IPL2022: ಲಕ್ನೋ ಸೂಪರ್ ಗೈಂಟ್ಸ್ ಫ್ಯಾನ್ಸ್ ಗೆ ಖುಷಿ ಸುದ್ದಿ ನೀಡಿದ ರಾಹುಲ್ : ಇನ್ನು ಮೂರು ದಿನ ಸಾಕು ಯಾಕೆ ಗೊತ್ತಾ..?

ಐಪಿಎಲ್ ಮ್ಯಾಚ್ ಶುರುವಾಗೋದಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇದೆ. ಕ್ರಿಕೆಟ್ ಅಭಿಮಾನಿಗಳಂತು ಕಾದು ಕಿಳಿತಿದ್ದಾರೆ. ಆದ್ರೆ ಈ ಸಂತಸದ ನಡುವೆ ಲಕ್ನೋ ಟೀಂ ಅಭಿಮಾನಿಗಳಿಗೆ ಕೊಂಚ ಬೇಸರ, ಭಯವೆ ಕಾಡುತ್ತಿದ್ದು. ರಾಹುಲ್ ಯಾವಾಗ ಬರ್ತಾರೆ ಅನ್ನೋ ಭಯದಲ್ಲೇ ಕಾಯ್ತಾ ಇದ್ರು. ಇದೀಗ ಆ ಕಾಲ ಸನಿಹವಾಗಿದೆ.

ಫ್ಯಾನ್ಸ್ ಗೆ ಕೆ ಎಲ್ ರಾಹುಲ್ ಸಿಹಿ ಸುದ್ದಿ ನೀಡಿದ್ದಾರೆ. ಸದ್ಯ ಹುಷಾರಾಗಿದ್ದು, ಮೂರು ದಿನದಲ್ಲಿ ತಂಡ ಸೇರಿಕೊಳ್ಳುವ ವಿಚಾರ ತಿಳಿಸಿದ್ದಾರೆ. ಈ ಸುದ್ದಿ ಅಭಿಮಾನಿಗಳಿಗೆ ಮೃಷ್ಟಾನ್ನ ಬೋಜನ ಸವಿದಂತಾಗಿದೆ.

ಯಾಕಂದ್ರೆ ಈ ಬಾರಿಯ ಹರಾಜಿನಲ್ಲಿ ಲಕ್ನೋ ಸೂಪರ್ ಗೈಂಟ್ಸ್ ಕೆ ಎಲ್ ರಾಹುಲ್ ಅವರನ್ನ 17 ಕೋಟಿ ಕೊಟ್ಟು ಖರೀದಿ ಮಾಡಿದೆ. ಈ ಬಾರಿ ದುಬಾರಿ ಬೆಲೆಗೆ ಸೇಲ್ ಆದ ಆಟಗಾರ ಅಂದ್ರೆ ಅದು ಕೆ ಎಲ್ ರಾಹುಲ್. ಆದ್ರೆ ಕಾಲಿನ ಇಂಜೂರಿಗೆ ಒಳಗಾಗಿ ಫ್ಯಾನ್ಸ್ ಎದೆಯಲ್ಲಿ ಕಳವಳ ಸೃಷ್ಟಿಸಿದ್ದರು.

ಆದ್ರೆ ಅವ್ರು ಹುಷಾರಾಗಿದ್ದು, ಈ ಬಗ್ಗೆ ಲಕ್ನೋ ಸೂಪರ್ ಗೈಂಟ್ಸ್ ಅಧಿಕೃತ ಟ್ವಿಟ್ಟರ್ ನಲ್ಲಿ ರಾಹುಲ್ ಅವರು ವಿಡಿಯೋವೊಂದನ್ನ ಹಂಚಿಕೊಂಡಿದ್ದಾರೆ. ತಾನು ಹೊಸ ತಂಡದೊಂದಿಗೆ 15 ನೇ ಸೀಸನ್ ಆರಂಭಿಸುತ್ತಿರುವುದಕ್ಕೆ ಬಹಳ ಉತ್ಸುಕನಾಗಿದ್ದೇನೆ. ಮೂರು ದಿನದಲ್ಲಿ ತಂಡ ಸೇರಿಕೊಳ್ಳುವುದಾಗಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *