ಅಡಿಕೆ ಬೆಳೆಗಾರರು ತಮ್ಮ ಅಡಿಕೆ ಬೆಳೆಯನ್ನು ಸಾಕಷ್ಟು ಕಷ್ಟಪಟ್ಟು ಉಳಿಸಿಕೊಂಡಿರುತ್ತಾರೆ. ರೋಗಗಳಿಂದ ಅಡಿಕೆಯನ್ನ ಕಾಪಾಡಿಕೊಳ್ಳಬೇಕು, ಮಳೆ ಇಲ್ಲದೆ ಒಣಗಿದಾಗ ಅವುಗಳನ್ನ ಕಾಪಾಡಬೇಕು. ಇಷ್ಟೆಲ್ಲಾ ಕಾಳಜಿ ಮಾಡಿ ಬೆಳೆ ನೋಡಿಕೊಂಡರು ಕೆಲವೊಮ್ಮೆ ಅಡಿಕೆ ಬೆಲೆ ಪಾತಾಳಕ್ಕೆ ಕುಸಿದು ಬಿಡುತ್ತದೆ. ಸದ್ಯ ಅಡಿಕೆ ಹಾಗೂ ಕೊಬ್ಬರಿ ಬೆಳೆಗಾರರಿಗೆ ಸಂತಸಕರ ದಿನ ಬಂದಿದೆ. ಅದುವೇ ಬೆಲೆ ಏರಿಕೆಯಾಗಿದ್ದು, ಮುಂದೆ ಇನ್ನು ಜಾಸ್ತಿಯಾಗುವ ನಿರೀಕ್ಷೆ ಇದೆ.

ಸದ್ಯ ಅಡಿಕೆ ಧಾರಣೆಯನ್ನು ನೋಡುವುದಾದರೆ, ಶಿವಮೊಗ್ಗದಲ್ಲಿ ರಾಶಿ ಅಡಿಕೆ ಬೆಲೆ ಕ್ವಿಂಟಲ್ ಗೆ ಕನಿಷ್ಠ 40,689 ಇದ್ದರೆ ಗರಿಷ್ಠ ಬೆಲೆ 54,900 ರೂಪಾಯಿಗೆ ಮಾರಾಟವಾಗಿದೆ. ಗೊರಬಲುವಾಡಿಕೆ ಬೆಲೆ ಕ್ವಿಂಟಾಲ್ ಗೆ 22,309 ರೂಪಾಯಿಯಂತೆ ಮಾರಾಟವಾಗಿದೆ. ಯಲ್ಲಾಪುರ ಅಡಿಕೆ ಮಾರುಕಟ್ಟೆಯಲ್ಲಿ ರಾಶಿ ಬೆಲೆ ಅಡಿಕೆ ಕನಿಷ್ಠ 40,689 ರೂಪಾಯಿ ಇದ್ದು, ಗರಿಷ್ಠ 54,900 ರೂಪಾಯಿಗೆ ಮಾರಾಟವಾಗಿದೆ. ಇನ್ನು ಸಿದ್ದಾಪುರದಲ್ಲಿ ತಟ್ಟಿಬೆಟ್ಟೆ ಅಡಿಕೆ ಗರಿಷ್ಠ 36,119 ರೂಪಾಯಿಗೆ ಮಾರಾಟವಾಗಿದೆ. ರಾಶಿ ಅಡಿಕೆ 47,299 ರೂಪಾಯಿಗೆ ಹೋಗಿದೆ. ಇದು ಅಡಿಕೆ ಬೆಳೆಗಾರರಿಗೆ ಖುಷಿ ಕೊಟ್ಟಿದ್ದರೆ, ಕೊಬ್ಬರಿ ಶೇಖರಿಸಿದವರಿಗೂ ಸಂತಸದ ಸುದ್ದಿ ಸಿಕ್ಕಿದೆ.

ಕಳೆದ ಕೆಲವು ತಿಂಗಳಿನಿಂದ ಕೊಬ್ಬರಿ ಬೆಲೆಯಲ್ಲಿ ಇಳಿಕೆಯಾಗುತ್ತಲೆ ಇತ್ತು. ಇದರಿಂದ ರೈತ ಕೂಡ ಕಂಗಾಲಾಗಿದ್ದ. ಇದೀಗ ಕೊಭರಿ ಬೆಲೆಯಲ್ಲೂ ಏರಿಕೆಯಾಗಿದೆ. ತಿಪಟೂರು ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ಒಂದು ಕ್ವಿಂಟಾಲ್ ಗೆ ಕನಿಷ್ಠ 17 ಸಾವಿರ ರೂಪಾಯಿ ಇದ್ದರೆ ಗರಿಷ್ಠ 19 ಸಾವಿರಕ್ಕೆ ಮಾರಾಟವಾಗಿದೆ. ಹಾಗೇ ಅರಸೀಕೆರೆ ಮಾರುಕಟ್ಟೆಯಲ್ಲಿ 16 ಸಾವಿರ ರೂಪಾಯಿಗೆ ಕ್ವಿಂಟಾಲ್ ಕೊಬ್ಬರಿ ಮಾರಾಟವಾಗಿದೆ.

