‘100’ ಸಿನೆಮಾ ನೋಡಿದ್ಮೇಲೆ ಇನ್ಫೋಸಿಸ್‌ ಫೌಂಡೇಶನ್‌ ಮುಖ್ಯಸ್ಥೆ ಸುಧಾಮೂರ್ತಿ ಹೇಳಿದ್ದೇನು ಗೊತ್ತಾ?

2 Min Read

ಸೋಶಿಯಲ್ ಮೀಡಿಯಾಗಳು ಎಲ್ಲರ ಬದುಕಲ್ಲಿಯೂ ಎಂಟ್ರಿಯಾಗಿ ಖಾಸಗಿ ಬದುಕಿನ ನೆಮ್ಮದಿಯನ್ನ ಹಾಳು ಮಾಡ್ತಿವೆ. ಆದರೆ ಇದೇ ಸೋಶಿಯಲ್ ಮೀಡಿಯಾದಿಂದ ನಮ್ಮ ಬದುಕಿಗೆ ಎಂಟ್ರಿ ಕೊಟ್ಟಿರೋ ಅನಾಹುತಗಳ ಬಗ್ಗೆ ಹೆಚ್ಚಿನವರಿಗೆ ಅರಿವಿಲ್ಲ. ಅತಿಯಾಗ್ತಿರೋ ಇವುಗಳ ಬಳಕೆಯಿಂದ ಸ್ವಲ್ಪವೇ ಯಾಮಾರಿದರೂ ಸಾಕು, ಇಡೀ ಕುಟುಂಬದ ನೆಮ್ಮದಿಯೇ ಮಣ್ಣು ಪಾಲಾಗಿ ಬಿಡುತ್ತದೆ. ಅಂಥಾ ಅನಾಹುತಗಳ ಸುತ್ತ ಘಟಿಸುವ ಘಟನೆಗಳನ್ನ ಹೊತ್ತ 100 ಸಿನೆಮಾ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದ ಕಥೆ ಎಲ್ಲ ರೀತಿಯಿಂದಲೂ ಜನರನ್ನು ಅಲರ್ಟ್ ಆಗಿಸೋದ್ರ ಜೊತೆಗೆ ಸಂದೇಶವನ್ನು ರವಾನಿಸ ಹೊರಟಿದ್ದು, ಗಣ್ಯರು ಸಹ ಸಿನೆಮಾ ನೋಡಿ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.

ಅಪಚಿರಿತ ವ್ಯಕ್ತಿಗಳೊಂದಿಗೆ ಸ್ನೇಹವಿರಲಿ, ಹಾಗಂತ ಅದು ಖಾಸಗಿ ಬದುಕು ಹಾಳುಗೆಡವುವಷ್ಟು ಮಿತಿ ಮೀರಬಾರದು, ನಮ್ಮ ಅಂತರಂಗದ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾದವರೊಂದಿಗೆ ಹಂಚಿಕೊಳ್ಳದಿರೋದೇ ಉತ್ತಮ. ಹೀಗಂತ ಸಂದೇಶ ಕೊಟ್ಟಿರುವ 100 ಸಿನೆಮಾ ನೋಡಿ ಇನ್ಫೋಸಿಸ್‌ ಫೌಂಡೇಶನ್‌ ಮುಖ್ಯಸ್ಥೆ ಸುಧಾಮೂರ್ತಿ ಮೆಚ್ಚಿಕೊಂಡಿದ್ದಾರೆ.

ಸಿನೆಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಪ್ರತಿನಿತ್ಯ ಸಾಮಾಜಿಕ ಜಾಲತಾಣಗಳಿಂದಾಗೋ ಅನಾಹುತಗಳ ಬಗ್ಗೆ ಜನರಲ್ಲಿ ಎಚ್ಚರಿಕೆ ಮೂಡಿಸುವಂತಿದೆ. ಇತ್ತೀಚೆಗೆ ಮಾರಕವಾಗಿ ಕಾಡುತ್ತಿರೋ ಸೋಶಿಯಲ್ ಮೀಡಿಯಾದ ಅವಾಂತರದ ವಿದ್ಯಮಾನಗಳನ್ನು ಗಮನದಲ್ಲಿಟ್ಟುಕೊಂಡು, ನಿರ್ದೇಶನದೊಂದಿಗೆ ತಾವೇ ನಾಯಕರಾಗಿಯೂ ರಮೇಶ್ ಅರವಿಂದ್ ಚೆನ್ನಾಗಿ ಅಭಿನಯಿಸಿ ತೋರಿಸಿದ್ದಾರೆ. ಇಂಥಹ ಸಿನೆಮಾ ನಿರ್ದೇಶನ ಮಾಡಿದ್ದಕ್ಕೆ ರಮೇಶ್ ಅರವಿಂದ್ ಅವರಿಗೂ ಹಾಗೂ ನಿರ್ಮಾಪಕ ರಮೇಶ್ ರೆಡ್ಡಿ ಅವರಿಗೂ ಧನ್ಯವಾದ ತಿಳಿಸೋದ್ರ ಜೊತೆಗೆ ಪ್ಯಾಮಿಲಿ ಸಮೇತ ಒಮ್ಮೆ ಸಿನೆಮಾ ನೋಡುವಂತೆ ಸುಧಾಮೂರ್ತಿ ಅವರು ಮನವಿ ಮಾಡಿದ್ದಾರೆ.

ಸೂರಜ್ ಪ್ರೊಡಕ್ಷನ್ಸ್ ನಡಿ, ಎಂ.ರಮೇಶ್ ರೆಡ್ಡಿ, ಉಮಾ ನಿರ್ಮಾಪಕರಾಗಿರೋ 100 ಚಿತ್ರದಲ್ಲಿ ರಮೇಶ್ ಅರವಿಂದ್ ನಿರ್ದೇಶನದೊಂದಿಗೆ ನಾಯಕನಾಗಿ ನಟಿಸಿದ್ರೆ ಇವರೊಂದಿಗೆ ಪೂರ್ಣ, ರಚಿತಾ ರಾಮ್, ಶೋಭ್ ರಾಜ್, ರಾಜು ತಾಳಿಕೋಟೆ, ಬೇಬಿ ಸ್ಮಯಾ, ವಿಶ್ವಕರ್ಣ, ಪ್ರಕಾಶ್ ಬೆಳವಾಡಿ, ಮಾಲತಿ ಸುಧೀರ್, ಮತ್ತಿತರರು ಪಾತ್ರಕ್ಕೆ ಜೀವಕಳೆ ತುಂಬಿದ್ದಾರೆ.

ರವಿ ಬಸ್ರೂರು ಸಂಗೀತ ನಿರ್ದೇಶನ, ಸತ್ಯ ಹೆಗಡೆ ಕ್ಯಾಮೆರಾ ಕೈ ಚಳಕ, ಶ್ರೀನಿವಾಸ್ ಕಲಾಲ್ ಸಂಕಲನ, ಧನಂಜಯ ನೃತ್ಯ ಸಂಯೋಜನೆ, ಜಾಲಿ ಬಾಸ್ಟಿನ್ ಮತ್ತು ರವಿವರ್ಮ ಸಾಹಸ ನಿರ್ದೇಶನ, ಗುರು ಕಶ್ಯಪ್ ಸಂಭಾಷಣೆ ಚಿತ್ರಕ್ಕಿದೆ. ಪ್ರೇಕ್ಷಕರನ್ನು ಸೀಟಿನಂಚಿಗೆ ತಂದು ಕೂರಿಸುವಂಥಾ ಥ್ರಿಲ್ಲರ್ ಅಂಶಗಳೊಂದಿಗೆ, ಪಕ್ಕಾ ಕಮರ್ಶಿಯಲ್ ಹಾದಿಯಲ್ಲಿ ರೂಪುಗೊಂಡ 100 ಸಿನಿಮಾ ಪೇಕ್ಷಕರನ್ನು ಕಣ್ತೆರೆಸುವಂಥಾ ಕಂಟೆಂಟುಗಳನ್ನು ಒಳಗೊಂಡಿದ್ದು ಪ್ರೇಕ್ಷಕರ ಅಪ್ಪುಗೆಯಿಂದ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *