ಬೆಂಗಳೂರು: 2023-24 ರ ಬಜೆಟ್ ನಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಭರಪೂರ ಅನುದಾನ ಸಿಕ್ಕಿದೆ. 65 ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಾಪನೆಗೆ 137 ಕೋಟಿ. ಮನೆ ಮನೆಗೆ ಆರೋಗ್ಯ ಯೋಜನೆ ಘೋಷಣೆ. 28 ಹೊಸ ಆರೋಗ್ಯ ಕೇಂದ್ರ ಸ್ಥಾಪನೆ. ಆರೋಗ್ಯ ಸಂಸ್ಥೆ ನಿರ್ವಹಣೆಗೆ 125 ಕೋಟಿ ಮೀಸಲು. ಹೊಸ ಸ್ಪೆಷಾಲಿಟಿ ಆಸ್ಪತ್ರೆ ನಿಲ್ದಾಣ. ಚಿತ್ರದುರ್ಗದಲ್ಲಿ 500 ಕೋಟಿ ರೂ. ವೆಚ್ಚದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಒತ್ತು.
ವೈದ್ಯಕೀಯ ಉಪಕರಣ ಖರೀದಿಗೆ 59 ಕೋಟಿ. ವಾಜಪೇಯಿ ವೈದ್ಯಕೀಯ ವಿದ್ಯಾರ್ಥಿ ನಿಲಯ ಹೆಚ್ಚಳ. ಶಿವಮೊಗ್ಗ, ಕಲಬುರ್ಗಿಯಲ್ಲಿ ಕಿದ್ವಾಯಿ ನಿರ್ಮಾಣ. ನಾಲ್ಕು ಜಿಲ್ಲೆಗಳಲ್ಲಿ IVF ಕ್ಲಿನಿಕ್ ಓಪನ್. ರಾಜ್ಯದಲ್ಲಿ ಆರು ಹೊಸ ಇಎಸ್ಐ ಆಸ್ಪತ್ರೆಗಳ ಆರಂಭ. 65 ಹೊಸ ಪ್ರಾಥಮಿಕ ಕೇಂದ್ರಗಳ ಸ್ಥಾಪನೆ.