ಕೇಂದ್ರ ಬಜೆಟ್ 2025ರಲ್ಲಿ ದೇಶದ ಎಲ್ಲಾ ಸರ್ಕಾರಿ ಶಾಲೆಗಳಿಗೆ ಇಂಟರ್ ನೆಟ್ ಸೌಲಭ್ಯವನ್ನು ಒದಗಿಸುವ ಯೋಜನೆಯನ್ನು ಘೋಷಣೆ ಮಾಡಿದೆ. ಶಿಕ್ಷಣ ವಲಯದಲ್ಲಿ ಸಂಪೂರ್ಣ ಬದಲಾವಣೆ ತರುವ ವಿಚಾರಕ್ಕೆ ಎಲ್ಲಾ ಸರ್ಕಾರಿ ಸೆಕೆಂಡರಿ ಸ್ಕೂಲ್ ಗಳಿಗೆ ಬ್ರಾಡ್ ಬ್ಯಾಂಡ್ ಕನೆಕ್ಟಿವಿಟಿ ಕಲ್ಪಿಸಲಾಗಿದೆ. ಒಟ್ಟು 50 ಸಾವಿರ ಟೆಂಕರಿಂಗ್ ಲ್ಯಾಬ್ ಗಳನ್ನು ಸರ್ಕಾರಿ ಶಾಲೆಗಳಲ್ಲಿ ಸ್ಥಾಪಿಸಲಾಗುವುದು. ಈ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿನ ಎಲ್ಲಾ ಸರ್ಕಾರಿ ಶಾಲೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಬ್ರಾಂಡ್ ಬ್ಯಾಂಡ್ ಸಂಪರ್ಕವನ್ನು ವಿಸ್ತರಿಸಲಾಗುವುದು.

ಈ ಕಾರ್ಯಕ್ರಮ ಭಾರತ್ ನೆಟ್ ಯೋಜನೆಯ ಭಾಗವಾಗಿರುತ್ತದೆ. ಡಿಸೆಂಬರ್ 2024ರ ಹೊತ್ತಿಗೆ 6.92 ಲಕ್ಷ ಕಿಲೋ ಮೀಟರ್ ಆಪ್ಟಿಕಲ್ ಫೈಬರ್ ಕೇಬಲ್ ಹಾಕಲಾಗಿದೆ. 2.14 ಲಕ್ಷ ಗ್ರಾಮ ಪಂಚಾಯತಿಗಳು ಈಗ ಈ ಸೇವೆಗೆ ಸಿದ್ಧವಾಗುವೆ. ಇದು ದೂರದ ಪ್ರದೇಶಗಳಿಗೆ ತುಂಬಾ ಉಪಕಾರಿಯಾಗಿದೆ. ಇದರ ಮೂಲಕ ವಿದ್ಯಾರ್ಥಿಗಳ ಕಲಿಕೆಯಲ್ಲಿ ವೈಜ್ಞಾನಿಕತೆ ಮತ್ತು ಕುತೂಹಲವನ್ನು ಹೆಚ್ಚಿಸುವ ಉದ್ದೇಶವಿದೆ ಎಂದು ಹೇಳಲಾಗಿದೆ. ಅದು ಮಾತ್ರವಲ್ಲ ಸ್ವತಂತ್ರ ಭಾರತ ಭಾಷಾ ಪುಸ್ತಕದ ಯೋಜನೆಯನ್ನು ತರಲಾಗುವುದು. ಇದು ವಿದ್ಯಾರ್ಥಿಗಳಿಗೆ ವಿಷಯಗಳ ಅವರದ್ದೇ ಭಾಷೆಯಲ್ಲಿ ಅರ್ಥವಾಗಲು ಸುಲಭವಾಗುತ್ತದೆ ಎಂದು ಹೇಳಿದ್ದಾರೆ.
ಐಐಟಿಗಳನ್ನು ಮತ್ತಷ್ಟು ವಿಸ್ತರಿಸುವ ಬಗ್ಗೆಯೂ ನಿರ್ಮಲಾ ಸೀತರಾಮನ್ ಪ್ರಸ್ತಾಪಿಸಿದ್ದಾರೆ. ಕಳೆದ 10 ವರ್ಷಗಳ 23 ಐಐಟಿಗಳಲ್ಲಿ ಕಲಿಯುವ ವಿದ್ಯಾರ್ಥಿಗಳ ಸಂಖ್ಯೆ ಶೇಕಡ 100ರಷ್ಟು ಹೆಚ್ಚಾಗಿದೆ. ಇದಕ್ಕಾಗಿ ಹೆಚ್ಚಿನ ಮೂಲಸೌಕರ್ಯಗಳನ್ನು ಕಲ್ಪಿಸಲಾಗುವುದು. 2024ರ ನಂತರ 5 ಐಐಟಿಗಳನ್ನು ಸ್ಥಾಪಿಸಲಾಗಿದ್ದು, ಅಲ್ಲಿ 6,500 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ ಎಂದು ಸಚಿವೆ ತಿಳಿಸಿದ್ದಾರೆ. ಇದರ ಜೊತೆಗೆ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವವರಿಗಾಗಿ ಸಾಮಾಜಿಕ ಭದ್ರತೆಯ ಯೋಜನೆಯನ್ನು ಕಲ್ಪಿಸಲಾಗುವುದು ಎಂದಿದ್ದಾರೆ.


