ಭಾರತದ ಬಾಹ್ಯಾಕಾಶ ಕ್ಷೇತ್ರದ ಹೆಗ್ಗುರುತಾಗಿ, ವಿಕ್ರಮ್-ಎಸ್, ಖಾಸಗಿಯಾಗಿ ಅಭಿವೃದ್ಧಿಪಡಿಸಿದ ಮೊದಲ ರಾಕೆಟ್ , ಶುಕ್ರವಾರ ಬೆಳಿಗ್ಗೆ 11.30 ಕ್ಕೆ ಶ್ರೀಹರಿಕೋಟಾದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಬಾಹ್ಯಾಕಾಶ ನಿಲ್ದಾಣದಿಂದ ಉಡಾವಣೆಯಾಯಿತು.
ದೇಶದ ಬಾಹ್ಯಾಕಾಶದ ಪಿತಾಮಹ ವಿಕ್ರಮ್ ಸಾರಾಭಾಯ್ ಅವರಿಗೆ ಗೌರವಾರ್ಥವಾಗಿ ಹೆಸರಿಸಲಾದ ಸ್ಕೈರೂಟ್ ಏರೋಸ್ಪೇಸ್-ವಿಕ್ರಮ್-ಎಸ್, ತನ್ನ ಮೊದಲ ಕಾರ್ಯಾಚರಣೆಯಲ್ಲಿ ಯಶಸ್ಸನ್ನು ಕಂಡಿತು.
ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 2020 ರಲ್ಲಿ ಖಾಸಗಿ ಕಂಪನಿಗಳ ಭಾಗವಹಿಸುವಿಕೆಗಾಗಿ ಬಾಹ್ಯಾಕಾಶ ಕ್ಷೇತ್ರವನ್ನು ಮುಕ್ತವಾಗಿಸಿದ ನಂತರ ಸ್ಕೈರೂಟ್ ಏರೋಸ್ಪೇಸ್ ಭಾರತದಲ್ಲಿ ಮೊದಲ ಖಾಸಗಿ ಕಂಪನಿಯಾಗಿದೆ.