in ,

ಚಿತ್ರದುರ್ಗ ಜಿಲ್ಲೆಯಲ್ಲಿ ಈ ಬಾರಿ ಆರಕ್ಕೆ ಆರು ಕ್ಷೇತ್ರ ಗೆಲ್ಲುವ ಸಾಧ್ಯತೆ ಇದೆ : ಜಿ.ಹೆಚ್.ತಿಪ್ಪಾರೆಡ್ಡಿ

suddione whatsapp group join

 

ವರದಿ ಮತ್ತು ಫೋಟೋ ಕೃಪೆ
                        ಸುರೇಶ್ ಪಟ್ಟಣ್,                         
ಮೊ : 87220 22817

ಚಿತ್ರದುರ್ಗ,(ಮೇ.10) : ಈ ಬಾರಿಯ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ರಾಜ್ಯದಲ್ಲಿ ಸ್ವಂತ ಬಲದ ಮೇಲೆ ಆಧಿಕಾರವನ್ನು ಹಿಡಿಯಲಿದೆ ಎಂಬ ವಿಶ್ವಾಸವನ್ನು ಜಿ.ಹೆಚ್.ತಿಪ್ಪಾರೆಡ್ಡಿ ವ್ಯಕ್ತಪಡಿಸಿದ್ದಾರೆ.

ನಗರದ ಎಪಿಎಂಸಿ ಮಾರುಕಟ್ಟೆಯ ಮತದಾನ ಕೇಂದ್ರದಲ್ಲಿ ಮತದಾನವನ್ನು ನೇರವೇರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿತ್ರದುರ್ಗದಲ್ಲಿ ಉತ್ತಮವಾದ ವಾತಾವರಣ ಇದೆ. ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಮತಗಳ ಅಂತರದಿಂದ ಗೆಲುವನ್ನು ಸಾಧಿಸುತ್ತೇನೆ ಎಂಬ ನಂಬಿಕೆ ಇದೆ.

ಉತ್ತಮವಾದ ಆಡಳಿತವನ್ನು ನೀಡಲಾಗುತ್ತದೆ. ಪೂರ್ಣ ಪ್ರಮಾಣದ ಬಹುಮತ ಬಂದಲ್ಲಿ ಪ್ರಧಾನಿಯವರ ರೀತಿಯಲ್ಲಿ ಉತ್ತಮವಾದ ಆಡಳಿತವನ್ನು ನೀಡಿ ಉತ್ತಮವಾದ ಕೆಲಸವನ್ನು ಮಾಡಲಿಕ್ಕೆ ಸಾಧ್ಯವಾಗುತ್ತದೆ. ಈ ಬಾರಿ ಕರ್ನಾಟಕದಲ್ಲಿ ಉತ್ತಮವಾದ ಫಲಿತಾಂಶವನ್ನು ನೀಡಲಿದ್ದಾರೆ ಎಂಬ ನೀರಿಕ್ಷೆ ಮತದಾರರಿಂದ ಇದೆ ಎಂದರು.

ಈ ಬಾರಿ ರಾಜ್ಯದಲ್ಲಿ 140 ಸೀಟುಗಳು ಬರುತ್ತವೆ ಎಂಬ ನಮ್ಮ ಸರ್ವೆ ತಿಳಿಸಿದೆ. ಇದರಿಂದ ಉತ್ತಮವಾದ ಸರ್ಕಾರವನ್ನು ರಚನೆ ಮಾಡುವುದರ ಮೂಲಕ ಜನತೆಗೆ ಉತ್ತಮವಾದ ಆಡಳಿತವನ್ನು ನೀಡಲಾಗುವುದು. ಜಿಲ್ಲೆಯ ಜೀವನಾಡಿಯಾದ ಅಪ್ಪರ್ ಭದ್ರಾ ಯೋಜನೆಯನ್ನು ಪೂರ್ಣಗೊಳಿಸಲಾಗುವುದು.

ಇದರೊಂದಿಗೆ ಚಿತ್ರದುರ್ಗದ ಮೆಡಿಕಲ್ ಕಾಲೇಜು ನಿರ್ಮಾಣವೂ ಸಹಾ ಶೀಘ್ರವಾಗಿ ಅಗಲಿದೆ. ಇದಕ್ಕೆಲ್ಲ ಬಹುಮತದ ಅಗತ್ಯ ಇದೆ. ಇದುವರೆವಿಗೂ ಚುನಾವಣೆಯ ಸಮಯದಲ್ಲಿ ಗಲಾಟೆಗಳು ನಡೆದಿರಲಿಲ್ಲ ಈಗ ಸಣ್ಣ-ಪುಟ್ಟ ಗಲಾಟೆಗಳು ನಡೆದಿವೆ ಈ ರೀತಿ ನಡೆಯಬಾರದು ಇದರ ಬಗ್ಗೆ ಪೋಲಿಸರು ಶೀಘ್ರವಾಗಿ ತನಿಖೆಯನ್ನು ನಡೆಸುವುದರ ಮೂಲಕ ನ್ಯಾಯವನ್ನು ನೀಡಬೇಕಿದೆ ಎಂದ ಅವರು ನಾನು ನೇರವಾಗಿ ಚುನಾವಣೆಯನ್ನು ಗೆಲ್ಲುತ್ತಾ ಬಂದಿನೆ, ಯಾವುದೇ ಮೋಸದಿಂದ ಗೆಲುವನ್ನು ಸಾಧಿಸಿಲ್ಲ ಮತದಾರರು ಸಹಾ ನನನ್ನ ಗೆಲ್ಲಿಸುತ್ತಾ ಬಂದಿದ್ದಾರೆ ಎಂದು ತಿಪ್ಪಾರೆಡ್ಡಿ ತಿಳಿಸಿದರು.

ಬಿಜೆಪಿಯಲ್ಲಿ ಮೂರು ಗುಂಪಾಗದಿದ್ದರೆ ಈ ವೇಳೆಗೆ ಕಾಂಗ್ರೆಸ್ ಮುಕ್ತ ಕರ್ನಾಟಕವಾಗಲಿದೆ ಮೋದಿಯವರು ಹೇಳಿದಂತೆ ಕಾಂಗ್ರೆಸ್ ಮುಕ್ತ ಭಾರತದಲ್ಲಿ ಕರ್ನಾಟಕವು ಸೇರುತ್ತಿತ್ತು ಎಂದು ತಿಳಿಸಿ, ಚಿತ್ರದುರ್ಗದಲ್ಲಿ ಈ ಭಾರಿ ಆರಕ್ಕೆ ಆರು ಸಹಾ ಗೆಲ್ಲುವ ಸಾಧ್ಯತೆ ಇದೆ. ಇಳೆದ ಬಾರಿ 5 ಸ್ಥಾನದಲ್ಲಿ ಮಾತ್ರ ಬಿಜೆಪಿ ಗೆಲುವನ್ನು ಸಾಧಿಸಿತ್ತು ಎಂದು ಹೇಳೀದರು.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ವಿಜಯಪುರದಲ್ಲಿ EVM ಮತ್ತು VV ಮೆಷಿನ್ ಗಳನ್ನು ಒಡೆದು ಹಾಕಿದ ಮತದಾರರು..!

ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿ ಮನೆ ಮುಂದೆ ಕೋಳಿ – ಸೀರೆ ಎಸೆದ ಜನ : ಯಾಕೆ ಗೊತ್ತಾ..?