ನವದೆಹಲಿ: ನಿನ್ನೆ ಪಾಕಿಸ್ತಾನ ಮಿಸೈಲ್ ಗೆ ಸಂಬಂಧಿಸಿದಂತೆ ಆರೋಪವೊಂದನ್ನ ಮಾಡಿತ್ತು. ಭಾರತಕ್ಕೆ ಸೇರಿದ ಸೂಪರ್ ಸಾನಿಕ್ ಮಿಸೈಲ್ ನಮ್ಮ ಗಡಿಯಲ್ಲಿ ಬಿದ್ದಿದೆ. ಇದಕ್ಕೆ ಸಂಬಂಧಿಸಿದಂತೆ ಭಾರತ ವಿವರಣೆ ನೀಡಬೇಕೆಂದು ಒತ್ತಾಯ ಹಾಕಿತ್ತು.
ಪಾಕಿಸ್ತಾನದ ಗಡಿಪ್ರದೇಶದಲ್ಲಿ ಪತನವಾದ ಮಿಸೈಲ್, ಭಾರತದ್ದೇ ಎಂದು ರಕ್ಷಣಾ ಇಲಾಖೆ ಸ್ಪಷ್ಡಪಡಿಸಿದೆ. ಅಷ್ಟೇ ಅಲ್ಲ ಅಚಾನಕ್ಕಾಗಿ ಆದ ಘಟನೆಗೆ ವಿಷಾದವನ್ನು ವ್ಯಕ್ತಪಡಿಸಿದ್ದಾರೆ. ತಾಂತ್ರಿಕ ದೋಷದಿಂದಾಗಿ ಕ್ಷಿಪಣಿಯೊಂದು ಹಾರಿದೆ. ಅದು ಪಾಕಿಸ್ತಾನದ ಗಡಿಯಲ್ಲಿ ಬಿದ್ದಿದೆ. ಘಟನೆಗೆ ವಿಷಾದ ವ್ಯಕ್ತಪಡಿಸುತ್ತೇವೆ. ಈ ಬಗ್ಗೆ ಉನ್ನತಮಟ್ಟದ ವಿಚಾರಣೆಯನ್ನು ಮಾಡಲಾಗುತ್ತದೆ ಎಂದಿದ್ದಾರೆ.
ಇದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂಬುದೇ ಸಮಾಧಾನಕರ. ಪತನಗೊಂಡ ಮಿಸೈಲ್ ವಸ್ತುಗಳನ್ನ ಪಾಕಿಸ್ತಾನ ಡಿಫೆನ್ಸ್ ಆಪರೇಷನ್ಸ್ ಸೆಂಟರ್ ವಶಕ್ಕೆ ಪಡೆದಿದೆ. ಇದು ಪಾಕಿಸ್ತಾನ ವಾಯುಗಡಿಯನ್ನು ಉಲ್ಲಂಘಿಸಿದಂತೆಯೆ. ಗೋಡೆಗೆ ಮಿಸೆಲ್ ಬಡಿದ ಕಾರಣ ಅದು ಉರಳಿ ಬಿದ್ದಿದೆ. ಯಾವುದೇ ಪ್ರಾಣಹಾನಿಯಾಗಿಲ್ಲವೆಂದು ಎಎಸ್ಪಿಆರ್ ಡಿಜಿ ಬಾಬರ್ ಇಫ್ತಿಕರ್ ಮಾಹಿತಿ ನೀಡಿದ್ದಾರೆ.