ಬೆಂಗಳೂರು: ಒಳಮೀಸಲಾತಿಯನ್ನ ಜಾರಿ ಮಾಡದೆ ಹುದ್ದೆಗಳ ನೇಮಕಾತಿ ಮಾಡಬೇಕು ಎನ್ನುತ್ತಿದೆ ಸರ್ಕಾರ. ಆದ್ರೆ ಮೊದಲು ಒಳಮೀಸಲಾತಿ ಜಾರಿ ಮಾಡಿ ಎಂದು ಸಮಿತಿ ಪಟ್ಟು ಹಿಡಿದಿದೆ. ಇಂದು ಕರ್ನಾಟಕ ಸಮಸ್ತ ಒಳಮೀಸಲಾತಿ ಸಮಿತಿ ಸುದ್ದಿಗೋಷ್ಠಿ ನಡೆಸಿ, ಸರ್ಕಾರಕ್ಕೆ ಡೆಡ್ಲೈನ್ ನೀಡಿದೆ.
ಒಳಮೀಸಲಾತಿ ಸಮಿತಿಯೂ ಸರ್ಕಾರದ ನಿರ್ಧಾರವನ್ನು ಖಂಡಿಸಿದ್ದು, ಗುರುವಾರ 12ನೇ ತಾರೀಖಿನಂದು ಬೃಹತ್ ಪ್ರತಿಭಟನೆಗೆ ಕರೆ ನೀಡಲಾಗಿದೆ. ಫೆಬ್ರವರಿ 26ರ ಸಂಪುಟದ ಉದ್ಯೋಗ ಭರ್ತಿ ತೀರ್ಮಾನಕ್ಕೆ ವಿರೋಧಿಸಿ, ಒಳಮೀಸಲಾತಿ ತಪ್ಪಿಸುವ ಹುನ್ನಾರ ಅಂತ ಟೀಕಿಸಿದೆ. ಈ ಆದೇಶ ಹಿಂಪಡೆಯದಿದ್ದರೆ ಸಾಮಾಜಿಕ ನ್ಯಾಯದ ಬಗ್ಗೆ ಮಾತನ್ನಾಡುವ ನೈತಿಕತೆ ಸಿಎಂ ಸಿದ್ದರಾಮಯ್ಯ ಅವರಿಗೆ ಇರುವುದಿಲ್ಲ ಎಂದು ಮಾರಸಂದ್ರ ಮುನಿಯಪ್ಪ ಕಟುವಾಗಿ ಟೀಕಿಸಿದ್ದಾರೆ.
ದಲಿತ ಒಳಮೀಸಲಾತಿ ನೀಡಿಕೆಯು ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಜಟಾಪಟಿಗೆ ಕಾರಣವಾಗಿದೆ. ಸರ್ಕಾರ ಒಲಮೀಸಲಾತಿ ನೀಡದೇ ಸರ್ಕಾರಿ ನೌಕರರ ನೇಮಕಾತಿಗೆ ಮುಂದಾಗಿದೆ. ಇದಕ್ಕೆ ದಲಿತ ಎಡಗೈ ನಾಯಕರು ವಿರೋಧಿಸುತ್ತಿದ್ದಾರೆ. ಒಳ ಮೀಸಲಾತಿ ಹೋರಾಟಕ್ಕೂ ಡೆಡ್ಲೈನ್ ನೀಡಿದೆ.





