ಶಿವಮೊಗ್ಗದಲ್ಲಿ ಜಾಂಡೀಸ್ ಹೆಚ್ಚಳ : ಅಕ್ಕ ಪಕ್ಕದ ಊರುಗಳಿಗೆ ಎಚ್ಚರಿಕೆ..!

suddionenews
1 Min Read

ಶಿವಮೊಗ್ಗ: ಮಳೆಗಾಲ, ಚಳಿಗಾಲದಲ್ಲಿ ಒಂದಷ್ಟು ವೈರಸ್ ಗಳ ಹೆಚ್ಚಳದಿಂದ ಶೀತ, ನೆಗಡಿ, ಜ್ವರದಂತ ರೋಗಗಳು ಕಾಡುತ್ತವೆ. ನೀರನ್ನ ಒಂದೇ ಕಡೆ ಸಂಗ್ರಹಿಸಿದರೆ, ಸೊಳ್ಳೆಗಳ ಉತ್ಪತ್ತಿಯಿಂದ ಡೆಂಗ್ಯೂ ತಗಲುತ್ತದೆ. ಆದರೆ ನೀರು ಕಲುಷಿತಗೊಂಡರೆ ಅದರಿಂದ ಬೇರೆ ಸಮಸ್ಯೆಗಳು ಹೆಚ್ಚಾಗುತ್ತವೆ. ಇದೀಗ ಶಿವಮೊಗ್ಗದಲ್ಲಿ ಜಾಂಡೀಸ್ ಸಮಸ್ಯೆ ಉಲ್ಬಣವಾಗುತ್ತಿದೆ. ಇದರಿಂದ ಜನ ಆತಂಕಗೊಂಡಿದ್ದಾರೆ.

ಡೆಂಗ್ಯೂ, ಝೀಕಾ ಅಂತ ತತ್ತರಿಸಿದ್ದ ಜನತೆಗೆ ಈಗ ಜಾಂಡೀಸ್ ತಲೆ ಬಿಸಿ ಮಾಡಿದೆ. ಆರೋಗ್ಯ ಇಲಾಖೆಯಿಂದ ಜಾಂಡೀಸ್ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ದಿನೇ ದಿನೇ ಜಾಂಡೀಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಜಾಂಡೀಸ್ ಪತ್ತೆಯಾದವರ ವಿವರವನ್ನು ಸರಿಯಾಗಿ ಪಾಲಿಸದ ಕಾರಣ, ಮತ್ತೆ ಮತ್ತೆ ಸೋಂಕು ಹೆಚ್ಚಾಗುತ್ತಿದೆ ಎನ್ನಲಾಗಿದೆ. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಅತಿ ಹೆಚ್ಚು ಜಾಂಡೀಸ್ ಸೋಂಕಿತರು ದಾಖಲಾಗಿರುವುದು.

ಇನ್ನು ಜಾಂಡೀಸ್ ಬರಲು ಕಾರಣ, ಕಲುಷಿತ ನೀರು ಕುಡಿಯುವುದರಿಂದ, ಕಲುಷಿತ ಆಹಾರವನ್ನು ಸೇವನೆ ಮಾಡುವುದರಿಂದ ವೈರಸ್ ದೇಹವನ್ನು ಸೇರುತ್ತದೆ. ರಕ್ತ ವರ್ಗಾವಣೆ, ಬಳಸಿದ ಸಿರಿಂಜ್ ಬಳಕೆ, ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದಾನೂ ಜಾಂಡೀಸ್ ಬರಲಿದೆ. ಕೆಂಪು ರಕ್ತ ಕಣಗಳ ವಿಭಜನೆಯಿಂದ ಉತ್ಪತ್ತಿಯಾದ ಹಳದಿ, ಕೇಸರಿ ಬಣ್ಣ ಮಿಶ್ರಣದ ಹೆಚ್ಚುವರಿ ಬೈಲುರುಬಿನ್‌ನಿಂದ ಕಾಮಾಲೆ ರೋಗ ಬರುತ್ತದೆ. ಆರೋಗ್ಯವಂತ ಮನಷ್ಯನಲ್ಲಿ ಈ ಪ್ರಮಾಣ 0.2 ನಿಂದ 0.8 ಇರಬೇಕು. ಇದಕ್ಕಿಂತ ಹೆಚ್ಚಾದರೆ ಜಾಂಡಿಸ್‌ ಕಾಯಿಲೆ ಬಂದಿದೆ ಎಂದರ್ಥ. ಇದು ಯಕೃತಿನ ಹಾನಿಗೆ ನೇರ ಕಾರಣವಾಗುತ್ತದೆ. ಸೋಂಕಿನ ಪ್ರಮಾಣ ತೀವ್ರವಾದಂತೆ ರೋಗಿಯ ಕಣ್ಣು ಹಳದಿಯಾಗುವ ಜತೆಗೆ ಮೂತ್ರ ಕಡು ಹಳದಿ ಬಣ್ಣಕ್ಕೆ ತಿರುಗುತ್ತದೆ.

Share This Article
Leave a Comment

Leave a Reply

Your email address will not be published. Required fields are marked *