ಸದನದಲ್ಲಿ ‘ಲೂಟಿಕೋರ’ ಪದದ ಗದ್ದಲ : ಏಕವಚನದಲ್ಲಿಯೇ ಬೈದಾಡಿದ ಬಿಜೆಪಿ-ಕಾಂಗ್ರೆಸ್ ನಾಯಕರು..!

1 Min Read

 

ಬೆಂಗಳೂರು: ಇಂದು ಅಧಿವೇಶನದ ಎರಡನೇ ದಿನ, ಅಭಿವೃದ್ಧಿ, ಚರ್ಚೆ, ಮಾತುಕತೆಗಳು ಮುಂದುವರೆದಿವೆ. ಅದರಲ್ಲೂ ಆಡಳಿತ ಪಕ್ಷದ ನಾಯಕರು ಹಾಗೂ ವಿರೋಧ ಪಕ್ಷದ ನಾಯಕರ ನಡುವೆ ಲೂಟಿಕೋರ ಎಂಬ ಪದ ಜೋರು ಗದ್ದಲವನ್ನೇ ಉಂಟು ಮಾಡಿದೆ‌. ಡಿಸಿಎಂ ಡಿಕೆ ಶಿವಕುಮಾರ್ ಅವರು ಮಾತನಾಡಿವಾಗ ಲೂಟಿಕೋರ ಎಂಬ ಪದವನ್ನು ಬಳಕೆ ಮಾಡಿದ್ದಾರೆ. ತಕ್ಷಣ ಅದಕ್ಕೆ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ‌.

 

ಇತ್ತ ಕಾಂಗ್ರೆಸ್ ನಾಯಕರು ಒಗ್ಗೂಡಿದ್ದು, ಗೃಹ ಸಚಿವ ಪರಮೇಶ್ವರ್, ಸಚಿವ ಪ್ರಿಯಾಂಕ್ ಖರ್ಗೆ, ಸೇರಿದಂತೆ ಕಾಂಗ್ರೆಸ್ ನಾಯಕರು ಡಿಸಿಎಂ ಡಿಕೆ ಶಿವಕುಮಾರ್ ಅವರಿಗೇನೆ ಬೆಂಬಲ ನೀಡಿದ್ದಾರೆ. ಬಿಜೆಪಿ ನಾಯಕರಿಗೆ ಮಾತಿನಲ್ಲಿಯೇ ತಿರುಗೇಟು ನೀಡಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ಎರಡು ಪಕ್ಷದ ನಾಯಕರು ಒಟ್ಟೊಟ್ಟಿಗೆ ಮಾತಾನಡುತ್ತಿದ್ದ ಕಾರಣ, ಯಾರು, ಯಾರಿಗೆ ಏನನ್ನು ಹೇಳಿದರು ಎಂಬುದೇ ಅರ್ಥವಾಗಲಿಲ್ಲ. ಆದರೂ ಜಗಳವಾಡಿದ್ದಂತೂ ಸ್ಪಷ್ಟವಾಗಿತ್ತು.

ಅದರಲ್ಲೂ ಡಿಕೆ ಶಿವಕುಮಾರ್ ಹಾಗೂ ಅಶ್ವತ್ಥ್ ನಾರಾಯಣ್ ಇಬ್ಬರು ಏಕವಚನದಲ್ಲಿಯೇ ಬೈದಾಡಿಕೊಂಡರು. ನೀನೇ ಲೂಟೊಕೋರ ಎಂದು ಡಿಕೆಶಿ ಹೇಳಿದರೆ, ಯಾವುದನ್ನು ಲೂಟಿ ಹೊಡೆದಿದ್ದೀನಿ. ಎಲ್ಲರದನ್ನು ಸರಿಯಾಗಿ ಹೇಳಿದರೆ ನಮಗೂ ಸಂತೋಷವೇ ಅಂತ ಅಶ್ವತ್ಥ್ ನಾರಾಯಣ್ ತಿರುಗೇಟು ನೀಡಿದರು. ಡಿಕೆಶಿ ಕೋಪದಲ್ಲಿ ಮಾತನಾಡುತ್ತಿದ್ದರೆ ಆ ಕಡೆಯಿಂದ ಬಿಜೆಪಿ ನಾಯಕರು ಇನ್ನಷ್ಟು ಕೋಪ ತರಿಸುವಂತೆ, ಟ್ರಿಗರ್ ಮಾಡುವ ರೀತಿ ನಗು ನಗುತ್ತಾ ಪ್ರಶ್ನೆಗಳನ್ನು ಕೇಳುತ್ತಿದ್ದರು‌. ಇವತ್ತಿನ ಸದನದಲ್ಲಿ ಆರಂಭದಲ್ಲಿಯೇ ಲೂಟಿಕೋರ ಪದ ಜೋರು ಸದ್ದು ಗದ್ದಲ ಮಾಡಿದೆ. ಕೆಲವೊಂದು ಸಮಸ್ಯೆಗಳ ಚರ್ಚೆಯೂ ನಡೆಯುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *