ಚಿತ್ರದುರ್ಗದಲ್ಲಿ ಹುತಾತ್ಮ ಯೋಧ ಕ್ಯಾಪ್ಟನ್ ಪ್ರಾಂಜಲ್‌ಗೆ ಶ್ರದ್ಧಾಂಜಲಿ

1 Min Read

ಸುದ್ದಿಒನ್, ಚಿತ್ರದುರ್ಗ, ನವೆಂಬರ್.25 : ಕ್ಯಾಪ್ಟನ್ ಪ್ರಾಂಜಲ್ ಅವರು ಸೇನೆ ಸೇರುವ  ಮೂಲಕ ದೇಶ ಸೇವೆ ಮಾಡಬೇಕು ಎಂಬ ಹೆಬ್ಬಯಕೆಯನ್ನು ಹೊಂದಿದ್ದರು ಎಂದು ಸ.ರಾ.ಲೇಪಾಕ್ಷ ಹೇಳಿದರು.

ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ (ಸ್ವಾಯತ್ತ) ಎನ್.ಸಿ.ಸಿ.ಹಾಗೂ ಸ್ಕೌಟ್ಸ್ ಅಂಡ್ ಗೈಡ್ಸ್ ವಿಧ್ಯಾರ್ಥಿಗಳು ಆಯೋಜಿಸಿದ್ದ  ಕ್ಯಾಪ್ಟನ್ ಪ್ರಾಂಜಲ್ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

ಕಳೆದ ವಾರ ಜಮ್ಮು ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯಲ್ಲಿ ವೀರ ಮರಣ ಹೊಂದಿದ ಐದು ಯೋಧರಲ್ಲಿ ಕರ್ನಾಟಕದ  ಹೆಮ್ಮೆಯ ಪುತ್ರ ಕ್ಯಾಪ್ಟನ್ ಪ್ರಾಂಜಲ್ ಅವರು 29 ನೇ ವಯಸ್ಸಿನಲ್ಲಿ ವೀರ ಮರಣಹೊಂದಿದ್ದು, ತನ್ನ ವಯಸ್ಸಾದ ತಂದೆ, ತಾಯಿ, ಪತ್ನಿಯನ್ನು ಅಗಲಿದ್ದಾರೆ.

ದೆಹಲಿಯ ಪ್ರತಿಷ್ಠಿತ ಶಾಲೆಯಲ್ಲಿ ವಿಧ್ಯಾಭ್ಯಾಸ ಕಲಿತ ಇವರು ಸೇನೆಯಲ್ಲಿ ಅಧಿಕಾರಿಯಾಗುವ ಮೂಲಕ ಇನ್ನೂ ಹೆಚ್ಚು ಕಾಲ ವಿವಿಧ ಹುದ್ದೆಗಳನ್ನು ಅನುಭವಿಸುವ ಮೂಲಕ ಲಕ್ಷಾಂತರ ಯುವಕರಿಗೆ ಮಾದರಿಯಾಗುಬೇಕಿತ್ತು. ದುರಾದೃಷ್ಟವಶಾತ್ ಇವರು ಚಿಕ್ಕ ವಯಸ್ಸಿನಲ್ಲಿ ವೀರ ಮರಣ ಹೊಂದಿರುವುದು ದುಃಖದ ಸಂಗತಿಯಾಗಿದೆ, ಎನ್.ಸಿ.ಸಿ ಕೆಡೆಟ್‍ಗಳು ಹೆಚ್ಚು ಹೆಚ್ಚು ಸೇನೆ ಸೇರುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.

ಪ್ರಭಾರೆ ಪ್ರಾಂಶುಪಾಲರಾದ  ಪ್ರೊ. ಎಲ್. ನಾಗರಾಜಪ್ಪ ವಿಧ್ಯಾರ್ಥಿಗಳನ್ನು ಕುರಿತು ಮಾತನಾಡಿ, ದೇಶ ಸೇವೆಯಲ್ಲಿ ಹೆಚ್ಚು ಯುವಕರು ತೊಡಗಿಕೊಳ್ಳಬೇಕು ಎಂದರು.

ಪ್ರತಾಪ್ ಜೋಗಿ ಮಾತನಾಡಿ ಕ್ಯಾಪ್ಟನ್ ಪ್ರಾ‌ಂಜಲ್ ಅಂತಹ ಸಾವಿರಾರು ಯುವಕರು ಚಿಕ್ಕ ವಯಸ್ಸಿನಲ್ಲಿಯೇ ಸೇನೆಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವುದು ದೇಶ ಹೆಮ್ಮೆ ಪಡುವ ವಿಷಯ. ಆದರೆ ಇವರ ವೀರ ಮರಣ ನೋವು ತಂದಿದೆ. ಇವರ ಮರಣ ಲಕ್ಷಾಂತರ ಯೋಧರ ರಕ್ತ ಕುದಿಯುವಂತೆ ಮಾಡಿದೆ ಎಂದರು.

ಈ ಸಂದರ್ಭದಲ್ಲಿ ಡಾ.ತಾರಿಣಿ ಶುಭದಾಯಿನಿ, ಡಾ.ಆರ್.ಗಂಗಾಧರ್, ಡಾ.ನಾಗವರ್ಮ, ಡಾ.ಪಿ.ಎಸ್.ಗಂಗಾಧರ್, ಪ್ರೊ.ಕೆ.ಎಲ್.ಶ್ರೀನಿವಾಸ್, ಪ್ರೊ.ಬಿ.ಕೆ.ಬಸವರಾಜ್, ಪ್ರೊ.ಜಿ.ಡಿ.ಸುರೇಶ್, ಪ್ರೊ.ನಯಾಜ್, ವೆಂಕಟೇಶ್, ಅಧಿಕ್ಷಕರು, ಹಾಗೂ ಸಿಬ್ಬಂದಿ ಮತ್ತು ವಿಧ್ಯಾರ್ಥಿಗಳು ಹಾಜರಿದ್ದರು.

Share This Article
Leave a Comment

Leave a Reply

Your email address will not be published. Required fields are marked *