ಆದಾಯ ತೆರಿಗೆ ಮಿತಿ ಹೆಚ್ಚಳ : ಕೇಂದ್ರ ಬಜೆಟ್ ಹೈಲೇಟ್ಸ್ ಇಲ್ಲಿದೆ

suddionenews
1 Min Read

 

ಕೇಂದ್ರ ಬಜೆಟ್ ನಲ್ಲಿ 12 ಲಕ್ಷದ ಆದಾಯದವರೆಗೂ ತೆರಿಗೆ ವಿನಾಯಿತಿಯನ್ನು ಹೆಚ್ಚಳ ಮಾಡಲಾಗಿದೆ. ಇದರಿಂದ ತಿಂಗಳಿಗೆ 1 ಲಕ್ಷ ರೂಪಾಯಿ ದುಡಿಯುವವರಿಗೂ ತೆರಿಗೆ ಪಾವತಿ ಮಾಡಬೇಕಾಗಿಲ್ಲ. ಬಜೆಟ್ ಮಂಡನೆ ವೇಳೆ ಹೊಸ ಆದಾಯ ತೆರಿಗೆ ಮಸೂದೆಯನ್ನು ಮಂಡಿಸಲಾಗುವುದು ಎಂದು ಸಚಿವೆ ನಿರ್ಮಲಾ ಸೀತರಾಮನ್ ತಿಳಿಸಿದ್ದಾರೆ. ಈ ಮಸೂದೆಯು ನೇರ ತೆರಿಗೆ ಕೋಡ್ ಅನ್ನು ಆಧರಿಸಿದೆ ಎಂದು ನಿರೀಕ್ಷಿಸಲಾಗಿದೆ. ಇದು ಅಸ್ತಿತ್ವದಲ್ಲಿರುವ 1961ರ ಆದಾಯ ತೆರಿಗೆ ಕಾಯಿದೆಯಲ್ಲಿ ಬದಲಾವಣೆ ಆಗಲಿದೆ.

* ಕ್ಯಾನ್ಸರ್ ಹಾಗೂ ಇನ್ನಿತರ ಮಾರಣಾಂತಿಕ ಅಪರೂಪದ ಕಾಯಿಲೆಗಳಿಂದ ರಕ್ಷಿಸಬಲ್ಲ 36 ಜೀವ ರಕ್ಷಕ ಔಷಧಿಗಳನ್ನು ತೆರಿಗೆ ಮುಕ್ತ ಮಾಡುವ ಬಗ್ಗೆ ಘೋಷಣೆ ಮಾಡಲಾಗಿದೆ.

* ಬೀದಿ ಬದಿ ವ್ಯಾಪಾರಿಗಳು ಮತ್ತು ಆನ್ಲೈನ್ ಹಾಗೂ ನಗರ ಕೆಲಸಗಾರರಿಗೆ, ಗುರುತಿನ ಕಾರ್ಡ್ ಗಳು ಮತ್ತು ಇ-ಶ್ರಮ್ ಪೋರ್ಟಲ್ ನಲ್ಲಿ ನೋಂದಣಿಯನ್ನು ಒದಗಿಸಲಾಗುವುದು. ನಗರ ಕಾರ್ಮಿಕರ ಸಾಮಾಜಿಕ – ಆರ್ಥಿಕ ಉನ್ನತಿಗಾಗಿ ಯೋಜನೆ ಜಾರಿ, ಪ್ರಧಾನಮಂತ್ರಿ ಸ್ವನಿಧಿ ಯೋಜನೆಯನ್ನು ಬ್ಯಾಂಕ್ ಗಳಿಂದ ವರ್ಧಿತ ಸಾಲಗಳೊಂದಿಗೆ ನವೀಕರಿಸಲಾಗುವುದು. ಯುಪಿಐ ಲಿಂಕ್ ಮಾಡಿದ ಕ್ರೆಡಿಟ್ ಕಾರ್ಡ್ ಗಳು 30 ಸಾವಿರ ರೂಪಾಯಿ ಮಿತಿ ಮತ್ತು ಸಾಮಾರ್ಥ್ಯ ನಿರ್ಮಾಣ ಬೆಂಬಲ ನೀಡುವ ಘೋಷಣೆ ಮಾಡಲಾಗುವುದು.

* ಗ್ರಾಮೀಣ ಭಾಗದಲ್ಲಿ 1.5 ಲಕ್ಷ ಪೋಸ್ಟ್ ಆಫೀಸ್ ಗಳನ್ನು ಹೆಚ್ಚಳ ಮಾಡುವ ಗುರಿ ಹೊಂದಲಾಗಿದೆ.

* ದೇಶದ ಪ್ರಮುಖ 50 ಪ್ರವಾಸಿ ತಾಣಗಳ ಅಭಿವೃದ್ಧಿ ಯೋಜನೆಯನ್ನು ಹಾಕಿಕೊಳ್ಳಲಾಗಿದೆ.

* ಆರೋಗ್ಯ ಅಭಿವೃದ್ಧಿ ಉದ್ದೇಶದಿಂದ ಒಂದು ಕೋಟಿ ಹಾಲುಣಿಸುವ ತಾಯಂದಿರಿಗೆ ನ್ಯೂಟ್ರಿಷನ್ ಭರಿತ ಆಹಾರ ನೀಡುವ ಯೋಜನೆಯನ್ನು ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *