ಚಿತ್ರದುರ್ಗ: ಅನೇಕ ಸಂಕಷ್ಟದ ಸಮಯದಲ್ಲಿ ಆರ್ಯವೈಶ್ಯ ಜನಾಂಗ ನೊಂದವರ ನೆರವಿಗೆ ಧಾವಿಸಲಿದೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಪ್ರಶಂಶಿಸಿದರು.
ವಾಸವಿ ಮಹಲ್‍ನಲ್ಲಿ ಭಾನುವಾರ ವಾಸವಿ ಕ್ಲಬ್ ಚಿತ್ರದುರ್ಗ ಫೋರ್ಟ್ ನ ಉದ್ಘಾಟನೆ ಹಾಗೂ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಖಜಾಂಚಿ ಹಾಗೂ ಸದಸ್ಯರುಗಳ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಬರಗಾಲ, ಪ್ರವಾಹ, ನೆರೆ ಹಾವಳಿ, ಭೂಕಂಪ, ಯುದ್ದಗಳಾದಂತ ತುರ್ತು ಸಮಯದಲ್ಲಿ ಆರ್ಯವೈಶ್ಯ ಜನಾಂಗ ಹಾಗೂ ವಾಸವಿ ಸಂಸ್ಥೆಗಳು ಹಿಂದಿನಿಂದಲೂ ನೊಂದವರಿಗೆ ನಿರಾಶ್ರಿತರಿಗೆ ಸಹಾಯ ಮಾಡಿಕೊಂಡು ಬರುತ್ತಿರುವುದನ್ನು ನೋಡಿದ್ದೇನೆ. ವಾಸವಿ ಕ್ಲಬ್ಸ್ ಇಂಟರ್‍ನ್ಯಾಷನಲ್ ಸಂಸ್ಥೆಯಾಗಿದ್ದು, ಅನೇಕ ಸಮಾಜಮುಖಿ ಕೆಲಸ ಮಾಡುವುದು ಈ ಸಂಸ್ಥೆಯ ಧ್ಯೇಯವಾಗಿದೆ.
ಆರ್ಯವೈಶ್ಯ ಜನಾಂಗ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವಲ್ಲಿ ಎಂದಿಗೂ ಮೀನಾಮೇಷ ಎಣಿಸುವುದಿಲ್ಲ. ಉಚಿತ ಆರೋಗ್ಯ ತಪಾಸಣೆ, ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ, ವಿಕಲಚೇತನರಿಗೆ ಸಲಕರಣೆಗಳ ವಿತರಣೆ, ಹೀಗೆ ಹತ್ತು ಹಲವಾರು ಜನೋಪಯೋಗಿ ಕೆಲಸಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ. ಚಿತ್ರದುರ್ಗದಲ್ಲಿರುವ ವಾಸವಿ ವಿದ್ಯಾಸಂಸ್ಥೆ ಅನೇಕ ಬಡ ಮಕ್ಕಳ ಶಿಕ್ಷಣಕ್ಕೂ ನೆರವಾಗಿದೆ ಎಂದು ಹೇಳಿದರು.
ಆರ್.ಶ್ರೀನಿವಾಸ್ ಡಿಸ್ಟ್ರಿಕ್ಟ್ ಗೌರ್ವನರ್ ವಾಸವಿ ಕ್ಲಬ್, ವಾಸವಿ ಕ್ಲಬ್ ಇಂಟರ್‍ನ್ಯಾಷನಲ್ ಉಪಾಧ್ಯಕ್ಷರಾದ ಸಿ.ಎಂ.ಎಲ್.ದಿಲೀಪ್, ಕರ್ನಾಟಕ ಆರ್ಯವೈಶ್ಯ ಡೆವಲಪ್‍ಮೆಂಟ್ ಕಾರ್ಪೊರೇಷನ್ ಸಂಸ್ಥಾಪಕ ಅಧ್ಯಕ್ಷ ಟಿ.ಎ.ಶರವಣ, ವಾಸವಿ ಕ್ಲಬ್ ಚಿತ್ರದುರ್ಗ ಫೋರ್ಟ್‍ನ ಅಧ್ಯಕ್ಷ ಕೆ.ಸೋಮನಾಥಶೆಟ್ಟಿ, ಕಾರ್ಯದರ್ಶಿ ಡಿ.ಆರ್.ವೇಣುಗೋಪಾಲಶೆಟ್ಟಿ, ಖಜಾಂಚಿ ಕೆ.ಎಸ್.ಚಂದ್ರಮೋಹನ್, ಕರ್ನಾಟಿಕ ಆರ್ಯವೈಶ್ಯ ಜಿಲ್ಲಾ ಸಮಿತಿ ಅಧ್ಯಕ್ಷ ಕೆ.ವಿ.ಅಮರೇಶ್ ಇವರುಗಳು ವೇದಿಕೆಯಲ್ಲಿದ್ದರು.
ಮಧುಗಿರಿ ವಾಸವಿ ಕ್ಲಬ್ ಅಧ್ಯಕ್ಷೆ ಲಕ್ಷ್ಮಿಮೂರ್ತಿ ಸ್ವಾಗತಿಸಿದರು. ದೊಂತಿ ವೇಣುಗೋಪಾಲ್ ವಂದಿಸಿದರು. ವಾಸವಿ ಕ್ಲಬ್ ಚಿತ್ರದುರ್ಗ ಫೋರ್ಟ್ ನಿರ್ದೇಶಕ ಎಂ.ಕೆ.ರವೀಂದ್ರ ನಿರೂಪಿಸಿದರು.