Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ವಾಣಿವಿಲಾಸ ಜಲಾಶಯಕ್ಕೆ ಮತ್ತೆ ಒಳಹರಿವು ಆರಂಭ : ಈಗ ನೀರಿನ ಮಟ್ಟ ಎಷ್ಟಿದೆ..?

Facebook
Twitter
Telegram
WhatsApp

ಚಿತ್ರದುರ್ಗ: ವಾಣಿ ವಿಲಾಸ ಜಲಾಶಯ ಈ ವರ್ಷ ಕೋಡಿ ಬೀಳುವ ಎಲ್ಲಾ ನಿರೀಕ್ಷೆಗಳು ಮತ್ತೆ ಚಿಗುರೊಡೆದಿವೆ. ಕಳೆದ ಕೆಲವು ದಿನಗಳಿಂದ ಒಳಹರಿವು ನಿಂತು ಹೋಗಿತ್ತು. ಇನ್ನೇನು ಕೋಡಿ ಬೀಳಬೇಕು ಎನ್ನುವಷ್ಟರಲ್ಲಿ ಮಳೆಯೂ ನಿಂತಿದೆ. ಇದೀಗ ಮತ್ತೆ ಭರವಸೆ ಮೂಡಿದ್ದು, ವಾಣಿ ವಿಲಾಸ ಜಲಾಶಯಕ್ಕೆ ಒಳಹರಿವು ಶುರುವಾಗಿದೆ.

ಈ ಬಾರಿ ಮುಂಗಾರು ಮಳೆಯಿಂದಾನೂ ಉತ್ತಮ ಮಳೆಯಾಗಿರುವ ಕಾರಣ ಜಲಾಶಯಕ್ಕೆ ಒಳ್ಳೆಯ ನೀರು ಸಂಗ್ರಹಣೆಯಾಗಿತ್ತು. ಇನ್ನು ಕೆಲವೇ ಅಡುಗಳು ಬಾಕಿ ಇದ್ದಾಗಲೇ ಮಳೆ ನಿಂತು ಹೋಗಿತ್ತು. ಈಗ ಮತ್ತೆ ಒಳ ಹರಿವು ಆರಂಭದಿಂದ ಚಿತ್ರದುರ್ಗದ ಜನ ಖುಷಿಯಾಗಿದ್ದಾರೆ. ಇಂದು ಜಲಾಶಯಕ್ಕೆ 924 ಕ್ಯೂಸೆಕ್ ಒಳಹರಿವು ಇದೆ. ಇದರಿಂದ ಪ್ರಸ್ತುತ ಜಲಾಶಯದ ನೀರಿನ ಮಟ್ಟ 127.40 ಅಡಿಯಾಗಿದೆ. ಹೀಗಾಗಿ ಡ್ಯಾಂ ಕೋಡಿ ಬೀಳುವುದಕ್ಕೆ 2.60 ಅಡಿ ನೀರು ಬರಬೇಕಿದೆ. ಇಷ್ಟು ಅಡಿ ನೀರು ಬಂದರೆ ಜಲಾಶಯ ಕೋಡಿ ಬೀಳಲಿದೆ.

ಭದ್ರ ಜಲಾಶಯದಿಂದ ಪಂಪ್ ಮೂಲಕ ನೀರನ್ನು ಹರಿಸಲಾಗುತ್ತಿದೆ‌. ಈ ಜಲಾಶಯ ಕೋಡಿ ಬಿದ್ದರೆ ಹಿರಿಯೂರಿನ ಅಚ್ಚುಕಟ್ಟು ಪ್ರದೇಶದ ರೈತರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಮೈಸೂರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ತಮ್ಮ ತಾಯಿಯ ನೆನಪಿಗಾಗಿ ಕಟ್ಟಿಸಿದ ಜಲಾಶಯ ಇದಾಗಿದೆ. 1907ರಲ್ಲಿ ಕಟ್ಟಿಸಿದ ಅದ್ಭುತ ಜಲಾಶಯ ಇದಾಗಿದೆ. ಕಟ್ಟಿಸಿದಾಗಿನಿಂದ ಎರಡು ಬಾರಿ ಕೋಡಿ ಬಿದ್ದಿದ್ದು, ಮೂರನೇ ಬಾರಿಯೂ ಕೋಡಿ ಬೀಳುವ ನಿರೀಕ್ಷೆಯಲ್ಲಿ ಜನ ಕಾಯ್ತಿದ್ದಾರೆ. ವಾಣಿ ವಿಲಾಸ ಜಲಾಶಯ ಕೋಡಿ ಬಿದ್ದರೆ ಸುತ್ತಮುತ್ತಲ ರೈತರ ಬೆಳೆಗೆ ಉತ್ತಮ ನೀರಿನ ವ್ಯವಸ್ಥೆ ಸಿಕ್ಕಂತೆ ಆಗುತ್ತದೆ. ಹಾಗೇ ಕುಡಿಯುವ ನೀರಿಗೂ ಸಮಸ್ಯೆಯಾಗುವುದಿಲ್ಲ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಮಕ್ಕಳಿಗೆ ಶಿಕ್ಷಣದ ಜೊತೆ ಸಂಸ್ಕಾರ ಮತ್ತು ಭಾಷೆಯ ಮಹತ್ವ ತಿಳಿಸಬೇಕು : ಬಿಇಒ ಎಸ್.ನಾಗಭೂಷಣ್

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ನವಂಬರ್. 07 : ಅನ್ಯ ಭಾಷೆಗಳ ಆಕ್ರಮಣವನ್ನು ತಡೆದುಕೊಳ್ಳುವ ಶಕ್ತಿ ಕನ್ನಡ ಭಾಷೆಗಿದೆ ಎಂದು ಕ್ಷೇತ್ರ

ಸರ್ಕಾರ ನೀತಿ ನಿರೂಪಣೆಗೆ ಸಾಂಖ್ಯಿಕ ಇಲಾಖೆ ದತ್ತಾಂಶಗಳೇ ಆಧಾರ : ಜಿ.ಪಂ.ಸಿಇಓ ಎಸ್.ಜೆ.ಸೋಮಶೇಖರ್

  ಚಿತ್ರದುರ್ಗ. ನ.08: ಸರ್ಕಾರದ ನೀತಿ ನಿರೂಪಣೆಗೆ ಸಾಂಖ್ಯಿಕ ಇಲಾಖೆ ದತ್ತಾಂಶಗಳೇ ಆಧಾರವಾಗಿವೆ. ಸಾಂಖ್ಯಿಕ ಇಲಾಖೆ ಸಂಗ್ರಹಿಸುವ ದತ್ತಾಂಶಗಳು ಹೆಚ್ಚಿನ ಮಹತ್ವ ಹೊಂದಿವೆ ಎಂದು ಜಿ.ಪಂ.ಸಿಇಓ ಎಸ್.ಜೆ.ಸೋಮಶೇಖರ್ ಹೇಳಿದರು. ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ

ಚಿತ್ರದುರ್ಗ APMC | ಇಂದಿನ ಸೂರ್ಯಕಾಂತಿ, ಶೇಂಗಾ ಮಾರುಕಟ್ಟೆ ಧಾರಣೆ !

ಸುದ್ದಿಒನ್, ಚಿತ್ರದುರ್ಗ, ನವಂಬರ್. 08 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಡಲೆ, ಶೇಂಗಾ, ಸೂರ್ಯಕಾಂತಿ, ಅವರೆಕಾಯಿ, ಹಲಸಂದೆ, ಮೆಕ್ಕೆಜೋಳ ಸೇರಿದಂತೆ ಇತರೆ ಉತ್ಪನ್ನಗಳ (ಸರಕು) ಇಂದಿನ(ನವೆಂಬರ್. 08, ಶುಕ್ರವಾರ) ಮಾರುಕಟ್ಟೆಯಲ್ಲಿ ಧಾರಣೆ ಯಾದ

error: Content is protected !!