ನ್ಯೂಯಾರ್ಕ್ : ಭಾರತ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿ ಹೊರಹೊಮ್ಮಲಿದೆ. ಅದು 2023 ರಲ್ಲಿ! ವಿಶ್ವಸಂಸ್ಥೆ ಈ ವಿಷಯವನ್ನು ಅಧಿಕೃತವಾಗಿ ಪ್ರಕಟಿಸಿದೆ.
ಮುಂದಿನ ವರ್ಷದಲ್ಲಿ ಭಾರತ ಚೀನಾವನ್ನು ಹಿಂದಿಕ್ಕುವ ಮೂಲಕ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಲಿದೆ ಎಂದು ವಿಶ್ವಸಂಸ್ಥೆ ಹೇಳಿದೆ.
ನವೆಂಬರ್ 15ರ ವೇಳೆಗೆ ವಿಶ್ವದ ಜನಸಂಖ್ಯೆ ಎಂಟು ಬಿಲಿಯನ್ (800 ನೂರು ಕೋಟಿ) ತಲುಪಲಿದೆ. ಜುಲೈ 11 ರಂದು ವಿಶ್ವ ಜನಸಂಖ್ಯಾ ದಿನದ ಸಂದರ್ಭದಲ್ಲಿ ಬಿಡುಗಡೆಯಾದ ಯುಎನ್ ವರ್ಲ್ಡ್ ಪಾಪ್ಯುಲೇಶನ್ ಪ್ರಾಸ್ಪೆಕ್ಟ್ಸ್ 2022 ಈ ವಿವರಗಳನ್ನು ಒಳಗೊಂಡಿದೆ. ಇದೀಗ ಗಡುವು ಸಮೀಪಿಸುತ್ತಿದ್ದಂತೆ ವಿವರಗಳನ್ನು ಬಿಡುಗಡೆ ಮಾಡಲಾಗಿದೆ.
2050 ರ ವೇಳೆಗೆ, ವಿಶ್ವದ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನರು ಹೆಚ್ಚಾಗುತ್ತಾರೆ ಎಂದು ವರದಿಯಾಗಿದೆ.