ನ್ಯೂಯಾರ್ಕ್: ಅಮೆರಿಕಾದಲ್ಲೂ ನಮ್ಮ ಭಾರತೀಯರು ವಾಸವಾಗಿದ್ದಾರೆ. ಭಾರತೀಯರಲ್ಲಿ ಹೆಚ್ವಿನ ಸಂಖ್ಯೆಯಲ್ಲಿ ಅನ್ನಪ್ರಿಯರಿದ್ದಾರೆ. ಎಲ್ಲೊಯೇ ವಾಸವಾಗಿದ್ದರು ತಮ್ಮ ನೆಲದ ಆಹಾರವನ್ನೇ ಬಳಸಿ ಅಭ್ಯಾವಿರುತ್ತದೆ. ಆದರೆ ಈಗ ಅಮೆರಿಕಾದಲ್ಲಿ ಅಕ್ಕಿಗಾಗಿ ಹಾಹಾಕಾರ ಶುರುವಾಗಿದೆ.
ಭಾರತದಲ್ಲಿ ಅಕ್ಕಿ ಕೊರತೆಯಾಗದಂತೆ ತಡೆಯಲು ಅಕ್ಕಿ ರಫ್ತನ್ನು ಕೇಂದ್ರ ಸರ್ಕಾರ ನಿಷೇಧ ಮಾಡಿದೆ. ಹೀಗಾಗಿ ಮಾಲ್ ಗಳಿಗೆ ಶಾಪಿಂಗ್ ಹೋಗಿರುವಂತ ಆಂಧ್ರ, ಕರ್ನಾಟಕ ಮೂಲದ ಅನಿವಾಸಿ ಭಾರತೀಯರು ಅಕ್ಕಿಉನ್ನು ಸಂಗ್ರಹ ಮಾಡಿಕೊಳ್ಳುತ್ತಿದ್ದಾರೆ.
ಭಾರತದಿಂದ ಅಕ್ಕಿ ರಫ್ತು ನಿಷೇಧ ಮಾಡುತ್ತಿದ್ದಂತೆಯೇ ಅಮೆರಿಕಾದಲ್ಲೂ ಅಕ್ಕಿ ಬೆಲೆ ಏರಿಕೆಯಾಗಿದೆ. ಸುಮಾರು 6 ತಿಂಗಳಿಗೆ ಆಗುವಷ್ಟು ಅಕ್ಕಿಯನ್ನು ಶೇಖರಣೆ ಮಾಡಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಿದ್ದಾರೆ. ಮಾಲ್ ಗಳಲ್ಲಿ ಜನ ಕಿಕ್ಕಿರಿದು ಸೇರಿದ್ದಾರೆ. ಯಾರ ಕೈನಲ್ಲಿ ನೋಡಿದರೂ ಅಕ್ಕಿ ಚೀಲ ಕಾಣಿಸುತ್ತಿದೆ.