ನವದೆಹಲಿ: ಕಳೆದ ಆಗಸ್ಟ್ ನಿಂದಲೂ ನನ್ನ ಟ್ವಿಟ್ಟರ್ ಫಾಲೋವರ್ಸ್ ಸಂಖ್ಯೆಯಲ್ಲಿ ತೀರಾ ಕಡಿಮೆಯಾಗಿದೆ. ಇದು ನನ್ನ ವಾಕ್ ಸ್ವಾತಂತ್ರ್ಯವನ್ನ ಹತ್ತಿಕ್ಕಿದ್ದಂತೆ ಆಗುತ್ತಿದೆ ಎಂದು ಕಿಡಿಕಾರಿದ್ದಾರೆ.
ಸರ್ಕಾರದ ಒತ್ತಡದ ಮೇರೆಗೆ ಹಿಂಬಾಲಕರ ಸಂಖ್ಯೆ ಮೇಲೂ ಟ್ವಿಟ್ಟರ್ ನಿರ್ಬಂಧ ಹೇರಿದೆ. ಈ ಸಂಬಂಧ ಪತ್ರ ಬರೆದಿರುವ ರಾಹುಲ್ ಗಾಂಧಿ, ನಾನು ಹತ್ತಿರ ಹತ್ತಿರ 2 ಕೋಟಿ ಹಿಂಬಾಲಕರನ್ನ ಹೊಂದಿದ್ದೇನೆ. ಆದರೆ ಇದ್ದಕ್ಕದ್ದಂತೆ ಹಿಂಬಾಲಕರನ್ನ ನಿರ್ಬಂಧಿಸಲಾಗಿದೆ. ಪ್ರತಿ ದಿನ ಎಂಟರಿಂದ ಹತ್ತು ಸಾವಿರ ಹಿಂಬಾಲಕರು ಸೇರ್ಪಡೆಯಾಗುತ್ತಾ ಇದ್ದರು.
ಕಳೆದ ಜುಲೈವರೆಗೂ ಇದೇ ಥರ ಇತ್ತು. ಆದ್ರೆ ಆಗಸ್ಟ್ ನಿಂದ ಎಲ್ಲವೂ ಬದಲಾಗಿದೆ. ರೈತರ ಪರ ಮಾತನಾಡಿದ ವಿಡಿಯೋ ಅತಿ ಹೆಚ್ಚು ವೀಕ್ಷಣೆ ಪಡೆದಿತ್ತು. ಆಗಸ್ಟ್ ನಲ್ಲಿ ಖಾತೆ ಅಮಾನತು ಮಾಡಲಾಗಿತ್ತು. ಅದಾದ ಬಳಿಕ ಹೀಗೆ ಫಾಲೋವರ್ಸ್ ನಲ್ಲಿ ಹಿನ್ನಡೆಯಾಗಿದೆ ಎಂದು ಆರೋಪಿಸಿ ಟ್ವಿಟ್ಟರ್ ಸಿಇಒ ಪರಾಗ್ ಅಗರ್‍ವಾಲ್‍ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪತ್ರ ಬರೆದಿದ್ದಾರೆ. ಡಿಸೆಂಬರ್ 27 ರಿಂದ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಕಾಂಗ್ರೆಸ್ ನಾಯಕ ಶಶಿ ತರೂರ್ ಅವರೊಂದಿಗಿನ ತಮ್ಮ ಟ್ವಿಟ್ಟರ್ ಖಾತೆಯ ಡೇಟಾದ ವಿಶ್ಲೇಷಣೆಯನ್ನು ಹೋಲಿಕೆ ಮಾಡಿ ಪತ್ರದಲ್ಲಿ ಲಗತ್ತಿಸಿದ್ದಾರೆ.