ಅಜೀರ್ಣ : ಲಿವರ್ ಕ್ಯಾನ್ಸರ್ ಗೆ ಕಾರಣವಾಗಬಹುದು : ರೋಗ ಲಕ್ಷಣಗಳ ಬಗ್ಗೆ ತಿಳಿದುಕೊಳ್ಳಿ…!

 

ಕೆಲವೊಮ್ಮೆ ದೇಹದಲ್ಲಾಗುವ ಬದಲಾವಣೆಗಳನ್ನು ನಾವೂ ನಿರ್ಲಕ್ಷ್ಯ ಮಾಡ್ತೇವೆ. ಆದ್ರೆ ಆ ನಿರ್ಲಕ್ಷ್ಯ ಮತ್ತೆ ಇನ್ಯಾವುದೋ ಕಾಯಿಲೆಗೆ ತಿರುಗಿಕೊಳ್ಳುತ್ತೆ. ಹೀಗಾಗಿ ರೋಗ ಲಕ್ಷಣಗಳನ್ನು ಮೊದಲೇ ಅರಿತುಕೊಳ್ಳುವುದು ಉತ್ತಮ. ಕೆಲವೊಂದು ಸಲ ಗ್ಯಾಸ್ಟ್ರಿಕ್‌ ಅಂತ ನೆಗ್ಲೆಕ್ಟ್ ಮಾಡುವುದರಿಂದ ದೇಹದ ಮೇಲೆ ಇನ್ಯಾವುದೋ ಪರಿಣಾಮ ಬೀರುತ್ತದೆ.

* ಮೊದಲಿಗೆ ನಾವೆಲ್ಲ ತಿಳಿದುಕೊಳ್ಳಬೇಕಾಗಿರುವುದು ನಾವೂ ಯಾವುದನ್ನು ನಿರ್ಲಕ್ಷ್ಯ ಮಾಡಬಾರದು. ಅದರಲ್ಲೂ ಊಟವಾದ ಮೇಲೆ ಜೀರ್ಣವಾಗದೆ ಇರುವುದನ್ನು ನಿರ್ಲಕ್ಷ್ಯ ಮಾಡಬಾರದು. ಜೀರ್ಣಶಕ್ತಿ ಆಗದೆ ಇದ್ದಲ್ಲಿ ಬೇರೆ ಬೇರೆ ಕಾಯಿಲೆಗಳು ಕಾಣಿಸಿಕೊಳ್ಳುವುದಕ್ಕೆ ಆರಂಭಿಸುತ್ತದೆ. ಲಿವರ್ ಕ್ಯಾನ್ಸರ್ ಗೂ ಕಾರಣವಾಗುತ್ತದೆ.

* ಲಿವರ್ ಕ್ಯಾನ್ಸರ್ ನ ರೋಗ ಲಕ್ಷಣಗಳು ಅಜೀರ್ಣತೆಯ ಸಮಸ್ಯೆ ಕಂಡಂತೆ ಕಾಣುತ್ತವೆ. ಹೀಗಾಗಿ ನಿರ್ಲಕ್ಷ್ಯ ಮಾಡುವುದು ಬೇಡ. ಆಹಾರ ಸೇವನೆ ಮಾಡಿದ ಕೂಡಲೇ ವಾಕರಿಕೆ ಬರುವುದು, ವಾಂತಿಯಾಗುವುದು ಈ ರೋಗ ಲಕ್ಷಣವಾಗಿರುತ್ತದೆ. ಈ ರೀತಿಯೆಲ್ಲಾ ಆಗುತ್ತಿದ್ದರೆ ಮೊದಲು ವೈದ್ಯರ ಬಳಿ ಪರೀಕ್ಷಿಸಿಕೊಳ್ಳಿ.

* ಇದ್ದಕ್ಕಿದ್ದಂತೆ ದೇಹದ ತೂಕ ಕಡಿಮೆಯಾಗುವುದು, ಹೊಟ್ಟೆ ಹಸಿವು ಇಲ್ಲದೇ ಇರುವುದು, ಲಿವರ್ ದೊಡ್ಡ ದಾಗುವುದು, ಹೊಟ್ಟೆಯ ಭಾಗದಲ್ಲಿ ನೋವು ಕಂಡುಬರುವುದು, ಜಾಂಡಿಸ್ ಸಮಸ್ಯೆ ಎದುರಾಗುವುದು, ಚರ್ಮದ ಭಾಗ ದಲ್ಲಿ ಕೆರೆತ ಕಾಣಿಸುವುದು ಇನ್ನಿತರ ರೋಗ ಲಕ್ಷಣಗಳನ್ನು ಕಾಣಬಹುದು.

Share This Article
Leave a Comment

Leave a Reply

Your email address will not be published. Required fields are marked *