ಅರೆಕಾಲಿಕ ಉಪನ್ಯಾಸಕರಿಗೆ ಗೌರವ ಧನ ಹೆಚ್ಚಳ…!

suddionenews
1 Min Read

 

ಬೆಂಗಳೂರು: ವೇತನ ಪರಿಷ್ಕರಣೆ ವರದಿ ಆಧರಿಸಿ ಸರ್ಕಾರಿ ಎಂಜಿನಿಯರಿಂಗ್ ಹಾಗೂ ಪಾಲಿಟೆಕ್ನಿಕ್ ಅರೆಕಾಲಿಕ ಉಪನ್ಯಾಸಕರಿಗೆ ಗೌರವ ಧನ ಹೆಚ್ಚಳ ಮಾಡಿ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಶಿಕ್ಷಣ ಇಲಾಖೆಯ ಮಹತ್ವದ ಆದೇಶದಿಂದ ಉಪನ್ಯಾಸಕರು ಖುಷಿಯಾಗಿದ್ದಾರೆ.

ಅರೆಕಾಲಿಕ ಉಪನ್ಯಾಸಕರಿಗೆ 5 ಸಾವಿರದಿಂದ 8 ಸಾವಿರ ರೂಪಾಯಿಯ ತನಕ ಗೌರವಧನ ಹೆಚ್ಚಳ ಮಾಡಿದ್ದಾರೆ. ಎಐಸಿಟಿಯು ಮಾನದಂಡ ಇರುವವರಿಗೆ ಸರ್ಕಾರಿ ಕಾಲೇಜುಗಳಲ್ಲಿ 5 ವರ್ಷ ಮೇಲ್ಪಟ್ಟವರಿಗೆ 32 ಸಾವಿರ. ಪಾಲಿಟೆಕ್ನಿಕ್ ಗಳಲ್ಲಿ 28 ಸಾವಿರ ರೂಪಾಯಿ ಗೌರವ ಧನ ಹಾಗೂ 5 ವರ್ಷಕ್ಕಿಂತ ಕೆಳಪಟ್ಟವರಿಗೆ ಕ್ರಮವಾಗಿ 30 ಸಾವಿರ ನೀಡಲಾಗುವುದು. ಪಾಲಿಟೆಕ್ನಿಕ್ ನಲ್ಲಿ 26 ಸಾವಿರ ರೂಪಾಯಿಯನ್ನು ನಿಗಧಿ ಮಾಡಲಾಗಿದೆ.

 

ಉನ್ನತ ಶಿಕ್ಷಣ ಇಲಾಖೆಯ ತಾಂತ್ರಿಕ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳು, ಸರ್ಕಾರಿ ಪಾಲಿಟೆಕ್ನಿಕ್‌ಗಳು ಮತ್ತು ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುವ ಅರೆಕಾಲಿಕ ಉಪನ್ಯಾಸಕರುಗಳಿಗೆ ಕ್ರಮವಾಗಿ ಹಾಲಿ ವಾರಕ್ಕೆ ಗರಿಷ್ಠ 8/9/9 ಗಂಟೆಗಳ ಕಾರ್ಯಭಾರಕ್ಕೆ ಬದಲಾಗಿ, ವಾರಕ್ಕೆ ಗರಿಷ್ಠ 15/17/14 ಗಂಟೆಗಳ ಕಾರ್ಯಭಾರವನ್ನು ನಿಗದಿಪಡಿಸಿದ್ದು, ಅವರ ಮಾಸಿಕ ಗೌರವಧನವನ್ನು ಭವಿಷ್ಯವರ್ತಿಯಾಗಿ ಅಂದರೆ ಈ ಆದೇಶ ಹೊರಡಿಸಿದ ದಿನಾಂಕದಿಂದ ಜಾರಿಗೆ ಬರುವಂತೆ ಷರತ್ತುಗಳಿಗೊಳಪಟ್ಟು ನಿಗದಿಪಡಿಸಿ ಉನ್ನತ ಶಿಕ್ಷಣ ಇಲಾಖೆ (ತಾಂತ್ರಿಕ) ಸರ್ಕಾರದ ಅಧೀನ ಕಾರ್ಯದರ್ಶಿ ಮಹಾಂತಪ್ಪ ಎಸ್. ತುರಕನೂರ ಆದೇಶ ಹೊರಡಿಸಿದ್ದಾರೆ. ಈ ಸುದ್ದಿ ಅರೆಕಾಲಿಕ ಉಪನ್ಯಾಸಕರಿಗೆ ಸಿಹಿ ಸುದ್ದಿ ನೀಡಿದೆ. ಸರ್ಕಾರದ ಈ ಮಹತ್ವದ ಆದೇಶಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *