ನಮ್ಮ ಮೆಟ್ರೋ ಯೆಲ್ಲೋ ಲೈನ್ ಉದ್ಘಾಟನೆ : ವೇದಿಕೆ ಮೇಲೆ ಸಿಎಂ – ಪಿಎಂ ಮಾತಿನ ಕೌಂಟರ್..!

1 Min Read

ಬೆಂಗಳೂರು: ಇಂದು ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿಗೆ ಆಗಮಿಸಿ, ಯೆಲ್ಲೋ ಲೈನ್ ಮೆಟ್ರೋ ಉದ್ಘಾಟನೆ ಮಾಡಿದ್ದಾರೆ. ಜೊತೆಗೆ ಮೂರು ವಂದೇ ಭಾರತ್ ಟ್ರೈನ್ ಗೆ ಚಾಲನೆಯನ್ನು ನೀಡಿದ್ದಾರೆ. ಬಳಿಕ ಎಲ್ಲರೂ ಒಂದು ರೌಂಡ್ ಮೆಟ್ರೋದಲ್ಲಿಯೇ ಪ್ರಯಾಣ ಮಾಡಿ ಬಂದಿದ್ದಾರೆ. ಇದೆಲ್ಲಾ ಆದ್ಮೇಲೆ ವೇದಿಕೆ ಕಾರ್ಯಕ್ರಮ ಶುರುವಾಗಿದ್ದು, ಈ ವೇದಿಕೆಯಲ್ಲಿ ಸಿಎಂ ಹಾಗೂ ಪಿಎಂ ಕೌಂಟರ್ ಕೊಡುವ ಕಾರ್ಯಕ್ರಮ ನಡೆದಿದೆ.

ಮೊದಲು ವೇದಿಕೆ ಮೇಲೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬೆಂಗಳೂರಿಗೆ ಮೆಟ್ರೋ ತಂದಿದ್ದು ಮನಮೋಹನ್ ಸಿಂಗ್. ಮೆಟ್ರೋಗಾಗಿ ರಾಜ್ಯ ಸರ್ಕಾರ ಹೆಚ್ಚು ಖರ್ಚು ಮಾಡಿದೆ ಎಂದು ನರೇಂದ್ರ ಮೋದಿ ಅವರಿಗೆ ಕೌಂಟರ್ ಕೊಟ್ಟರು. ಬಳಿಕ ಮಹಾರಾಷ್ಟ್ರ, ಗುಜರಾತ್ ನಂತೆ ಕರ್ನಾಟಕಕ್ಕೂ ಹೆಚ್ಚು ಒತ್ತು ಕೊಡಿ ಎಂದು ಮೋದಿ ಅವರಿಗೆ ಹೇಳಿದರು.

ಇದಾದ ಮೇಲೆ ಪ್ರಧಾನಿ ಮೋದಿ ಅವರ ಸರದಿ ಬಂತು. ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ವೇದಿಕೆ ಮೇಲೆಯೇ ಟಕ್ಕರ್ ನೀಡಿದ್ದಾರೆ. ರಾಜ್ಯ, ಕೇಂದ್ರ ಸರ್ಕಾರಗಳು ಇರುವುದೇ ಜನರ ಸೇವೆಗಾಗಿ. ದೇಶದ ಜನರಿಗಾಗಿ ನಾವೂ ಒಂದಾಗಿ ಕೆಲಸ ಮಾಡಬೇಕು. ಮೇಕ್ ಇನ್ ಇಂಡಿಯಾದಲ್ಲಿ ಇನ್ನಷ್ಟು ಸಾಧನೆ ಮಾಡಬೇಕಿದೆ. ಅದಕ್ಕೆ ಬೆಂಗಳೂರು ಹಾಗೂ ಕರ್ನಾಟಕದ ಅವಶ್ಯಕತೆ ಇದೆ. ನಮ್ಮ ವಸ್ತುಗಳಲ್ಲಿ ಯಾವುದೇ ಡಿಫೆಕ್ಟ್ ಇರದಂತೆ ತಯಾರಿಸಬೇಕಿದೆ ಎಂದು ಯುವಜನತೆಗೆ ಸಂದೇಶ ಕೊಡುವುದರ ಜೊತೆಗೆ ಕಾಂಗ್ರೆಸ್ ಸರ್ಕಾರಕ್ಕೆ ತಿರುಗೇಟು ಕೂಡ ನೀಡಿದ್ದಾರೆ. ಇಂದು ಬೆಂಗಳೂರಿಗೆ ಬಂದ ಮೋದಿ ಅವರು ನಾಲ್ಕು ಗಂಟೆಯಲ್ಲಿ ಮೂರು ಕಾರ್ಯಕ್ರಮ ಅಟೆಂಡ್ ಮಾಡಿ, ದೆಹಲಿಗೆ ವಿಮಾನ ಹತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *