2026-27 ಹಣಕಾಸು ವರ್ಷದ ತೆರಿಗೆ ವ್ಯವಸ್ಥೆಯಲ್ಲಿಯೂ ದೊಡ್ಡ ಮಟ್ಟದ ಬದಲಾವಣೆ ಇರುವುದಿಲ್ಲ. 2025-26 ಹಣಕಾಸು ವರ್ಷದಂತೆ ತೆರಿಗೆ ಸ್ಲ್ಯಾಬ್ಗಳು ಮುಂದುವರಿಯಲಿವೆ. ಜೊತೆಗೆ ಹೊಸ ತೆರಿಗೆ ಪದ್ಧತಿಯೇ ಡೀಫಾಲ್ಟ್ ಆಯ್ಕೆಯಾಗಿ ಮುಂದುವರಿಯಲಿದೆ.
ತೆರಿಗೆ ಪದ್ಧತಿಯಡಿಯಲ್ಲಿ ವರ್ಷಕ್ಕೆ 12 ಲಕ್ಷ ರೂಪಾಯಿ ವರೆಗೆ ಆದಾಯ ಹೊಂದಿರುವ ವ್ಯಕ್ತಿಗಳು ಆದಾಯ ತೆರಿಗೆಯಿಂದ ಪರಿಣಾಮಕಾರಿಯಾಗಿ ವಿನಾಯಿತಿ ಪಡೆಯಬಹುದು. ಆದರೆ ಇದು ಸಾಮಾನ್ಯ ಆದಾಯಕ್ಕೆ ಮಾತ್ರ ಅನ್ವಯವಾಗುತ್ತದೆ. ಅಲ್ಪಾವಧಿಯ ಬಂಡವಾಳ ಲಾಭ (STCG) ಮತ್ತು ದೀರ್ಘಾವಧಿಯ ಬಂಡವಾಳ ಲಾಭ (LTCG)ಗಳಂತಹ ವಿಶೇಷ ಆದಾಯಗಳಿಗೆ ಇದು ಅನ್ವಯಿಸುವುದಿಲ್ಲ.
ಹೊಸ ತೆರಿಗೆ ಪದ್ಧತಿ ಸ್ವಯಂಚಾಲಿತವಾಗಿ ಅನ್ವಯವಾಗುತ್ತದೆ. ಆದರೆ ಸಂಬಳ ಪಡೆಯುವ ತೆರಿಗೆದಾರರು ತಮ್ಮ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಸಮಯದಲ್ಲಿ ಹಳೆಯ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡುವ ಅವಕಾಶ ಹೊಂದಿರುತ್ತಾರೆ. ಆದರೆ ನಿಗದಿತ ದಿನಾಂಕದ ನಂತರ ಸಲ್ಲಿಸುವ ವಿಳಂಬಿತ ಐಟಿಆರ್ ಅನ್ನು ಹೊಸ ತೆರಿಗೆ ಪದ್ಧತಿಯಡಿಯಲ್ಲಿ ಮಾತ್ರ ಸಲ್ಲಿಸಬೇಕಾಗುತ್ತದೆ.
ಹೊಸ ತೆರಿಗೆ ವ್ಯವಸ್ಥೆಯಡಿಯಲ್ಲಿ ಅನ್ವಯವಾಗುವ ಸ್ಲ್ಯಾಬ್ಗಳು ಹೀಗಿವೆ:
₹0 ರಿಂದ ₹4,00,000: ತೆರಿಗೆ ಇಲ್ಲ
₹4,00,001 ರಿಂದ ₹8,00,000: 5%
₹8,00,001 ರಿಂದ ₹12,00,000: 10%
₹12,00,001 ರಿಂದ ₹16,00,000: 15%
₹16,00,001 ರಿಂದ ₹20,00,000: 20%
₹20,00,001 ರಿಂದ ₹24,00,000: 25%
₹24,00,000 ಕ್ಕಿಂತ ಹೆಚ್ಚು: 30%
ಹೊಸ ತೆರಿಗೆ ವ್ಯವಸ್ಥೆಯಲ್ಲಿ ಕೆಲವು ಪ್ರಮುಖ ಸೌಲಭ್ಯಗಳೂ ಲಭ್ಯವಿವೆ.ಸಂಬಳ ಪಡೆಯುವ ನೌಕರರು ಹಾಗೂ ಪಿಂಚಣಿದಾರರಿಗೆ ₹75,000 ಪ್ರಮಾಣಿತ ಕಡಿತ.₹12 ಲಕ್ಷದವರೆಗೆ ತೆರಿಗೆಗೆ ಒಳಪಡುವ ಆದಾಯ ಹೊಂದಿರುವವರಿಗೆ ಸೆಕ್ಷನ್ 87A ಅಡಿಯಲ್ಲಿ ರಿಯಾಯಿತಿ.ಸಂಬಳ ಪಡೆಯುವ ಉದ್ಯೋಗಿಗಳಿಗೆ ಸೆಕ್ಷನ್ 80CCD(2) ಅಡಿಯಲ್ಲಿ ಮೂಲ ವೇತನದ 14% ವರೆಗೆ ರಾಷ್ಟ್ರೀಯ ಪಿಂಚಣಿ ಯೋಜನೆ (NPS)ಗೆ ಕಡಿತ.
60 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ
₹0 ರಿಂದ ₹2,50,000: ತೆರಿಗೆ ಇಲ್ಲ
₹2,50,001 ರಿಂದ ₹5,00,000: 5%
₹5,00,001 ರಿಂದ ₹10,00,000: 20%
₹10,00,000 ಕ್ಕಿಂತ ಹೆಚ್ಚು: 30%
ಹಿರಿಯ ನಾಗರಿಕರಿಗೆ (60-80 ವರ್ಷ)
₹0 ರಿಂದ ₹3,00,000: ತೆರಿಗೆ ಇಲ್ಲ
₹3,00,001 ರಿಂದ ₹5,00,000: 5%
₹5,00,001 ರಿಂದ ₹10,00,000: 20%
₹10,00,000 ಕ್ಕಿಂತ ಹೆಚ್ಚು: 30%
ಅತಿ ಹಿರಿಯ ನಾಗರಿಕರಿಗೆ (80 ವರ್ಷ ಮೇಲ್ಪಟ್ಟವರು)
₹0 ರಿಂದ ₹5,00,000: ತೆರಿಗೆ ಇಲ್ಲ
₹5,00,001 ರಿಂದ ₹10,00,000: 20%
₹10,00,000 ಕ್ಕಿಂತ ಹೆಚ್ಚು: 30%






