ಉಕ್ರೇನ್-ರಷ್ಯಾ ಬಿಕ್ಕಟ್ಟು ; ಭಾರತದ ಪ್ರತಿಕ್ರಿಯೆ…!

ಉಕ್ರೇನ್‌ ಮೇಲೆ ರಷ್ಯಾದ ಆಕ್ರಮಣದಿಂದ ಉದ್ವಿಗ್ನತೆ ಹೆಚ್ಚಿದೆ. ಪುಟಿನ್ ಮಿಲಿಟರಿ ಕಾರ್ಯಾಚರಣೆ ಎಂದು ಹೇಳಿದ್ದರೂ ಕೂಡ  ಜಗತ್ತು ಅದನ್ನು ಯುದ್ಧವೆಂದು ಭಾವಿಸಿದೆ. ಪರಸ್ಪರ ಹೇಳಿಕೆಗಳಿಂದ ಉಭಯ ದೇಶಗಳು ಗೊಂದಲಕ್ಕೀಡಾಗಿವೆ. ಸಾರ್ವಜನಿಕರು ಸೇರಿದಂತೆ ಆಸ್ತಿ-ಪಾಸ್ತಿ ನಷ್ಟ ಈಗಲೇ ಅಂದಾಜು ಮಾಡಲು ಸಾಧ್ಯವಿಲ್ಲ. ಸಾಧ್ಯವಾದಷ್ಟು ಬೇಗ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳುವಂತೆ  ಪಾಶ್ಚಿಮಾತ್ಯ ರಾಷ್ಟ್ರಗಳ ಮೇಲೆ ಅಂತರರಾಷ್ಟ್ರೀಯ ಸಮುದಾಯದಿಂದ ಒತ್ತಡ ಹೆಚ್ಚುತ್ತಿದೆ. ಯುದ್ಧದ ಬಗ್ಗೆ ಭಾರತ ತನ್ನ ಪ್ರತಿಕ್ರಿಯೆಯನ್ನು ಬಹಿರಂಗಪಡಿಸಿದೆ.

ರಷ್ಯಾ-ಉಕ್ರೇನ್ ಬಿಕ್ಕಟ್ಟಿನಲ್ಲಿ  ಭಾರತ ತಟಸ್ಥ ಪಾತ್ರ ವಹಿಸಲಿದೆ ಎಂದು ಭಾರತ ಸ್ಪಷ್ಟಪಡಿಸಿದೆ. ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ (ರಾಜ್ಯ) ರಾಜ್‌ಕುಮಾರ್ ರಂಜನ್ ಸಿಂಗ್ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದರು.

ಉಕ್ರೇನ್-ರಷ್ಯಾ ಬಿಕ್ಕಟ್ಟಿಗೆ ಸಂಬಂಧಿಸಿದಂತೆ, ನಮ್ಮ (ಭಾರತ) ನಿಲುವು ತಟಸ್ಥವಾಗಿದೆ.
ಶಾಂತಿಯುತ ಪರಿಹಾರಕ್ಕಾಗಿ ನಾವು ಆಶಿಸುತ್ತೇವೆ ಎಂದು ಅವರು ಹೇಳಿದರು.

ಶೀಘ್ರದಲ್ಲೇ ಪರಿಸ್ಥಿತಿ ಸುಧಾರಿಸುತ್ತದೆ ಎಂದು ನಾವು ಭಾವಿಸುತ್ತೇವೆ. ಅಗತ್ಯಬಿದ್ದರೆ ಭಾರತ ಈ ವಿಷಯದಲ್ಲಿ ಮಧ್ಯಪ್ರವೇಶಿಸಲು ಬಯಸುತ್ತದೆ. ಅಲ್ಲಿಯವರೆಗೆ ನಾವು ತಟಸ್ಥವಾಗಿರುತ್ತೇವೆ. ಒಂದು ವೇಳೆ ಅಂತಹ ಸಂದರ್ಭ ಬಂದರೆ ಯಾವುದೇ ರೀತಿಯಲ್ಲಿ ಸಹಾಯ ಮಾಡುತ್ತೇವೆ.

ಏತನ್ಮಧ್ಯೆ, ವಿಶೇಷ ವಿಮಾನದಲ್ಲಿ ಕೆಲವು ಭಾರತೀಯರು (ವಿದ್ಯಾರ್ಥಿಗಳು ಸೇರಿದಂತೆ) ಇಂದು ದೆಹಲಿಗೆ ಬಂದಿದ್ದಾರೆ ಎಂದು ತಿಳಿದುಬಂದಿದೆ. ಇಂದು ಬೆಳಿಗ್ಗೆಯಿಂದ ಪೂರ್ವ, ಉತ್ತರ ಮತ್ತು ದಕ್ಷಿಣದಿಂದ ರಷ್ಯಾದ ಪಡೆಗಳು ಉಕ್ರೇನ್ ಅನ್ನು ಸುತ್ತುವರೆದಿವೆ. ಈ ಹಿನ್ನೆಲೆಯಲ್ಲಿ ಜನರು ಭಯಭೀತರಾಗಿದ್ದಾರೆ. ಮತ್ತೊಂದೆಡೆ ಭಾರತೀಯರನ್ನೂ ಸ್ಥಳಾಂತರಿಸುವ ಪ್ರಯತ್ನಗಳು ನಡೆಯುತ್ತಿವೆ.

ಫೆಬ್ರವರಿ 22, 24 ಮತ್ತು 26 ರಂದು ಭಾರತ ಮತ್ತು ಉಕ್ರೇನ್ ನಡುವೆ ಮೂರು ವಿಮಾನಗಳ ವ್ಯವಸ್ಥೆ ಮಾಡಿರುವುದಾಗಿ ಏರ್ ಇಂಡಿಯಾ ಘೋಷಿಸಿದೆ.

Share This Article
Leave a Comment

Leave a Reply

Your email address will not be published. Required fields are marked *