ಸ್ಟೇಡಿಯಂನಲ್ಲಿ ಕೂತು ಐಪಿಎಲ್ ನೋಡ್ಬೇಕು ಅಂತ ಆಸೆ ಇಟ್ಕೊಂಡಿದ್ರಾ : ಬಟ್ ಬ್ಯಾಡ್ ಲಕ್ ಈ ಸುದ್ದಿ ನೋಡಿ

ಕೊರೊನಾ ಕಾರಣದಿಂದಾಗಿ ಕಳೆದ ಎರಡು ವರ್ಷದಿಂದ ಕೆಲವು ಆಸೆಗಳನ್ನ ಹಾಗೇ ಕಟ್ಟಾಕಿಕೊಂಡು ಜನ ಬದುಕು ದೂಡುತ್ತಿದ್ದಾರೆ. ಅದರಲ್ಲಿ ಐಪಿಎಲ್ ಕೂಡ ಒಂದು. ಕಳೆದ ವರ್ಷವೂ ಕೊರೊನಾ ಕಾರಣದಿಂದ ಸ್ಟೇಡಿಯಂ ನಲ್ಲಿ ಕೂತು ಕ್ರಿಕೆಟ್ ನೋಡೋದಕ್ಕೆ ಆಗಿರಲಿಲ್ಲ. ಅಷ್ಟೇ ಅಲ್ಲ ಇದೇ ಕೊರೊನಾದಿಂದ ಆಟ ಕೂಡ ಅರ್ಧಕ್ಕೆ ನಿಂತಿತ್ತು.

ಈ ಬಾರಿ ಎಲ್ಲವೂ ಸರಿಯಾಗಿದೆ. ಇಷ್ಟಪಟ್ಟಂತೆ ಮನಸ್ಸಾರೆ ಕೂತು ಐಪಿಎಲ್ ನೋಡಬಹುದು ಎಂಬ ಆಸೆ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆ ಇಟ್ಟುಕೊಂಡಿದ್ದರು. ಆದ್ರೆ ಮಹಾರಾಷ್ಟ್ರ ಸರ್ಕಾರ ಇದಕ್ಕೆ ಬ್ರೇಕ್ ಹಾಕಿದೆ.

ಮಹಾರಾಷ್ಟ್ರದಲ್ಲಿ ಕೊರೊನಾ ಕೇಸ್ ಗಳು ಹೆಚ್ಚಾಗುತ್ತಿದ್ದು, ಕ್ರೀಡಾಂಗಣಕ್ಕೆ ಫ್ಯಾನ್ಸ್ ಗೆ ನಿರ್ಬಂಧ ಹೇರಲಾಗಿದೆ. ಇದಕ್ಕೂ ಮುಂಚೆ ಶೇಕಡ 50 ರಷ್ಟು ಜನ ಕ್ರೀಡಾಂಗಣದಲ್ಲಿ ಕೂತು ನೋಡುವ ಅವಕಾಶಕ್ಕೆ ಅಸ್ತು ಎಂದಿತ್ತು. ಆದ್ರೆ ಈಗ ಮತ್ತೆ ಕೊರೊನಾ ಕೇಸ್ ಗಳು ಏರಿಕೆಯಾಗುತ್ತಿದ್ದು, ಮತ್ತೆ ಸಮಸ್ಯೆ ಆಗೋದು ಬೇಡ ಎಂಬ ಕಾರಣಕ್ಕೆ ಮಹಾರಾಷ್ಟ್ರ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *