ಹೆಚ್ಚುತ್ತಿರುವ ಮಧುಮೇಹ ರೋಗಿಗಳು : ಚೀನಾದೊಂದಿಗೆ ಸ್ಪರ್ಧೆಗಿಳಿದ ಭಾರತ…!

ಮಧುಮೇಹ ರೋಗ ಸದ್ದಿಲ್ಲದೆ ತನ್ನ ವೇಗವನ್ನು ಹೆಚ್ಚಿಸಿದೆ. ವರ್ಷದಿಂದ ವರ್ಷಕ್ಕೆ ಮಧುಮೇಹ ಪೀಡಿತರ ಸಂಖ್ಯೆ ವಿಪರೀತವಾಗಿ ಹೆಚ್ಚುತ್ತಿದೆ. ಮಧುಮೇಹ ರೋಗಿಗಳ ಜನಸಂಖ್ಯೆಯಲ್ಲಿ ಚೀನಾ ಮತ್ತು ಭಾರತ ಹಠಕ್ಕೆ ಬಿದ್ದವರಂತೆ ಸ್ಪರ್ಧಿಸುತ್ತಿವೆ.

ಚೀನಾ 141 ಮಿಲಿಯನ್ ಮಧುಮೇಹ ರೋಗಿಗಳೊಂದಿಗೆ ವಿಶ್ವದ ಅಗ್ರಸ್ಥಾನದಲ್ಲಿದ್ದರೆ, 77 ಮಿಲಿಯನ್ ಮಧುಮೇಹ ರೋಗಿಗಳಿಂದ ಭಾರತ ಎರಡನೇ ಸ್ಥಾನದಲ್ಲಿದೆ.

2045 ರ ವೇಳೆಗೆ ನಮ್ಮ ದೇಶದಲ್ಲಿ ಮಧುಮೇಹ ಪೀಡಿತರ ಸಂಖ್ಯೆ 135 ಮಿಲಿಯನ್ ತಲುಪುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿಸಿದೆ.

ಮಹಿಳೆಯರಿಗಿಂತಲೂ (40 ಪ್ರತಿಶತ)
ಪುರುಷರಿಗೆ (60 ಪ್ರತಿಶತ)
ಹೆಚ್ಚು ಪರಿಣಾಮ ಬೀರುತ್ತಿದೆ.

2020 ರಲ್ಲಿ ದೇಶದಲ್ಲಿ 7 ಲಕ್ಷ ಜನರು ಮಧುಮೇಹದಿಂದ ಸಾವನ್ನಪ್ಪಿದ್ದಾರೆ.
ICMR ಅಂಕಿಅಂಶಗಳ ಪ್ರಕಾರ, ಕೇರಳವು ಶೇ. 19.8 ಪ್ರತಿಶತದಷ್ಟು ಮಧುಮೇಹ ರೋಗಿಗಳೊಂದಿಗೆ ದೇಶದಲ್ಲಿ ಅಗ್ರಸ್ಥಾನದಲ್ಲಿದೆ. ಆ ನಂತರದ ಸ್ಥಾನದಲ್ಲಿ ಚಂಡೀಗಢ ಶೇ.13.6 ತಮಿಳುನಾಡು 8.9  ಮತ್ತು ಆಂಧ್ರಪ್ರದೇಶ ಶೇ. 9 ರಷ್ಟು ನಂತರದ ಸ್ಥಾನದಲ್ಲಿವೆ.

ಮಧುಮೇಹ ಪೀಡಿತರ ಸಂಖ್ಯೆಯಲ್ಲಿ ಹೆಚ್ಚಳಕ್ಕೆ ವಿವಿಧ ಅಂಶಗಳು ಕಾರಣವೆಂದು ಈಗಾಗಲೇ ಗುರುತಿಸಲಾಗಿದೆ. ಸ್ಥೂಲಕಾಯ, ದೈಹಿಕ ವ್ಯಾಯಾಮದ ಕೊರತೆ, ಜಂಕ್ ಫುಡ್ ಸೇವನೆ, ಸಮಯಕ್ಕೆ ಸರಿಯಾಗಿ ಊಟ ಮಾಡದಿರುವುದು, ಕೆಲಸದ ಒತ್ತಡ, ಜೀವನಶೈಲಿಯಲ್ಲಿನ ಬದಲಾವಣೆ, ಕುಟುಂಬದ ಆನುವಂಶಿಕತೆ ಪ್ರಮುಖ ಕಾರಣಗಳಾಗಿವೆ.

ಪ್ರತಿ ಇಬ್ಬರು ಮಧುಮೇಹಿಗಳಲ್ಲಿ ಒಬ್ಬರಿಗೆ ಈ ಕಾಯಿಲೆ ಇದೆ ಎಂದು ತಿಳಿದಿರುವುದಿಲ್ಲ ಎಂದು ಸಂಶೋಧನೆಯಲ್ಲಿ ತಿಳಿದು ಬಂದಿದೆ. ಇದು ಕೂಡ ಮಧುಮೇಹ ರೋಗಿಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!