India vs South Africa, T20 World Cup 2024 : ದಕ್ಷಿಣ ಆಫ್ರಿಕಾಕ್ಕೆ 177 ರನ್‌ಗಳ ಗುರಿ ನೀಡಿದ ಭಾರತ

ಸುದ್ದಿಒನ್ : ಭಾರತ ಮತ್ತು ದಕ್ಷಿಣ ಆಫ್ರಿಕಾ ಇಂದು (ಜೂನ್ 29) T20 ವಿಶ್ವಕಪ್ 2024 ಫೈನಲ್‌ ಪಂದ್ಯ ನಡೆಯುತ್ತಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 20 ಓವರ್‌ಗಳಲ್ಲಿ 176 ರನ್ ಗಳಿಸಿದೆ.

ಭಾರತ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 176 ರನ್ ಗಳಿಸಿತು. ದಕ್ಷಿಣ ಆಫ್ರಿಕಾಕ್ಕೆ 177 ರನ್‌ಗಳ ಗುರಿ ನೀಡಲಾಗಿದೆ.

ಭಾರತದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ (76) ಅಕ್ಷರ್ ಪಟೇಲ್ (47) ಮತ್ತು ಶಿವಂ ದುಬೆ (27) ಮಿಂಚಿದರು. ದಕ್ಷಿಣ ಆಫ್ರಿಕಾದ ಬೌಲರ್‌ಗಳಲ್ಲಿ ಕೇಶವ್ ಮಹಾರಾಜ್, ಎನ್ರಿಚ್ ನಾರ್ಜೆ ತಲಾ ಎರಡು, ಜಾನ್ಸೆನ್ ಮತ್ತು ರಬಾಡ ತಲಾ ಒಂದು ವಿಕೆಟ್ ಪಡೆದರು.

Share This Article
Leave a Comment

Leave a Reply

Your email address will not be published. Required fields are marked *