ಕಳೆದ ಕೆಲವು ದಿನಗಳಿಂದ ತಿರಪತಿಗೆ ಪೂರೈಕೆಯಾಗುವ ನಂದಿನಿ ತುಪ್ಪದ ಬಗ್ಗೆಯೇ ಚರ್ಚೆಯಾಗುತ್ತಿದೆ. ಸದ್ಯ ಕೆಎಂಎಫ್ ನಂದಿನಿ ತುಪ್ಪವನ್ನು ಕಡಿಮೆ ದರದಲ್ಲಿ ನೀಡುವುದಿಲ್ಲ ಎಂದು ಹೇಳಿದೆ. ಹೀಗಾಗಿ ಇದು ಚರ್ಚೆಗೆ ಗ್ರಾಸವಾಗಿದೆ. ಆದ್ರೆ ಇದೀಗ ಹೊಸ ತಿರುವು ಸಿಕ್ಕಿದೆ.
ಕೆಎಂಎಫ್ ಕಳೆದ 20 ವರ್ಷಗಳಿಂದ ನಂದಿನಿ ತುಪ್ಪವನ್ನು ರಿಯಾಯಿತಿ ದರದಲ್ಲಿ ಪೂರೈಕೆ ಮಾಡಲಾಗುತ್ತಿದೆ ಎಂದೇ ಹೇಳಿತ್ತು. ಆದ್ರೆ ಈ ಮಾತು ಅಪ್ಪಟ ಸುಳ್ಳು ಎಂದು ಟಿಟಿಡಿ ದೇವಸ್ಥಾನದ ಕಾರ್ಯನಿರ್ವಾಹಕರಾದ ಎವಿ ಧರ್ಮಾರೆಡ್ಡಿ ಅವರು ತಿಳಿಸಿದ್ದಾರೆ.
ಈ ಬಗ್ಗೆ ಖಾಸಗಿ ಚಾನೆಲ್ ಒಂದಕ್ಕೆ ಮಾತನಾಡಿರುವ ಧರ್ಮಾರೆಡ್ಡಿ ಅವರು, ಕೆಎಂಎಫ್ ಕಳೆದ 20 ವರ್ಷಗಳಿಂದ ಟಿಟಿಡಿಗೆ ತುಪ್ಪವನ್ನು ನೀಡುತ್ತಿದ್ದೇವೆ ಎಂದು ತಿಳಿಸಿದೆ. ಇದೆಲ್ಲಾ ಸುಳ್ಳು ಆರೋಪ. ಕಳೆದ 20 ವರ್ಷಗಳಲ್ಲಿ ಒಂದು ಬಾರಿ ಮಾತ್ರ ನಂದಿನಿ ತುಪ್ಪವನ್ನು ಪೂರೈಕೆ ಮಾಡಿದೆ. ತಿಮ್ಮಪ್ಪನ ಸನ್ನಿಧಿಗೆ ರವಾನೆಯಾದ ಎಲ್ಲಾ ತುಪ್ಪದ ಮಾದರಿಯನ್ನು ಪರೀಕ್ಷೆ ಮಾಡಲಾಗುತ್ತದೆ. ಟೆಸ್ಟ್ ನಲ್ಲಿ ಪಾಸ್ ಆದರೆ ಮಾತ್ರ ಟ್ರಕ್ ನಲ್ಲಿ ತುಪ್ಪ ಹೊತ್ತು ಬಂದಿದ್ದಕ್ಕೆ ಒಳಗೆ ಪ್ರವೇಶ ನೀಡಲಾಗುತ್ತದೆ ಎಂದಿದ್ದಾರೆ.
ಇದರ ನಡುವೆಯೇ ಕೆಎಂಎಫ್ ಪತ್ರ ಬರೆದು, ನೀವು ಕೇಳಿರುವ ದರಕ್ಕೆ ತುಪ್ಪ ಸರಬರಾಜು ಮಾಡಲು ಸಾಧ್ಯವಿಲ್ಲ. ಕಳೆದ 20 ವರ್ಷಗಳಿಂದ ಕೆಎಂಎಫ್ ಟಿಟಿಡಿಗೆ ತುಪ್ಪ ನೀಡುತ್ತಿದೆ. ದರದ ವಿಚಾರಕ್ಕೆ ಸ್ಥಗಿತಗೊಂಡಿರೋ ಸರಬರಾಜು ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ. ನಿಮಗೆ ತುಪ್ಪ ನೀಡಲು ನಾವು ರೆಡಿ ಇದ್ದೇವೆ. ಗೊಂದಲ ಬಗೆಹರಿಕೆ ಬಗ್ಗೆ ಸಭೆ ನಡೆಸಲು ದಿನಾಂಕ ನೀಡುವಂತೆ ಟಿಟಿಡಿಗೆ ಕೇಳಿದೆ.