ಅಮಾಯಕ ಮಕ್ಕಳು ಬಲಿಯಾಗ್ತಾರೆ ವಿನಃ ರಾಜಕಾರಣಿಗಳ ಮಕ್ಕಳಲ್ಲ : ಕುಮಾರಸ್ವಾಮಿ

0 Min Read

ಮೈಸೂರು: ಶಿವಮೊಗ್ಗದಲ್ಲಿ ನಡೆದ ಭಜರಂಗದಳದ ಕಾರ್ಯಕರ್ತ ಹರ್ಷನ ಕೊಲೆ ವಿಚಾರವಾಗಿ ಮಾಜಿ ಸಿಎಂ ಕುಮಾರಸ್ವಾಮಿ ಮಾತನಾಡಿದ್ದು, ಬೇಸರ ವ್ಯಕ್ತಪಡಿಸಿದ್ದಾರೆ. ಕೋಮು ಗಲಭೆಗಳಲ್ಲಿ ರಾಜಕಾರಣಿಗಳ ಮಕ್ಕಳು ಬಲಿಯಾಗಲ್ಲ ಎಂದಿದ್ದಾರೆ.

ಕೋಮು ಗಲಭೆಯಲ್ಲಿ ಅಮಾಯಕ‌ ಮಕ್ಕಳನ್ನ ಸೆಳೆಯುತ್ತಾರಲ್ಲ ಅವರು ಬಲಿಯಾಗ್ತಿದ್ದಾರೆ. ಕಿಡಿಗೇಡಿಗಳಿಂದ ಹತ್ಯೆಯಾದ ಹರ್ಷನ ಸಾವಿಗೆ ಸರ್ಕಾರದ ವೈಫಲ್ಯವೇ ಕಾರಣ. ಆ ಜೀವವನ್ನ ಮತ್ತೆ ತರೋದಕ್ಕೆ ಸಾಧ್ಯವಾ..?. ರಾಷ್ಟ್ರೀಯ ಪಕ್ಷಗಳಿಗೆ ಬೇಕಾಗಿರೋದು ಇಂಥ ಘಟನೆಗಳೇ.

ಅಮಾಯಕ ಯುವಕರನ್ನ ಬಲಿ ಕೊಟ್ಟು ರಾಜಕೀಯ ಮಾಡ್ತಾರೆ. ಇಂಥಹ ಯಾವುದೇ ಕೋಮು ಗಲಭೆಯಲ್ಲಿ ರಾಜಕೀಯ ಮಕ್ಕಳಾಗಲಿ, ಸಂಬಂಧಿಕರಾಗಲಿ ಸಾಯೋದಿಲ್ಲ. ಬಡ ಮನೆಯ ಮಕ್ಕಳೇ ಇದರಲ್ಲಿ ಬಲಿಯಾಗೋದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *