ಚಿತ್ರದುರ್ಗ, ಸುದ್ದಿಒನ್, : ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ರವರು ಆಡಳಿತ ಯಂತ್ರದ ಪ್ರಮುಖ ಅಂಗವಾಗಿರುವ ಸರ್ಕಾರಿ ನೌಕರರ ತುಟ್ಟಿ ಬತ್ತೆಯನ್ನು ಶೇ 3.75 ರಷ್ಟು ಹೆಚ್ಚಳ ಮಾಡಿ ರಾಜ್ಯದ 6.00ಲಕ್ಷ ಸರ್ಕಾರಿ ನೌಕರರು 4.50ಲಕ್ಷ ಪಿಂಚಣಿದಾರರು, 3.00ಲಕ್ಷ ನಿಗಮ ಮಂಡಳಿ ನೌಕರರಿಗೆ ಮತ್ತು ಅವರ ಕುಟುಂಬದ ಸದಸ್ಯರಿಗೆ ಆರ್ಥಿಕ ಸೌಲಭ್ಯವನ್ನು ನೀಡುವ ಮೂಲಕ ಸರ್ಕಾರಿ ನೌಕರರ ಮತ್ತು ನೌಕರರ ಕುಟುಂಬದ ಸದಸ್ಯರ ಪ್ರೀತಿಗೆ ಪಾತ್ರರಾಗಿದ್ದಾರೆ.
ಅದೇ ರೀತಿ ನೌಕರರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ತುಟ್ಟಿಭತ್ಯೆ ಸೌಲಭ್ಯವನ್ನು ದೊರಕಿಸಿದ ಮುಖ್ಯಮಂತ್ರಿಳಿಗೆ, ಸರ್ಕಾರದ ಎಲ್ಲಾ ಸಚಿವರಿಗೆ, ಆದೇಶ ಮಾಡಲು ಸಹಕರಿಸಿದ ಎಲ್ಲಾ ಹಂತದ ಅಧಿಕಾರಿ ಮತ್ತು ನೌಕರರಿಗೆ ವಿಶೇಷವಾಗಿ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಷಡಕ್ಷರಿ ಅವರಿಗೆ ಹಾಗೂ ಕೇಂದ್ರ ಸಂಘದ ಎಲ್ಲಾ ಪದಾಧಿಕಾರಿಗಳಿಗೆ ಚಿತ್ರದುರ್ಗ ಜಿಲ್ಲೆಯ ಸಮಸ್ತ ಸರ್ಕಾರಿ ನೌಕರರ ಪರವಾಗಿ ಹೃದಯಪೂರ್ವಕ ಕೃತಜ್ಞತೆಯನ್ನು ಈ ಮೂಲಕ ಸಲ್ಲಿಸುತ್ತೇನೆ ಎಂದು ಚಿತ್ರದುರ್ಗ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಕೆ. ಮಂಜುನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮೇಲೆ ಅಪಾರ ಗೌರವ ಪ್ರೀತಿ ಕಾಳಜಿ ಇರುವ ರಾಜ್ಯದ ಮುಖ್ಯಮಂತ್ರಿಗಳಾಗಿರುವ ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿರವರಲ್ಲಿ ಜಿಲ್ಲೆಯ ಮತ್ತು ರಾಜ್ಯದ ಸಮಸ್ತ ಸರ್ಕಾರಿ ನೌಕರರ ಪರವಾಗಿ ತಮ್ಮಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ, ನೌಕರರ ಬಹುದಿನದ ಬೇಡಿಕೆಯಾದ 7ನೇ ವೇತನ ಆಯೋಗ ರಚನೆ ಮತ್ತು NPS ರದ್ದುಪಡಿಸಿ OPS ಜಾರಿಗೆ ಗೊಳಿಸಿ ರಾಜ್ಯದ ಸಮಸ್ತ ಸರ್ಕಾರಿ ನೌಕರರ ಹಾಗೂ ಅವರ ಕುಟುಂಬದವರ ಪಾಲಿಗೆ ಬೆಳಕಾಗಬೇಕೆಂದು ನೌಕರರ ಹಲವಾರು ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಸರ್ಕಾರದ ಭಾಗವಾಗಿರುವ ನೌಕರರ ಪ್ರೀತಿಗೆ ಪಾತ್ರವಾಗಿರುವ, ಜನಪರ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳುವ ಮೂಲಕ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆಗಳನ್ನು ತಲುಪಿಸಬೇಕೆಂಬ ಪಣತೊಟ್ಟಿರುವ, ತಮ್ಮಲ್ಲಿ ಎರಡು ಬೇಡಿಕೆಗಳನ್ನು ಆದಷ್ಟು ಬೇಗ ಈಡೇರಿಸಬೇಕಾಗಿ ಜಿಲ್ಲೆಯ ಮತ್ತು ರಾಜ್ಯದ ಸಮಸ್ತ ಸರ್ಕಾರಿ ನೌಕರರು ಮತ್ತು ಅವರ ಕುಟುಂಬದವರ ಪರವಾಗಿ ಮನವಿ ಮಾಡಿಕೊಳ್ಳುತ್ತೇನೆ.