ನವದೆಹಲಿ: ಮಗಳ ಕೊಲೆ ಆರೋಪದಲ್ಲಿ 2012ರಿಂದಲೂ ಜೈಲು ವಾಸ ಅನುಭವಿಸುತ್ತಿರುವ ಇಂದ್ರಾಣಿ ಮುಝರ್ಜಿ, ಇದೀಗ ಅದೇ ಮಗಳು ಬದುಕಿದ್ದಾಳೆಂದು ಸಿಬಿಐಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ. ನನ್ನ ಮಗಳು ಶೀನಾಬೋರಾ ಸತ್ತಿಲ್ಲ, ಕಾಶ್ಮೀರದಲ್ಲಿ ಇದ್ದಾಳೆಂದು ಪತ್ರದಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.
ಶೀನಾಬೋರಾ ಬದುಕಿರುವ ಬಗ್ಗೆ ತನಿಖೆ ನಡೆಸಿ. ಮಗಳು ಬದುಕಿದ್ದಾಳೆ, ಆಕೆ ಕಾಶ್ಮೀರದಲ್ಲಿ ಜೀವಿಸುತ್ತಿದ್ದಾಳೆಂದು ಸಹ ಕೈದಿ ಹೇಳಿದ್ದಾರೆಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ನವೆಂಬರ್ 27 ರಂದೇ ಇಂದ್ರಾಣಿ ಮುಖರ್ಜಿ ಪತ್ರ ಬರೆದಿದ್ದಾರೆ. ಮಗಳ ಬಗ್ಗೆ ಹೇಳಿರುವ ಸಹ ಕೈದಿಯನ್ನ ನಾನು ಜೈಲಿನಲ್ಲೆ ಭೇಟಿಯಾಗಿದ್ದೆ. ಆಕೆ ನನ್ನ ಮಗಳು ಶೀನಾಬೋರಾಳನ್ನ ಕಾಶ್ಮೀರದಲ್ಲಿ ನೋಡಿದ್ದಾರಂತೆ ಎಂದಿದ್ದಾರೆ.
ಇಂದ್ರಾಣಿ ಮುಖರ್ಜಿ ತನ್ನ ಮೊದಲ ಗಂಡನ ಮಗಳನ್ನ ಕೊಲೆಮಾಡಿದ ಆರೋಪದ ಮೇಲೆ ಜೈಲಿನಲ್ಲಿದ್ದಾಳೆ. ಆಕೆಗೆ ಸಹಾಯ ಮಾಡಿದ್ದಕ್ಕಾಗಿ ಎರಡನೇ ಗಂಡ ಪೀಟರ್ ಮುಖರ್ಜಿಯನ್ನು ಬಂಧಿಸಲಾಗಿತ್ತು. ಆದ್ರೆ ಇಬ್ಬರು ಜೈಲಿನಲ್ಲೇ ವಿಚ್ಛೇದನ ಕೂಡ ಪಡೆದಿದ್ದಾರೆ. ಪೀಟರ್ ಮುಖರ್ಜಿ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಇಂದ್ರಾಣಿ ಮುಖರ್ಜಿ ಇನ್ನು ಜೈಲಿನಲ್ಲೇ ಇದ್ದು, ಅವರ ಪರ ವಕೀಲರು ಜಾಮೀನಿಗಾಗಿ ಪ್ರಯತ್ನ ನಡೆಸುತ್ತಿದ್ದಾರೆ.