕಾಡುತ್ತಿದೆ. ಅದು ಸುರೇಶ್ ರೈನಾ ಬಗ್ಗೆ.

ಸುರೇಶ್ ರೈನಾ ಟೀಂ ಇಂಡಿಯಾದ ಮಾಜಿ ಹಾರ್ಡರ್ ಹಿಟ್ಟರ್. ಆದ್ರೆ ಈ ಬಾರಿಯ ಐಪಿಎಲ್ ನಲ್ಲಿ ಯಾವ ಟೀಂಗೂ ಮಾರಾಟವಾಗದೆ ಉಳಿದು ಬಿಟ್ಟಿದ್ದಾರೆ. ಇದು ಸಹಜವಾಗಿಯೇ ಫ್ಯಾನ್ಸ್ ಗೆ ತಲೆ ನೋವು ತರಿಸಿದೆ. ರೈನಾ ಸೋಲ್ಡ್ ಆಗದೆ ಇರಲು ಕಾರಣ ಏನು ಅಂತ ಹುಡುಕಲು ಶುರು ಮಾಡಿದ್ದಾರೆ.

ಇದೀಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಶ್ರೀಲಂಕಾದ ದಿಗ್ಗಜ ಕುಮಾರ ಸಂಗಕ್ಕಾರ ಮಾತನಾಡಿದ್ದಾರೆ. ಐಪಿಎಲ್ ನಲ್ಲಿ ಹಲವು ವರ್ಷಗಳು ಕಳೆದಂತೆ ಆಟಗಾರರು ಬದಲಾಗುತ್ತಾರೆ. ಯುವ ಆಟಗಾರರು ತಮ್ಮ ವರ್ಚಸ್ಸು ತೋರಿಸಲು ಶುರು ಮಾಡುತ್ತಾರೆ. ಆಳವಾಗಿ ನೋಡಿದರೆ ಈಗಿನ ಆವೃತ್ತಿಗೆ ಕೆಲ ಆಟಗಾರರು ಸೂಕ್ತ ಎನಿಸಲ್ಲ. ರೈತ ಐಪಿಎಲ್ ನ ದಿಗ್ಗಜನೇ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *