ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಳ್ಳಕೆರೆ, ಮಾರ್ಚ್. 22 : ಮಾರ್ಚ್ 27 ನೇ ತಾರೀಖು ನಗರದ ಸರ್ಕಾರಿ ನೌಕರರ ಭವನದಲ್ಲಿ ನಡೆಯಲಿರುವ ಮಾನವ ಹಕ್ಕುಗಳ ಆಯೋಗದ ಫೌಂಡೇಶನ್ ನ ಸಂಸ್ಥಾಪಕ ಅಧ್ಯಕ್ಷರಾದ ನಾರಾಯಣ ರೆಡ್ಡಿ ಯವರ ಅಧ್ಯಕ್ಷತೆಯಲ್ಲಿ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದ ಹಿನ್ನೆಲೆ ಇಂದು ಚಳ್ಳಕೆರೆ ನಗರದ ಪ್ರವಾಸಿ ಮಂದಿರದಲ್ಲಿ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಯಿತು.

ಮಾನವ ಹಕ್ಕುಗಳ ಆಯೋಗದ ಫೌಂಡೇಶನ್ ನ ಜಿಲ್ಲಾಧ್ಯಕ್ಷರಾದ.. ಸುರೇಶ ಬೆಳಗೆರೆ ಇವರ ಅಧ್ಯಕ್ಷೆ ಯಲ್ಲಿ ಈ ಪೂರ್ವಬಾವಿ ಸಭೆ ಹಮ್ಮಿಕೊಂಡಿದ್ದು. ಮಾ.27 ನೇ ತಾರೀಖು ಮಾನವ ಹಕ್ಕುಗಳ ಅಯೋಗದ ಫೌಂಡೇಶನ್ ನ ಅಧ್ಯಕ್ಷ ಪದಾಧಿಕಾರಿಗಳ ಪದಗ್ರಹಣ ಹಾಗೂ ಮಾನವ ಹಕ್ಕುಗಳ ಆಯೋಗದ ಫೌಂಡೇಶನ್ ಕಾರ್ಯ ಕುರಿತಂತೆ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಹಾಗೂ ಆಯೋಗದ ಮಾಡುವ ಕಾರ್ಯದ ಕುರಿತು ಸಂವಾದ ಕಾರ್ಯಕ್ರಮ ನಡೆಯಲಿದೆ.. ಈಗಾಗಲೇ ತಾಲೂಕಿನಲ್ಲಿ ಆಯ್ಕೆಯಾಗಿರುವ ಗೌರವಾಧ್ಯಕ್ಷರು ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಗುರುತಿನ ಚೀಟಿ ಹಾಗೂ ಪದಗ್ರಹಣ ಕಾರ್ಯಕ್ರಮ ನಡೆಯಲಿದ್ದು ಮಾನವ ಹಕ್ಕುಗಳ ಆಯೋಗದ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ನಾರಾಯಣ ರೆಡ್ಡಿ ಇವರ ನೇತೃತ್ವದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ವಕೀಲರು ಹಾಗೂ ನಿವೃತ್ತ ನ್ಯಾಯಾಧೀಶರು ಆಗಮಿಸಲಿದ್ದಾರೆ ಎಂದು ಮಾನವ ಹಕ್ಕುಗಳ ಆಯೋಗದ ಫೌಂಡೇಶನ್ ನ ಜಿಲ್ಲಾಧ್ಯಕ್ಷರಾದ ಸುರೇಶ್ ಬೆಳಗೆರೆ ತಿಳಿಸಿದ್ದಾರೆ.

ಈ ಪೂರ್ವಭಾವಿ ಸಭೆಯಲ್ಲಿ ಮಾನವ ಹಕ್ಕುಗಳ ಆಯೋಗದ ಫೌಂಡೇಶನ್ ತಾಲೂಕ ಅಧ್ಯಕ್ಷರಾದ ಇಮ್ರಾನ್, ಗೌರವಾಧ್ಯಕ್ಷರಾದ ತಿಪ್ಪೇಸ್ವಾಮಿ ಕೊಲ್ಲಕುಂಟೆ ತಿಪ್ಪೇಸ್ವಾಮಿ, ಪದಾಧಿಕಾರಿಗಳಾದ ಎಂ ರಹಮಾನ್ ಸಾಬ್, ಪ್ರದೀಪ್ ಕುಶಾ, ಸಿಜಿಟಿ ತಿಪ್ಪೇಸ್ವಾಮಿ, ಮುತ್ತು, ಮಹಮದ್..ವಸೀಂ ಸಾಬ್ ಮತ್ತಿತರರು ಹಾಜರಿದ್ದರು.

