IPL2022 ಮ್ಯಾಚ್ ಶುರುವಾಗೋದಕ್ಕೆ ದಿನಗಣನೆ ಆರಂಭವಾಗಿದೆ. ಆದ್ರೆ ಈ ಮಧ್ಯೆ ಕೆಲವೊಂದು ತಂಡಗಳಿಗೆ ಪಂದ್ಯ ಆರಂಭಕ್ಕೂ ಮುನ್ನವೇ ಕೆಲವೊಂದು ಸಮಸ್ಯೆ ಎದುರಾಗಿದೆ. ಪಂದ್ಯವಾಡಲು ಕೆಲವೊಂದು ಆಟಗಾರರು ಅಲಭ್ಯವಾಗಿದ್ದಾರೆ. ಕೆಕೆಆರ್ ತಂಡಕ್ಕೂ ಇಂಥದ್ದೊಂದು ಆಘಾತ ಎದುರಾಗಿದೆ.

ಕೆಕೆಆರ್ ತಂಡದಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವ ವಹಿಸಿಕೊಂಡಿದ್ದಾರೆ. ಉಳಿದಂತೆ ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ, ಶೆಲ್ಡನ್ ಜಾಕ್ಸನ್, ಅಜಿಂಕ್ಯಾ ರಹಾನೆ, ರಿಂಕು ಸಿಂಗ್, ಆಂಡ್ರೆ ರಸೆಲ್, ಸುನಿಲ್ ನರೈನ್, ಪ್ಯಾಟ್ ಕಮ್ಮಿನ್ಸ್, ಶಿವಂ ಮಾವಿ ಆಟಗಾರರಿದ್ದಾರೆ.

ಆದರೆ ಈಗ ವೇಗದ ಬೌಲರ್ ಪ್ಯಾಟ್ ಕಮ್ಮಿನ್ಸ್ ಅವರನ್ನ ಕೆಕೆಆರ್ 7.25 ಕೋಟಿಗೆ ಖರೀದಿ ಮಾಡಿತ್ತು ಹಾಗೂ ಬ್ಯಾಟ್ಸ ಮನ್ ಆರೋನ್ ಫಿಂಚ್ ಅವರನ್ನು 1.50 ಕೋಡಿಗೆ ಖರೀದಿ ಮಾಡಿತ್ತು. ಆದ್ರೆ ಈ ಬಾರಿಯ ಮ್ಯಾಚ್ ಗೆ ಈ ಇಬ್ಬರು ಅಲಭ್ಯರಾಗಲಿದ್ದಾರೆ. ಈ ಬಗ್ಗೆ ಕೆಕೆಆರ್ ಮೆಂಟರ್ ಆಗಿರುವ ಡೇವಿಡ್ ಹಸ್ಸಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ್ದಾರೆ. ಮೊದಲ ಐದು ಪಂದ್ಯಗಳಲ್ಲಿ ಇಬ್ಬರು ಇರುವುದಿಲ್ಲ. ಇದು ಕೆಕೆಆರ್ ತಂಡಕ್ಕೆ ಮೊದಲ ಸೋಲಾಗಬಹುದು ಎಂಬ ಊಹೆ ಮಾಡಲಾಗಿದೆ. ಯಾಕಂದ್ರೆ ಈ ಇಬ್ಬರು ಆಟಗಾರರು ಕೆಕೆಆರ್ ತಂಡಕ್ಕೆ ಬಹಳ ಮುಖ್ಯವಾಗಿದ್ದರು.

