ಅಶ್ವಿನಿ ಪುನೀತ್ ರಾಜ್‍ಕುಮಾರ್ ಬಗ್ಗೆ ಅವಹೇಳನ : ದರ್ಶನ್, ಸುದೀಪ್ ಅಭಿಮಾನಿ ಹೆಸರಲ್ಲಿ ಪೋಸ್ಟ್

1 Min Read

 

ಕಳೆದ ರಾತ್ರಿಯಿಂದ ಸೋಷಿಯಲ್ ಮೀಡಿಯಾದಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ವಿಚಾರವೇ ಓಡಾಡುತ್ತಿದೆ. ಗಜಪಡೆ ಎಂಬ ಫೇಸ್ ಬುಕ್ ಪೇಜ್ ಒಂದರಲ್ಲಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಬಗ್ಗೆ ಅವಹೇಳನ ಮಾಡಲಾಗಿದೆ‌. ಬೆಳಗ್ಗೆಯಾಗುವುದರೊಳಗೆ ಆ ವಿಚಾರ ಸಾಕಷ್ಟು ವಿರೋಧಕ್ಕೆ ಕಾರಣವಾಗಿದೆ. ಪುನೀತ್ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಮೊದಲು ತಪ್ಪಿತಸ್ಥರನ್ನು ಕಂಡು ಹಿಡಿದು ಶಿಕ್ಷೆ ನೀಡುವಂತೆ ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ.

ದರ್ಶನ್ ಮತ್ತು ಸುದೀಪ್ ಹೆಸರಲ್ಲಿ ಈ ಒಂದು ಅವಹೇಳನಕಾರಿಯಾದಂತ ಪೋಸ್ಟರ್ ಹರಿದಾಡುತ್ತಿದೆ. ಮೊದಲಿಗೆ ಗಜಪಡೆ ಪೇಜ್ ನಲ್ಲಿ ಅಶ್ವಿನಿ ಅವರ ಬಗ್ಗೆ ಹಾಕಲಾಗಿತ್ತು. ಅದರಲ್ಲಿ ದರ್ಶನ್ ಅವರ ಫೋಟೋ ಇತ್ತು. ಇಂದೀಗ ಮಧ್ಯಾಹ್ನದ ವೇಳೆಗೆ ಸುದೀಪ್ ಅವರ ಅಭಿಮಾನಿ ಹೆಸರಲ್ಲಿ ಅಂತದ್ದೇ ಪೋಸ್ಟ್ ಹಾಕಿದ್ದಾರೆ. ಇದರ ವಿರುದ್ಧ ಅಭಿಮಾನಿಗಳು ಆಕ್ರೋಸಗೊಂಡಿದ್ದಾರೆ. ಇದು ಈಗಾಗಲೇ ಅಶ್ವಿನಿ ಅವರ ಗಮನಕ್ಕೂ ಬಂದಿದೆ, ದರ್ಶನ್ ಅವರ ಗಮನಕ್ಕೂ ಬಂದಿದೆ, ಸುದೀಪ್ ಅವರ ಅಭಿಮಾನಿಗಳ ಗಮನಕ್ಕೂ ಬಂದಿದೆ. ದರ್ಶನ್ ಬೇಸರ ವ್ಯಕ್ತಪಡಿಸಿದ್ದು, ಸುದೀಪ್ ಅಭಿಮಾನಿಗಳು ಇವೆಲ್ಲ ನಮ್ಮತ್ರ ಬೇಡ ಎಂದೇ ಎಚ್ಚರಿಕೆ ನೀಡಿದ್ದಾರೆ.

ಆರ್ಸಿಬಿ ಹೆಸರನ್ನು ಬದಲಾಯಿಸಲು ಅನ್ ಬಾಕ್ಸ್ ಇವೆಂಟ್ ಇಟ್ಟುಕೊಳ್ಳಲಾಗಿತ್ತು. ಮ್ಯಾಚ್ ಆರಂಭಕ್ಕೂ ಮುನ್ನ ಅನ್ ಬಾಕ್ಸ್ ಇವೆಂಟ್ ಜೊತೆಗೆ ಹೊಸ ಜರ್ಸಿಯನ್ನು ಬಿಡುಗಡೆ ಮಾಡಲಾಯಿತು. ಆರ್ಸಿಬಿ ತಂಡದ ಜೆರ್ಸಿ ಬಿಡುಗಡೆ ಮಾಡಿ, ಶುಭಹಾರೈಸಿದ್ದರು ಅಶ್ವಿನಿ ಪುನೀತ್ ರಾಜ್‍ಕುಮಾರ್. ಆದರೆ ಆರ್ಸಿಬಿ ಗೆಲುವು ಕಾಣದೆ ಇರುವ ಕಾರಣಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಗಜಪಡೆ ಎಂಬ ಪೇಜ್ ನಲ್ಲಿ ಅಶ್ವಿನಿ ಅವರ ಬಗ್ಗರ ಕೆಟ್ಟದಾಗಿ ಪೋಸ್ಟ್ ಹಾಕಾಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *