Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಭಾರತೀಯರ ಜನಮಾನಸದಲ್ಲಿ ಅಪಾರ ಜನಪ್ರಿಯತೆ ಗಳಿಸಿ ಮಿಂಚಿ ಮರೆಯಾದ ಕಂಪನಿಗಳ ಆಸಕ್ತಿಕರ ಮಾಹಿತಿ…!

Facebook
Twitter
Telegram
WhatsApp

ಸುದ್ದಿಒನ್

ವಿಶ್ವ ಮಾರುಕಟ್ಟೆಯಲ್ಲಿ ಹಲವಾರು ಕಂಪನಿಗಳು ಹುಟ್ಟಿಕೊಂಡಿವೆ. ಮತ್ತು ಅವುಗಳಲ್ಲಿ ಕೆಲವು ಕಂಪನಿಗಳು ದಶಕಗಳಿಂದ ಸಾಟಿಯಿಲ್ಲದ ಸಂಸ್ಥೆಗಳಾಗಿ ಬೆಳೆದಿವೆ. ಹಾಗೆಯೇ ಕಾಲದ ಗರ್ಭದಲ್ಲಿ ಲೀನವಾಗಿವೆ. ಅಂತಹ ವರ್ಗಕ್ಕೆ ಸೇರಿದ ಟಾಪ್ 5 ಭಾರತೀಯ ಕಂಪನಿಗಳ ಕುರಿತು ಹೆಚ್ಚಿನ ವಿವರಗಳನ್ನು ಈ ಲೇಖನದಲ್ಲಿ ತಿಳಿಯೋಣ.

ಪ್ರೀಮಿಯರ್ ಆಟೋಮೊಬೈಲ್ಸ್

19 ನೇ ಶತಮಾನದಲ್ಲಿ ಭಾರತದಲ್ಲಿ ಮಿಂಚಿದ ಪ್ರೀಮಿಯರ್ ಆಟೋಮೊಬೈಲ್ ಕಂಪನಿಯು ಮುಂಬೈನಲ್ಲಿ ಮೊದಲ ಕಾರು ದುರಸ್ತಿ ಕಾರ್ಯಾಗಾರವಾಗಿ (Repair workshop) ಪ್ರಾರಂಭವಾಯಿತು. ಆ ನಂತರ ಅದು ಆಟೋ ಮೊಬೈಲ್ ಕ್ಷೇತ್ರವನ್ನು ಪ್ರವೇಶಿಸಿತು.  ಇದರ ಭಾಗವಾಗಿ ಕಂಪನಿಯು 1970 ರಲ್ಲಿ ‘ಪ್ರೀಮಿಯರ್ ಪದ್ಮಿನಿ’ ಎಂಬ ಅದ್ಭುತ ಕಾರನ್ನು ಪರಿಚಯಿಸಿ ಭಾರತೀಯರ ಜನಮಾನಸದಲ್ಲಿ ಪ್ರತ್ಯೇಕ ಸ್ಥಾನವನ್ನು ಪಡೆದು 2004 ರವರೆಗೆ ಮಾರುಕಟ್ಟೆಯಲ್ಲಿ ವ್ಯಾಪಕವಾದ ಮಾರುಕಟ್ಟೆಯನ್ನು ಹೊಂದಿತ್ತು.

ಸುದೀರ್ಘ ಕಾಲದವರೆಗೆ ಮಾರುಕಟ್ಟೆಯಲ್ಲಿ ಜನರ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ವಿಫಲವಾದ ಈ ಕಂಪನಿಯು ಹೊಸ ಕಾರುಗಳನ್ನು ಪರಿಚಯಿಸುವಲ್ಲಿ ಯಶಸ್ವಿಯಾಗಲಿಲ್ಲ. ಆ ನಂತರ 1980ರಲ್ಲಿಯೇ ಪ್ರೀಮಿಯರ್ ಪದ್ಮಿನಿ ನಿರ್ಮಾಣ ನಿಂತು ಹೋಯಿತು. ಕಂಪನಿಯು 2004 ರಲ್ಲಿ ಸಂಪೂರ್ಣವಾಗಿ ಆಟೋಮೊಬೈಲ್ ಕ್ಷೇತ್ರದಿಂದ ನಿರ್ಗಮಿಸಿತು.

ಗೋಲ್ಡ್ ಸ್ಪಾಟ್ (Gold spot)

ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯ ಕಂಪನಿಗಳಲ್ಲಿ ಒಂದಾದ gold spot ಕಾಲಕ್ಕೆ ತಕ್ಕಂತೆ ಪ್ರತಿಸ್ಪರ್ಧಿಗಳನ್ನು ಎದುರಿಸಲು ಸಾಧ್ಯವಾಗಲಿಲ್ಲ. 1950ರಲ್ಲಿ ಯುವಕರ ನೆಚ್ಚಿನ ಬ್ರ್ಯಾಂಡ್ ಎನಿಸಿಕೊಂಡಿದ್ದ ಈ ತಂಪು ಪಾನೀಯ ‘ಪಾರ್ಲೆ’ ಕಂಪನಿಗೆ ಸೇರಿದ್ದು ಎಂಬುದು ಗಮನಾರ್ಹ. 1960 ಮತ್ತು 70 ರ ದಶಕದಲ್ಲಿ ಬಹಳ ಜನಪ್ರಿಯವಾಗಿದ್ದರೂ, ಕೋಕ್ ಮತ್ತು ಪೆಪ್ಸಿ ಕಂಪನಿಯ ತಂಪು ಪಾನೀಯಗಳೊಂದಿಗೆ ಸ್ಪರ್ಧಿಸಲು ಸಾಧ್ಯವಾಗದ ಕಾರಣ 2000 ದ ಆರಂಭದಲ್ಲಿ ಕಂಪನಿಯು ಉತ್ಪನ್ನವನ್ನು ನಿಲ್ಲಿಸಿತು.

ಹೆಚ್ ಎಂ ಟಿ (HMT)

ಆಧುನಿಕ ಕಾಲ ಘಟ್ಟದಲ್ಲಿ HMT ವಾಚ್‌ಗಳ ಬಗ್ಗೆ ಜನರಿಗೆ ಅಷ್ಟಾಗಿ ತಿಳಿದಿಲ್ಲ. ಆದರೆ ಒಂದಾನೊಂದು ಕಾಲದಲ್ಲಿ ಈ ಬ್ರ್ಯಾಂಡ್ ಭಾರತೀಯರ ಪಾಲಿಗೆ ಬಹಳಷ್ಟು ಚಿರಪರಿಚಿತ. ಈ ಕಂಪನಿಯು ಭಾರತ ಸರ್ಕಾರದ ಆಶ್ರಯದಲ್ಲಿ 1953 ರಲ್ಲಿ ನಮ್ಮ ದೇಶದಲ್ಲಿ ಪ್ರಾರಂಭವಾಯಿತು ಮತ್ತು 2016 ರವರೆಗೆ ಮುಂದುವರೆಯಿತು. ಅದರಲ್ಲಿ ಹೆಚ್ ಎಂಟಿ ಜನತಾ ವಾಚ್ ಹಲವರ ಅಚ್ಚುಮೆಚ್ಚಿನದ್ದಾಗಿತ್ತು. ನಮ್ಮ ಭಾರತೀಯರಲ್ಲಿ ಮದುವೆ ಮತ್ತಿತರ ಶುಭ ಸಮಾರಂಭಗಳಲ್ಲಿ ಈ ವಾಚನ್ನು ಉಡುಗೊರೆಯಾಗಿ ನೀಡುತ್ತಿದ್ದರು. ಆದರೆ ಬದಲಾಗುತ್ತಿರುವ ಕಾಲಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದೆ ಹೊಸ ಉತ್ಪನ್ನಗಳಿಗೆ ಸರಿಯಾದ ಪೈಪೋಟಿ ನೀಡಲು ಸಾಧ್ಯವಾಗದೆ 2016ರಲ್ಲಿ ಕಣ್ಮರೆಯಾಯಿತು.

ರಾಜ್‌ದೂತ್ ಮೋಟಾರ್ ಸೈಕಲ್‌ಗಳು (Rajdooth motorcycles)

ಆಟೋ ಮೊಬೈಲ್ ಮಾರುಕಟ್ಟೆಯಲ್ಲಿ ಇತಿಹಾಸವನ್ನು ಸೃಷ್ಟಿಸಿದ ರಾಜ್‌ದೂತ್ ಮೋಟಾರ್ ಸೈಕಲ್‌ಗಳು 1960 ರಿಂದ 2005
ಯುವಕರನ್ನು ಆಕರ್ಷಿಸಿದ್ದವು. ಈ ಬೈಕ್‌ಗಳನ್ನು ಪ್ರಮುಖ ಎಂಜಿನಿಯರಿಂಗ್ ಕಂಪನಿ ವಿನ್ಯಾಸಗೊಳಿಸಿದೆ. ಹಾಗಾಗಿ ಅವುಗಳಲ್ಲಿ ಹೆಚ್ಚಿನವುಗಳು ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿದ್ದವು. 1973ರಲ್ಲಿ  ತೆರೆಕಂಡ ಬಾಬಿ ಸಿನಿಮಾದಿಂದ ಈ ಬೈಕ್ ಮತ್ತಷ್ಟು ಹೆಚ್ಚು ಜನಪ್ರಿಯವಾಯಿತು. ಆದರೆ ಮಾರುಕಟ್ಟೆಯಲ್ಲಿನ ಆಧುನೀಕರಣ ಮತ್ತು ಇತರ ಕಾರಣಗಳಿಂದ ಕಂಪನಿಯು ರಾಜದೂತ್ ಉತ್ಪಾದನೆಯನ್ನು ನಿಲ್ಲಿಸಿದೆ. ಆಗಾಗ ಅಲ್ಲೊಂದು ಇಲ್ಲೊಂದು ಕಾಣಿಸುತ್ತದೆ.

ಅಂಬಾಸಿಡರ್ (Ambassador)

ಭಾರತೀಯ ವಾಹನ ಉದ್ಯಮದ ಸಂಕೇತವಾಗಿ ಜನಪ್ರಿಯವಾಗಿದ್ದ ಅಂಬಾಸಿಡರ್ ಕಾರುಗಳು ಜನಸಾಮಾನ್ಯರಿಂದ ಹಿಡಿದು ಸರ್ಕಾರಿ ಉದ್ಯೋಗಿಗಳವರೆಗೂ ವ್ಯಾಪಕವಾಗಿ ಬಳಸುತ್ತಿದ್ದರು. ಈಗಲೂ ಅಲ್ಲೊಂದು ಇಲ್ಲೊಂದು ಕಾಣಸಿಗುವ ಈ ಕಾರುಗಳು ಒಮ್ಮೆಲೆ ಅವ್ಯಾಹತವಾಗಿ ಮಾರಾಟವಾಗುತ್ತಿದ್ದವು. ವಿನ್ಯಾಸ ಮತ್ತು ವೈಶಿಷ್ಟ್ಯಗಳ ವಿಷಯದಲ್ಲಿ ಅತ್ಯುತ್ತಮವಾಗಿರುವ ಈ ಕಾರು ಭಾರತೀಯ ರಸ್ತೆಯ ಸ್ಥಿತಿಗೆ ಸೂಕ್ತವಾಗಿದ್ದವು. ಆದರೆ, ಕಾಲಕ್ರಮೇಣ ಉದ್ಭವಿಸಿದ ಪೈಪೋಟಿ ಹಾಗೂ ಆಧುನಿಕತೆಯಿಂದಾಗಿ 2014 ರಲ್ಲಿ ಇವುಗಳ ಉತ್ಪಾದನೆಯೂ ನಿಂತುಹೋಯಿತು.

ಕಿಂಗ್‌ಫಿಶರ್ ಏರ್‌ಲೈನ್ಸ್ (Kingfisher Airlines)

2005 ರಲ್ಲಿ ವಿಜಯ್ ಮಲ್ಯ ಅವರು ಕಂಪನಿಯನ್ನು ಪ್ರಾರಂಭಿಸಿದರು. ಅವರು
ಮುಂಬೈ ಕೇಂದ್ರ ಕಚೇರಿಯೊಂದಿಗೆ ಭಾರತದಲ್ಲಿ ಅತಿ ಕಡಿಮೆ ಅವಧಿಯಲ್ಲಿ ಹೆಸರು ಗಳಿಸುವಲ್ಲಿ ಯಶಸ್ವಿಯಾದರು. ಈ ಸಂಸ್ಥೆಯು ಪ್ರಯಾಣಿಕರಿಗೆ ಆರಾಮದಾಯಕ ಸೌಲಭ್ಯಗಳನ್ನು ಒದಗಿಸುವ ಮೂಲಕ ವಿಮಾನಯಾನ ಉದ್ಯಮದಲ್ಲಿ ದಾಖಲೆಯನ್ನು ಸೃಷ್ಟಿಸಿದೆ. ಅದರ ನಂತರ ಆರ್ಥಿಕ ತೊಂದರೆಯಿಂದಾಗಿ 2012 ರಲ್ಲಿ ತನ್ನ ಚಟುವಟಿಕೆಗಳನ್ನು ನಿಲ್ಲಿಸಿತು. ನಂತರ 2013 ರಲ್ಲಿ, ಕಂಪನಿಯು ಸಂಪೂರ್ಣ ದಿವಾಳಿತನವನ್ನು ಘೋಷಿಸಿತು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸಾಹಿತಿ ಬಿ.ಎಲ್.ವೇಣು ನಿವಾಸಕ್ಕೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭೇಟಿ

ಸುದ್ದಿಒನ್, ಚಿತ್ರದುರ್ಗ, ಮೇ. 02 :  ಖ್ಯಾತ ಸಾಹಿತಿ, ಚಿಂತಕ ಬಿ.ಎಲ್.ವೇಣು ಅವರ ನಿವಾಸಕ್ಕೆ ಸ್ಥಳೀಯ ಶಾಸಕ ಕೆ.ಸಿ.ವೀರೆಂದ್ರ ಪಪ್ಪಿ ಅವರು ಭೇಟಿ ಮಾಡಿ, ಆಶೀರ್ವಾದ ಪಡೆದು, ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಲಹೆಗಳನ್ನು ಪಡೆದರು.

ಹೆಚ್ಚುತ್ತಿರುವ ಬಿಸಿಲ ಝಳ : ಸಾರ್ವಜನಿಕರು ಅನುಸರಿಸಬೇಕಾದ ಸರಳ ಉಪಾಯಗಳ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ಎಸ್.ನಾಗಸಮುದ್ರ

ಚಿತ್ರದುರ್ಗ. ಮೇ.02: ರಾಜ್ಯಾದ್ಯಂತ ಬಿಸಿಲಬೇಗೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಇನ್ನೂ ಕೆಲವು ದಿನಗಳ ಕಾಲ ಉಷ್ಣ ಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಿಸಿಲ ಝಳವು ಮನುಷ್ಯನ ಆರೋಗ್ಯದ ಮೇಲೆ ತೀವ್ರತರವಾದ

ಕಾರ್ಮಿಕರು ಕೆಲಸದ ಜೊತೆ ಆರೋಗ್ಯದ ಕಡೆಗೂ ಹೆಚ್ಚಿನ ಗಮನ ಕೊಡಬೇಕು : ನ್ಯಾಯಾಧೀಶೆ ಬಿ.ಗೀತ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮೇ. 02 : ಅನೇಕ ಸೌಲಭ್ಯಗಳಿಂದ ವಂಚಿತರಾಗಿರುವ ಅಸಂಘಟಿತ ಕಾರ್ಮಿಕರಿಗೆ ಹಕ್ಕುಗಳ ಕುರಿತು ಕಾನೂನು ಜಾಗೃತಿ

error: Content is protected !!