ಕೊರೊನಾ ಪ್ರಕರಣ ಕಡಿಮೆಯಾಗ್ತಿದೆ ಎಂದು ದೇಶದ ಜನ ನೆಮ್ಮದಿಯಾಗಿರುವಾಗಲೇ ಜರ್ಮನಿಯಲ್ಲಿ ಒಂದೇ ದಿನ ಪತ್ತೆಯಾದ ಸೋಂಕಿತರ ಸಂಖ್ಯೆ ಕಂಡು ಜನ ಗಾಬರಿಯಾಗಿದ್ದಾರೆ. ಮತ್ತೆ ಸೋಂಕು ಹೆಚ್ಚಳವಾಗ್ತಿದೆಯಾ ಅನ್ನೋ ಅನುಮಾನ ಶುರುವಾಗಿದೆ.
ಮೊದ ಮೊದಲಿಗೆ ಜರ್ಮನಿಯನ್ನೇ ಮಾದರಿಯಾಗಿ ತೆಗೆದುಕೊಳ್ಳಲಾಗಿತ್ತು. ಕೊರೊನಾ ಕಂಟ್ರೋಲ್ ಮಾಡುವುದರಲ್ಲಿ ಜರ್ಮನಿ ದೇಶವನ್ನೇ ಹಾಡಿ ಹೊಗಳುತ್ತಿದ್ದರು. ಆದ್ರೀಗ ಅದಕ್ಕೆ ತದ್ವಿರುದ್ಧವಾಗಿ ಸೋಂಕು ಹರಡಿದೆ.
ಹೌದು, 8 ಕೋಟಿ ಜನಸಂಖ್ಯೆ ಇರುವ ದೇಶವದು. ಕೇವಲ 24 ಗಂಟೆಯಲ್ಲೇ ಸುಮಾರು 80 ಸಾವಿರ ಜನ ಸೋಂಕಿತರು ಕಂಡು ಬಂದಿದ್ದಾರೆ. ಈಗಾಗ್ಲೇ ಒಟ್ಟು 56 ಲಕ್ಷ ಜನ ಸೋಂಕಿತರಿದ್ದಾರೆ. ಅಲ್ಲಿನ ಜನ ವ್ಯಾಕ್ಸಿನೇಷನ್ ಜೊತೆಗೆ ಬೂಸ್ಟರ್ ಡೋಸ್ ಅನ್ನು ಪಡೆದಿದ್ದಾರೆ. ಆದ್ರೂ ಕೊರೊನಾ ಇದ್ದಕ್ಕಿದ್ದಂತೆ ಏರಿಕೆಯಾಗಿರೋದು ಆತಂಕಕ್ಕೆ ದೂಡಿದೆ.
ಇತ್ತೀಚಿನ ದಿನಗಳಲ್ಲಿ ಕೊರೊನಾ ಬಗ್ಗೆ ಜನ ಅದೆಷ್ಟು ನಿರ್ಲಕ್ಷ್ಯ ವಹಿಸುತ್ತಿದ್ದಾರೆಂದರೆ, ಮಾಸ್ಕ್ ಹಾಕಲ್ಲ, ಸೋಷಿಯಲ್ ಡಿಸ್ಟೆನ್ಸ್ ಅನ್ನೋದು ನೆನಪಿಲ್ಲ. ಕೊರೊನಾ ನಿಯಂತ್ರಿಸುವ ಯಾವ ಮಾರ್ಗವನ್ನು ಅನುಸರಿಸುವ ಗೋಜಿಗೆ ಹೋಗ್ತಿಲ್ಲ. ಮೂರನೆ ಅಲೆ ಬರುವುದು ತೀರಾ ವಿರಳ ಎಂಬುದನ್ನೇನೋ ತಜ್ಞರು ಹೇಳಿದ್ದಾರೆ. ಆದ್ರೆ ಕೊರೊನಾ ವಿಚಾರದಲ್ಲಿ ಜನ ಕೊಂಚ ಎಚ್ಚರದಿಂದ ಇರುವುದು ತುಂಬಾ ಉತ್ತಮ.