ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ ಜ. 03 : ಪಾದಚಾರಿಗಳು, ಜನಸಾಮಾನ್ಯರು ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಗರದ ಪ್ರವಾಸಿ ಮಂದಿರದ ಮುಂಭಾಗದ ವೃತ್ತದಲ್ಲಿ ಸಿಗ್ನಲ್ ಅಳವಡಿಸಿ, ಸಂಚಾರಿ ಪೊಲೀಸ್‍ನ್ನು ನೀಡಿ ಸುಗಮ ರಸ್ತೆ ಸಾರಿಗೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಸೂಕ್ತ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳ ಪರವಾಗಿ ಶಿಕ್ಷಕರು & ಪದವೀಧರರ ಕಾಂಗ್ರೆಸ್ ವಿಭಾಗದವತಿಯಿಂದ ಜಿಲ್ಲಾಡಳಿತವನ್ನು ಒತ್ತಾಯಿಸಿ ಮನವಿಯನ್ನು ಸಲ್ಲಿಸಲಾಯಿತು.
ನಗರದ ಹೃದಯ ಭಾಗದಲ್ಲಿರುವ ಪ್ರವಾಸಿ ಮಂದಿರದ ಮುಂಭಾಗದಲ್ಲಿ ಕ್ಷೇತ್ರಶಿಕ್ಷಣಾಧಿಕಾರಿಗಳ ಕಚೇರಿ, ಸರ್ಕಾರಿ ಶಾಲೆ ಮತ್ತು ಕಾಲೇಜುಗಳು ಹಾಗೂ ಪ್ರವಾಸಿ ಮಂದಿರ ಇದ್ದು. ತಾಲ್ಲೂಕು ಕಚೇರಿ ಕಡೆಯಿಂದ ವಾಹನಗಳು ಏಕಮುಖ ರಸ್ತೆಯಲ್ಲಿ ವಿರುದ್ಧವಾಗಿ ಬರುತ್ತವೆ ಮತ್ತು ಪ್ರವಾಸಿ ಮಂದಿರದ ಮುಂಭಾಗದಲ್ಲಿ ಒಂದು ಬಸ್ ನಿಲ್ದಾಣ ಮತ್ತು ಅದರ ಎದುರುಗಡೆ ಇರುವ ಓಲ್ಕ್ ಮಿಡಲ್ ಶಾಲೆ ಮೈದಾನದ ಗೇಟ್ ಪಕ್ಕದಲ್ಲಿ ಆಟೋ ಸ್ಟಾಂಡ್ ಮತ್ತು ಬಹುಗಾಲಿಗಳ ವಾಹನ ಮತ್ತು ಬಸ್ಸ್ ಗಳಿಗೆ ನಿಲ್ದಾಣವಿದ್ದು, ಅಂಬೇಡ್ಕರ್ ವೃತ್ತದ ಕಡೆಯಿಂದ ಬರುವ ವಾಹನಗಳು ಲಿಡ್ಕರ್ ಬಿಲ್ಡಿಂಗ್ ಹಾಗೂ ಕೆ.ಎಫ್.ಸಿ ಬ್ಯಾಂಕ್ ಕಡೆಗೆ ಹೋಗಲು ವಾಹನಗಳು ತಿರುಗಿ ಗಾಂಧಿ ವೃತ್ತದಿಂದ ಬರುವ ವಾಹನಗಳಿಗೆ ಅಡ್ಡವಾಗಿ ಸಂಚರಿಸುವ ಬಹು ಮುಖ್ಯ ವೃತ್ತ ಇದಾಗಿರುತ್ತದೆ.
ಅತ್ಯಂತ ವಾಹನ ದಟ್ಟಣೆ ಇರುವ ಇಂತಹ ವೃತ್ತದಲ್ಲಿ ಶಾಲೆ ಮತ್ತು ಕಾಲೇಜುಗಳನ್ನು ಪ್ರಾರಂಭಿಸುವ ಮತ್ತು ಬಿಡುವ ಸಮಯಗಳಲ್ಲಿ ಕ್ಷೇತ್ರಶಿಕ್ಷಣಾಧಿಕಾರಿಗಳ ಕಚೇರಿಯ ಸಿಬ್ಬಂಧಿ ವಾಹನಗಳು, ಹಳೇ ಮಾಧ್ಯಮಿಕ ಮೈದಾನದಿಂದ ಹೊರಗೆ ಬರುವುದು ಮತ್ತು ಒಳಗೆ ಹೋಗುವುದರಿಂದ ಮತ್ತು ಸದರಿ ಮೈದಾನದಲ್ಲಿ ಕ್ರೀಡೆಗಳು ನಡೆಯುವ ಸಂದರ್ಭದಲ್ಲಿ ಮತ್ತಿತರೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಾಹನ ದಟ್ಟಣೆಯಿಂದಾಗಿ ವಿದ್ಯಾರ್ಥಿಗಳಿಗೆ ಅತ್ಯಂತ ತೊಂದರೆ ಮತ್ತು ತೀವ್ರ ಸಮಸ್ಯೆ ಉಂಟಾಗುತ್ತಿರುವುದನ್ನು ವಿದ್ಯಾರ್ಥಿಗಳ ಪೋಷಕರು ಹಾಗೂ ಸದರಿ ವೃತ್ತದ ಸುತ್ತಮುತ್ತಲಿನ ಅಂಗಡಿ ಮುಂಗಟ್ಟುಗಳಲ್ಲಿ ಇರುವ ಸಾರ್ವಜನಿಕರು ಮತ್ತು ಪಾದಚಾರಿಗಳು ಹಾಗೂ ಅನೇಕ ವಿದ್ಯಾರ್ಥಿ ಸಂಘಟನೆಗಳು ಶಿಕ್ಷಕರು & ಪದವೀಧರರ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಬಂದು ದಿನ ನಿತ್ಯ ದೂರುಗಳನ್ನು ನೀಡುತ್ತಿರುತ್ತಾರೆ.
ಈ ವತ್ತದಲ್ಲಿರುವ ರಸ್ತೆಯ ಮದ್ಯಭಾಗದಲ್ಲಿ ಬೃಹದಾಕಾರದ ರೋಡ್ ಡಿವೈಂಡರ್ ನಿರ್ಮಿಸಿದ್ದು, ವಿದ್ಯಾರ್ಥಿಗಳು ರಸ್ತೆಯನ್ನು ದಾಟಲು ತು0ಬಾ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ, ಈ ಪರಿಸ್ಥಿತಿಯನ್ನು ಈ ಕೂಡಲೇ ಬಗೆಹರಿಸಬೇಕಾದ ಅನಿವಾರ್ಯತೆ ಇದೆ ಎಂದು ಚಿತ್ರದುರ್ಗ ಜಿಲ್ಲಾ ಶಿಕ್ಷಕರ ಮತ್ತು ಪದವೀಧರರ ಕಾಂಗ್ರೆಸ್ ಸಮಿತಿಯ ಜಿಲ್ಲಾ ಅಧ್ಯಕ್ಷರಾದ ಮುದಾಸೀರ್ ನವಾಜ್, ಇನ್‍ಟೆಕ್ ನಗರಾಧ್ಯಕ್ಷ ಜಮೀರ್, ಮುನಿರಾಜ್, ಕೋಟಿ, ಪ್ರಕಾಶ್, ಸುಧಾಮ್ಮ ಸೇರಿದಂತೆ ಇತರರು ಭಾಗವಹಿಸಿದ್ದರು.