IPhone16 ಫೀಚರ್ಸ್ ಗೆ ಫಿದಾ ಆದ್ರೂ ಐಫೋನ್ ಪ್ರಿಯರು..!
ಐಫೋನ್ ಅಂದ್ರೆ ಯಾರಿಗೆ ತಾನೇ ಇಷ್ಟ ಆಗಲ್ಲ ಹೇಳಿ. ಅದರಲ್ಲೂ ಕೆಲವೊಂದಿಷ್ಟು ಮಂದಿ ಐಫೋನ್ ಪ್ರಿಯರು ಎಷ್ಟು ಕ್ರೇಜ್ ಹೊಂದಿದ್ದಾರೆ ಅಂದ್ರೆ ಹೊಸ ಹೊಸ ಮಾಡೆಲ್ ಗಳಿಗೆ ಮಾರು ಹೋಗುತ್ತಾರೆ. ಪ್ರತಿ ವರ್ಷ ರಿಲೀಸ್ ಆಗುವ ಹೊಸ ಫೋನ್ ಗಳನ್ನೇ ಖರೀದಿ ಮಾಡುತ್ತಾರೆ. ಅದರಲ್ಲೂ ಲಕ್ಷ ಲಕ್ಷ ಬೆಲೆಯಿದ್ದರು ಕೂಡ ತಲೆ ಕೆಡಿಸಿಕೊಳ್ಳುವುದಿಲ್ಲ. ಇತ್ತೀಚೆಗಷ್ಟೇ ರಿಲೀಸ್ ಐಫೋನ್ 16 ರಿಲೀಸ್ ಆಗಿದೆ.
ಈಗ ರಿಲೀಸ್ ಆಗಿರುವ ಐಫೋನ್ 16 ವಿಶೇಷತೆಗೆ ಗ್ರಾಹಕರು ಮಾರು ಹೋಗಿದ್ದಾರೆ. ಗದರಾಹಕರ ಡಿಮ್ಯಾಂಡ್ ನಂತೆ ಐಫೋನ್ ಸಂಸ್ಥೆ ಕೂಡ ಸಿರೀಸ್ ರಿಲೀಸ್ ಮಾಡಿತ್ತು. 16 ಸಿರೀಸ್ ವಿಶಿಷ್ಠ ಮತ್ತು ವೈವಿಧ್ಯಮಯವಾದ ಫೀಚರ್ಸ್ ಹೊಂದಿದೆ. ಆಪಲ್ ಇಂಟೆಲಿಜೆನ್ಸ್ ನೊಂದಿಗೆ ಬರುತ್ತಿರುವ ಐಫೋನ್ ಕ್ಯಾಮರಾ ಕಂಟ್ರೋಲ್ ಹಾಗೂ ಕ್ಯಾಪ್ಚರ್ ಬಟನ್ ನೊಂದಿಗೆ ಕಾಲಿಟ್ಟಿದೆ. ಸದ್ಯಕ್ಕೆ ಐಫೋನ್ 16 ದರಗಳು 79,900ನಿಂದ ಆರಂಭವಾಗುತ್ತಿವೆ.
ಐಫೋನ್ 16 ಮೊಬೈಲ್ 6.1 ಇಂಚಿನ ಡಿಸ್‌ಪ್ಲೇ ಅನ್ನು ಹೊಂದಿದ್ದು, ಅದೇ ರೀತಿ ಐಫೋನ್ 16 ಪ್ಲಸ್ ಫೋನ್ 6.7 ಇಂಚಿನ ಡಿಸ್‌ಪ್ಲೇ ಹೊಂದಿರಲಿದೆ. ಅಂದಹಾಗೆ ಆ್ಯಪಲ್ ಐಫೋನ್ 16 ಮೊಬೈಲ್‌ಗಳನ್ನು ಏರೋಸ್ಪೇಸ್ ದರ್ಜೆಯ ಅಲ್ಯೂಮಿನಿಯಂನಿಂದ ತಯಾರಿಸಲಾಗಿದೆ. A18 ಬಯೋನಿಕ್ ಚಿಪ್ ಪ್ರೊಸೆಸರ್ ಸಾಮರ್ಥ್ಯವನ್ನು ಹೊಂದಿರಲಿದೆ. ಅಲ್ಲದೇ ಇದು ಐಫೋನ್ 15 ನಲ್ಲಿನ CPU ಗಿಂತ 30 ಪ್ರತಿಶತದಷ್ಟು ವೇಗ ಪಡೆದಿರುತ್ತದೆ. ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರಲಿದೆ. ಅವುಗಳಲ್ಲಿ ಪ್ರಾಥಮಿಕ ಕ್ಯಾಮೆರಾವು 48 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಇದರೊಂದಿಗೆ 12 ಮೆಗಾ ಪಿಕ್ಸಲ್‌ನ ಟೆಲಿಫೋಟೋ ಲೆನ್ಸ್ ಇರಲಿದೆ. ಅಷ್ಟೇ ಅಲ್ಲದೆ ಅಲ್ಟ್ರಾವೈಡ್ ಕ್ಯಾಮೆರಾವನ್ನು ಸಹ ಇದರಲ್ಲಿ ಅಳವಡಿಸಲಾಗಿದೆ.