ಚಿತ್ರದುರ್ಗದಲ್ಲಿ ಏಪ್ರಿಲ್‌ 06 ರಂದು ನೂತನ ಶನೇಶ್ವರ ಸ್ವಾಮಿ ದೇಗುಲ ಲೋಕಾರ್ಪಣೆ

2 Min Read

 

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 03 :  ನಗರದ ಐ.ಯು.ಡಿ.ಪಿ. ಲೇಔಟ್, ಸೂರ್ಯಪುತ್ರ ನಗರದಲ್ಲಿ ಶ್ರೀ ಶ್ರೀಶನೇಶ್ವರಸ್ವಾಮಿ ಲೋಕ ಕಲ್ಯಾಣ ಟ್ರಸ್ಟ್ ವತಿಯಿಂದ ನೂತನವಾಗಿ ನಿರ್ಮಾಣವಾಗಿರುವ ಶ್ರೀ ಶ್ರೀಶನೇಶ್ವರಸ್ವಾಮಿಯ ದೇಗುಲ ಲೋಕಾರ್ಪಣೆ ಏಪ್ರಿಲ್ 4 ಮತ್ತು 5 ಹಾಗೂ 6 ಶನಿವಾರದವರೆಗೆ ಮೂರು ದಿನಗಳ  ವಿವಿಧ ಧಾರ್ಮಿಕ ಸಮಾರಂಭಗಳು ನಡೆಯಲಿದ್ದು ಶ್ರೀ ಶ್ರೀಶನೇಶ್ವರಸ್ವಾಮಿಯ ಪ್ರಾಣ ಪ್ರತಿಷ್ಠಾಪನೆ ಮತ್ತು ಗೋಪುರ ಕಳಸಾರೋಹಣ ಮಹೋತ್ಸವ ನಡೆಯಲಿದೆ ಎಂದು ಶ್ರೀ ಶ್ರೀಶನೇಶ್ವರಸ್ವಾಮಿ ಲೋಕ ಕಲ್ಯಾಣ ಟ್ರಸ್ಟ್ ನ ಅಧ್ಯಕ್ಷರಾದ ಸಿ. ಶಂಕರಮೂರ್ತಿ ಅವರು  ತಿಳಿಸಿದ್ದಾರೆ.

ಶ್ರೀ ಶ್ರೀಶನೇಶ್ವರಸ್ವಾಮಿ ಲೋಕ ಕಲ್ಯಾಣ ಟ್ರಸ್ಟ್ ಪೀಠಾಧಿಪತಿಗಳಾಗಿದ್ದ ಲಿಂಗೈಕ್ಯ  ಶ್ರೀ  ಮೋಹನ್‌ ಕುಮಾರ್ ಸ್ವಾಮೀಜಿ ಇವರ ಕೃಪಾಶೀರ್ವಾದೊಂದಿಗೆ ಸಮಾರಂಭ ಹಮ್ಮಿಕೊಂಡಿದ್ದು 4 ಮತ್ತು 5 ಹಾಗೂ 6ರ  ಶನಿವಾರದವರೆಗೆ  ಮಹೋತ್ಸವ ನಡೆಯಲಿದ್ದು ಏ 4 ರಂದು ಗಣಪತಿ ಪೂಜೆ, ಪುಣ್ಯಾಹ, ದೇವನಾಂದಿ, ಪಂಚಗವ್ಯ, ರಕ್ಷಾಸೂತ್ರಧಾರಣೆ, ಜಲಾಧಿವಾಸ, ಕ್ಷಿರಾಧಿವಾಸ, ಧಾನ್ಯಾಧಿವಾಸ, ಮಂಗಳಾರತಿ ನಡೆಯಲಿದೆ.  ಏಪ್ರಿಲ್ 5 ರ ಬೆಳಗ್ಗೆ 9.00 ಘಂಟೆಯಿಂದ ಕಲಶಸ್ಥಾಪನೆ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ಗಣಪತಿ ಹೋಮ, ರುದ್ರ ಹೋಮ, ಶನೈಶ್ವರ ಹೋಮ, 12.30ಕ್ಕೆ ಪುರ್ಣಾಹುತಿ, ಮಹಾಮಂಗಳಾರತಿ ಸಂಜೆ 5.00 ಘಂಟೆಗೆ ವಾಸ್ತು ಹೋಮ, ರಾಕ್ಷೆಘ್ನ ಹೋಮ, ಬಲಿಪ್ರಧಾನ ರತ್ನಾಧಿವಾಸ, ಚಿತ್ರಪಟಾಧಿ ವಾಸ, ಫಲಾಧಿವಾಸ, ಶಯ್ಯಧಿವಾಸ ಅಷ್ಟಬಂಧನ ನಡೆಯಲಿದೆ ಎಂದರು.

6ರಂದು ಸ್ವಸ್ತಿಶ್ರೀ ವಿಜಯಾಭ್ಯದಯ ಶ್ರೀ ಮನ್ನಪ ಶಾಲಿವಾಹನ ಶಕೆ 1945ನೇ ಶ್ರೀ ಶೋಭಕೃತ್‌ನಾಮ ಸಂವತ್ಸರ ಫಾಲ್ಗುಣ ಮಾಸ, ಕೃಷ್ಣ ಪಕ್ಷ ದ್ವಾದಶಿ ದಿನಾಂಕ 6-4-2024ನೇ ಶನಿವಾರ ಬೆಳಗ್ಗೆ 4.30 ರಿಂದ 4.55ಕ್ಕೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಶ್ರೀ ಶನೈಶ್ವರಸ್ವಾಮಿಯವರ ಪ್ರತಿಷ್ಠಾಪನ ಕುಂಭಾಭಿಷೇಕ ದೇವತಾ ದರ್ಶನ ಮೂಹೂರ್ತ. ಮತ್ತು ಬೆಳಗ್ಗೆ 10.30 ರಿಂದ ಗೋಪುರ ಕಳಸ ಸ್ಥಾಪನೆಯನ್ನು ಬೆಲಗೂರಿನ ಶ್ರೀ ಹನುಮನ್ನದ್ದೂತ ಅವಧೂತರಾದ ಶ್ರೀ ಬಿಂಧುಮಾಧವ ಶರ್ಮಾ ಗುರುಗಳ ಶಿಷ್ಯರಾದ ಶ್ರೀ ವಿಜಯಮಾರುತಿ ಶರ್ಮಾ ಗುರುಗಳ ಅಮೃತ ಹಸ್ತದಿಂದ ಶ್ರೀ ಶ್ರೀಶನೈಶ್ವರಸ್ವಾಮಿಯ ಪ್ರತಿಷ್ಠಾಪನಾ ಮತ್ತು ಕಳಶರೋಹಣ ಕಾರ್ಯಕ್ರಮ ನೆರವೇರಲಿದೆ ಎಂದರು.

ಸಮಿತಿ ಉಪಾಧ್ಯಕ್ಷರಾದ ಎಂ.ಕೆ.ರಘುನಾಥ್ ಮಾತನಾಡಿ, ಗೋಪುರಕಳಸ ಸ್ಥಾಪನೆ ನಂತರ ಅಭಿಷೇಕ ಭಕ್ತರಿಂದ ತತ್ಯನ್ಯಾಸಾದಿ ಕಲಾಹೋಮ, ಶನೈಶ್ವರ ಮೂಲಮಂತ್ರ ಹೋಮ, ಮಹಾಪೂರ್ಣಹುತಿ ಕುಂಭಾಭಿಷೇಕ, ಪಂಚಾಮೃತ ಅಭಿಷೇಕ, ರುದ್ರಭಿಷೇಕ, ಮಂಗಳದ್ರವ್ಯಗಳ ಅಭಿಷೇಕ, ಅಲಂಕಾರ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಮಧ್ಯಾಹ್ನ 12.30 ಗಂಟೆಯಿಂದ ಅನ್ನ ಸಂತರ್ಪಣೆ ನಡೆಯಲಿದೆ ಎಂದರು.

ಕಾರ್ಯಕಾರಿ ಸಮಿತಿ ಅಧ್ಯಕ್ಷರಾದ ಸಿ. ಶಂಕರಮೂರ್ತಿ, ಉಪಾಧ್ಯಕ್ಷರಾದ ಎಂ.ಕೆ. ರಘುನಾಥ್,  ಕಾರ್ಯಾಧ್ಯಕ್ಷರಾದ ಮಂಜುನಾಥ್, ಸಹ ಕಾರ್ಯದರ್ಶಿ ಎಸ್.ಟಿ. ನವೀನ್ ಕುಮಾರ್,  ಖಜಾಂಚಿ, ಸಿ.ಎಸ್. ಶಂಕರ್, ಉಪ ಖಜಾಂಚಿ ಎಸ್. ಬಾಲಾಜಿ, ಸ್ಥಾನ ಉಸ್ತುವಾರಿ  ಜಿ.ಎನ್. ಮಹೇಶ್  ಎನ್.ಜಿ.ಚಂದ್ರಯ್ಯ ಮಾಸ್ಟರ್, ಡಿ. ಗೋಪಿ, ಮಾಲತೇಶ್ ಅರಸ್,  ಅವರು ಉಪಸ್ಥಿತಿದ್ದರು.

Share This Article
Leave a Comment

Leave a Reply

Your email address will not be published. Required fields are marked *