Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಅಂತರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳಿದ ಭಾರತ ತಂಡದ ಸ್ಪಿನ್ ಮಾಂತ್ರಿಕ ಅಶ್ವಿನ್ ..!

Facebook
Twitter
Telegram
WhatsApp

ತಂಡದಲ್ಲಿ ಅವಕಾಶ ಸಿಗದೆ ಇದ್ದಿದ್ದಕ್ಕೆ ಮ್ಯಾನೇಜ್ಮೆಂಟ್ ವಿರುದ್ಧ ಮುನಿಸಿಕೊಂಡು ಎಲ್ಲಾ ಮಾದರಿಯ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದಾರೆ. ತಮ್ಮ 38ನೇ ವಯಸ್ಸಿಗೆ ಅಂತರಾಷ್ಟ್ರೀಯ ಎಲ್ಲಾ ಮಾದರಿಯ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದಾರೆ.

ಭಾರತ ತಂಡದ ಸ್ಪಿನ್ ಮಾಂತ್ರಿಕರಾಗಿದ್ದರು. ಆದರೆ ತಂಡದಲ್ಲಿ ಆಟವಾಡಲು ಅವಕಾಶಗಳಿಲ್ಲ ಎಂಬ ಬೇಸರವನ್ನು ಹೊರ ಹಾಕಿದ್ದರು. ಸದ್ಯ ಟೀಂ ಇಂಡಿಯಾ ಆಸ್ಟ್ರೇಲಿಯಾದಲ್ಲಿ ಬಾರ್ಡರ್ ಗವಾಸ್ಕರ್ ಟ್ರೋಫಿ ಆಡ್ತಿದೆ. ಈಗಾಗಲೇ ಮೂರು ಟೆಸ್ಟ್ ಗಳನ್ನು ಆಡಿರುವ ಭಾರತ ಒಂದರಲ್ಲಿ ಗೆದ್ದು ಇನ್ನೊಂದು ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಪರ್ತ್ ನಲ್ಲಿ ನಡೆದ ಟೆಸ್ಟ್ ನಲ್ಲಿ ಅಶ್ವಿನ್ ಗೆ ಪ್ಲೇಯಿಂಗ್ 11ರಲ್ಲಿ ಅವಕಾಶ ಸಿಕ್ಕಿರಲಿಲ್ಲ. ನಿರೀಕ್ಷೆಯಂತೆ ಅಡಿಲೇಡ್ ನಲ್ಲಿ ನಡೆದ ಎರಡನೇ ಟೆಸ್ಟ್ ಗೆ ಅವಕಾಶ ಪಡೆದರು. ಮೂರನೇ ಟೆಸ್ಟ್ ನಲ್ಲಿ ಮತ್ತೆ ಅಶ್ವಿನ್ ರನ್ನು ಹೊರಗಿಡಲಾಗಿತ್ತು. ತಂಡದ ಈ ರೀತಿಯ ನಿರ್ಧಾರಗಳಿಗೆ ಅಶ್ವಿನ್ ಬೇಸತ್ತು ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದಾರೆ ಎನ್ನಲಾಗಿದೆ.

ಅಶ್ವಿನ್ ಗೆ ಈಗ 38 ವರ್ಷ. ವಿಕೆಟ್ ಉರುಳಿಸುವುದರಲ್ಲಿ ಎಕ್ಸ್ ಪರ್ಟ್ ಆಗಿದ್ದರು. ಆದರೆ ಏಕದಿನ ಹಾಗೂ ಟಿ20ಯಲ್ಲಿ ಆಡುವುದಕ್ಕೆ ತುಂಬಾ ದಿನಗಳಿಂದ ಅವಕಾಶಗಳೇ ಸಿಕ್ಕಿರಲಿಲ್ಲ. 106 ಟೆಸ್ಟ್ ಗಳನ್ನು ಆಡಿರುವ ಅಶ್ವಿನ್, ಒಟ್ಟು 537 ವಿಕೆಟ್ ಕಬಳಿಸಿದ್ದಾರೆ. 41 ವಿಶ್ವಚಾಂಪಿಯನ್ ಶಿಪ್ ಮ್ಯಾಚ್ ಗಳನ್ನ ಆಡಿದ್ದಾರೆ. ಅದರಲ್ಲಿ 195 ವಿಕೆಟ್ ಪಡೆದಿದ್ದಾರೆ. ಈಗ ದಿಢೀರೆಂದು ಎಲ್ಲಾ ಮಾದರಿಯ ಕ್ರಿಕೆಟ್ ಗುಡ್ ಬೈ ಹೇಳಿದ್ದು, ಕ್ರಿಕೆಟ್ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ದಾವಣಗೆರೆ | ಡಿಸೆಂಬರ್ 19 ರಂದು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

    ಸುದ್ದಿಒನ್, ದಾವಣಗೆರೆ, ಡಿಸೆಂಬರ್. 18 : ಕುಕ್ಕವಾಡ ಮತ್ತು ಶ್ಯಾಗಲೆ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ಡಿ.19 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಕುಕ್ಕವಾಡ,

ಚಿತ್ರದುರ್ಗ APMC | ಶೇಂಗಾ, ಸೂರ್ಯಕಾಂತಿ ಸೇರಿದಂತೆ ಇತರೆ ಉತ್ಪನ್ನಗಳ ಬುಧವಾರದ ಮಾರುಕಟ್ಟೆ ಧಾರಣೆ ವಿವಿರ ಇಲ್ಲಿದೆ…!

  ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 18 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೇಂಗಾ, ಸೂರ್ಯಕಾಂತಿ, ಮೆಕ್ಕೆಜೋಳ ಸೇರಿದಂತೆ ಇತರೆ ಉತ್ಪನ್ನಗಳ (ಸರಕು) ಇಂದಿನ( ಡಿಸೆಂಬರ್. 18 ರ, ಬುಧವಾರ) ಮಾರುಕಟ್ಟೆಯಲ್ಲಿ ಧಾರಣೆ ಯಾದ

ಇಂದು ಚಿನ್ನದ ದರದಲ್ಲಿ ತುಸು ಇಳಿಕೆ : ಎಷ್ಟಿದೆ ಇವತ್ತಿನ ಬೆಲೆ..?

ಚಿನ್ನದ ದರದಲ್ಲಿ ಇನ್ನು ಹಾವು ಏಣಿ ಆಟ ಆಡುವುದು ನಿಂತಿಲ್ಲ. ಇಂದು ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ. ಒಂದು ಗ್ರಾಂಗೆ ಹದಿನೈದು ರೂಪಾಯಿ ಅಷ್ಟು ಕಡಿಮೆಯಾಗಿದೆ‌. ಈ ಮೂಲಕ 22 ಕ್ಯಾರಟ್ ನ ಒಂದು

error: Content is protected !!