Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗ ಜಿಲ್ಲೆಯಲ್ಲಿ ಕಾಂಗ್ರೆಸ್‍ಗೆ 5 ಕ್ಷೇತ್ರಗಳಲ್ಲಿ, ಬಿಜೆಪಿಗೆ 1 ಕಡೆ ಗೆಲವು : ಯಾರಿಗೆ ಎಷ್ಟು ಮತ ? ಇಲ್ಲಿದೆ ಸಂಪೂರ್ಣ ಮಾಹಿತಿ…!

Facebook
Twitter
Telegram
WhatsApp

 

ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ,(ಮೇ.13) : ಕರ್ನಾಟಕ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಚಿತ್ರದುರ್ಗ ಜಿಲ್ಲೆಯಲ್ಲಿ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಗಳು ವಿಜೇತರಾಗಿದ್ದು, ಒಂದು ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯು ಜಯಗಳಿಸಿದ್ದಾರೆ.

ವಿಜೇತ ಅಭ್ಯರ್ಥಿಗಳ ಮಾಹಿತಿ

ಮೊಳಕಾಲ್ಮೂರು – ಎನ್.ವೈ.ಗೋಪಾಲಕೃಷ್ಣ.(ಕಾಂಗ್ರೆಸ್)

ಚಳ್ಳಕೆರೆ – ಟಿ.ರಘುಮೂರ್ತಿ.(ಕಾಂಗ್ರೆಸ್)

ಚಿತ್ರದುರ್ಗ – ಕೆ.ಸಿ.ವೀರೇಂದ್ರ ಪಪ್ಪಿ (ಕಾಂಗ್ರೆಸ್‌)

ಹಿರಿಯೂರು – ಡಿ. ಸುಧಾಕರ್ (ಕಾಂಗ್ರೆಸ್)

ಹೊಸದುರ್ಗ – ಬಿ.ಜಿ.ಗೋವಿಂದಪ್ಪ (ಕಾಂಗ್ರೆಸ್)

ಹೊಳಲ್ಕೆರೆ – ಎಂ. ಚಂದ್ರಪ್ಪ (ಬಿಜೆಪಿ)

ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಎನ್.ವೈ.ಗೋಪಾಲಕೃಷ್ಣ ಅವರು 1,09,459 ಮತಗಳನ್ನು ಪಡೆಯುವುದರೊಂದಿಗೆ ಸಮೀಪದ ಅಭ್ಯರ್ಥಿ ಭಾರತೀಯ ಜನತಾ ಪಕ್ಷದ ಎಸ್.ತಿಪ್ಪೇಸ್ವಾಮಿ ಅವರಿಗಿಂತ 22,149 ಹೆಚ್ಚು ಮತಗಳ ಅಂತರದಿಂದ ವಿಜೇತರಾಗಿದ್ದಾರೆ. ಭಾರತೀಯ ಜನತಾ ಪಕ್ಷದ ಎಸ್.ತಿಪ್ಪೇಸ್ವಾಮಿ 87,310,
ಜಾತ್ಯಾತೀತ ಜನತಾ ದಳದ ವೀರಭದ್ರಪ್ಪ 1594,  ಬಹುಜನ ಸಮಾಜವಾದಿ ಪಕ್ಷದ ಎಮ್.ಓ. ಮಂಜುನಾಥ ಸ್ವಾಮಿ ನಾಯಕ 899,  ಆಮ್ ಆದ್ಮಿ ಪಕ್ಷದ ಎಸ್.ಟಿ.ಹರೀಶ್ ನಾಯಕ 243, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಮಲ್ಲಿಕಾರ್ಜುನ 268,  ಪಕ್ಷೇತರ ಅಭ್ಯರ್ಥಿಗಳಾದ ಎನ್.ಮಲ್ಲಯ್ಯ ಸ್ವಾಮಿ 549,  ಓ.ಗೋವಿಂದ 610,  ಕೆ.ಪಿ.ಹರೀಶ್ ಕುಮಾರ್ 583 ಟಿ.ಶಶಿಕುಮಾರ್ ಅವರು 329 ಮತಗಳನ್ನು ಪಡೆದಿದ್ದಾರೆ. 1561 ನೋಟಾ ಮತಗಳು ದಾಖಲಾಗಿವೆ. 50 ಮತಗಳು ತಿರಸ್ಕøತವಾಗಿವೆ.


ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಟಿ.ರಘುಮೂರ್ತಿ 67,363 ಮತಗಳನ್ನು ಪಡೆಯುವುದರೊಂದಿಗೆ ಸಮೀಪದ ಅಭ್ಯರ್ಥಿ ಜಾತ್ಯಾತೀತ ಜನತಾ ದಳದ ರವೀಶ್‍ಕುಮಾರ್.ಎಂ ಅವರಿಗಿಂತ 16,127 ಮತಗಳ ಅಂತರದೊಂದಿಗೆ ವಿಜೇತರಾಗಿದ್ದಾರೆ. ಜಾತ್ಯಾತೀತ ಜನತಾ ದಳದ ರವೀಶ್‍ಕುಮಾರ್.ಎಂ 51,236,  ಭಾರತೀಯ ಜನತಾ ಪಕ್ಷದ ಅನಿಲ್ ಕುಮಾರ್.ಆರ್ 22,737, ಆಮ್ ಆದ್ಮಿ ಪಕ್ಷದ ಮಾರಕ್ಕ 3069 ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಭೋಜರಾಜ.ಸಿ 1138, ಪಕ್ಷೇತರ ಅಭ್ಯರ್ಥಿಗಳಾದ ಅಂಜಮ್ಮ 713, ಕೆ.ಟಿ.ಕುಮಾರಸ್ವಾಮಿ 28,928 ಮತಗಳನ್ನು ಪಡೆದಿದ್ದಾರೆ.  1632 ನೋಟಾ ಮತಗಳು ದಾಖಲಾಗಿವೆ. 247 ಮತಗಳು ತಿರಸ್ಕೃತವಾಗಿವೆ.


ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಕೆ.ಸಿ.ವೀರೇಂದ್ರ ಪಪ್ಪಿ 122021 ಮತಗಳನ್ನು ಪಡೆಯುವುದರೊಂದಿಗೆ ಸಮೀಪದ ಅಭ್ಯರ್ಥಿ ಭಾರತೀಯ ಜನತಾ ಪಕ್ಷದ ಜಿ.ಹೆಚ್.ತಿಪ್ಪಾರೆಡ್ಡಿ ಅವರಿಗಿಂತ 53,300 ಮತಗಳ ಅಂತರದೊಂದಿಗೆ ವಿಜೇತರಾಗಿದ್ದಾರೆ. ಭಾರತೀಯ ಜನತಾ ಪಕ್ಷದ ಜಿ.ಹೆಚ್.ತಿಪ್ಪಾರೆಡ್ಡಿ 68,721, ಆಮ್ ಆದ್ಮಿ ಪಕ್ಷದ ಬಿ.ಈ.ಜಗದೀಶ್ 1348, ಬಹುಜನ ಸಮಾಜ ಪಕ್ಷದ ಪ್ರಕಾಶ್.ಎನ್ 370,  ಜಾತ್ಯಾತೀತ ಜನತಾ ದಳದ ಜಿ.ರಘು ಆಚಾರ್ 5021, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಎಂ.ಟಿ.ಚಂದ್ರಣ್ಣ 508, ಕರ್ನಾಟಕ ಸ್ವಾಭಿಮಾನಿ ರೈತರ ಕಾರ್ಮಿಕರ ಪಕ್ಷದ ಜಿ.ಎಸ್.ನಾಗರಾಜು 93, ಸಮಾಜವಾದಿ ಪಕ್ಷದ ಎನ್.ಮಂಜಪ್ಪ 91,  ಸರ್ವೋದಯ ಕರ್ನಾಟಕ ಪಕ್ಷದ ಕೆ.ಎಸ್.ವಿಜಯ 107, ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಬಾಳೇಕಾಯಿ ಶ್ರೀನಿವಾಸ.ಹೆಚ್ 2555, ಪಕ್ಷೇತರ ಅಭ್ಯರ್ಥಿಗಳಾದ ಗಣೇಶ್ 149, ಆರ್.ಗೋಪಿನಾಥ್ 217,  ಜಿ.ಚಿತ್ರಶೇಖರಪ್ಪ 98,  ಪಿ.ಎಸ್.ಪುಟ್ಟಸ್ವಾಮಿ(ಸ್ವಾಮಿ) 146, ಎಂ.ಎ.ಬಸವರಾಜು 202,  ಭೂತರಾಜ.ವಿ.ಎಸ್ 399, ಮೋಹನ್ ಕುಮಾರ್.ಆರ್ 130,  ಎಂ.ಹೆಚ್.ಶಶಿಧರ್ 313,  ಸುರೇಶ್.ಎನ್ 94,  ಸೌಭಾಗ್ಯ ಬಸವರಾಜನ್ 223,  ಡಾ.ಹೆಚ್.ಕೆ.ಎಸ್.ಸ್ವಾಮಿ 405 ಮತಗಳನ್ನು ಪಡೆದಿದ್ದಾರೆ. 695 ನೋಟಾ ಮತಗಳು ದಾಖಲಾಗಿವೆ. 130 ಮತಗಳು ತಿರಸ್ಕøತವಾಗಿವೆ.


ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಡಿ.ಸುಧಾಕರ್ 92,050 ಮತಗಳನ್ನು ಪಡೆಯುವುದರೊಂದಿಗೆ ಸಮೀಪದ ಅಭ್ಯರ್ಥಿ ಭಾರತೀಯ ಜನತಾ ಪಕ್ಷದ ಕೆ.ಪೂರ್ಣಿಮಾ ಅವರಿಗಿಂತ 30,322 ಮತಗಳ ಅಂತರದೊಂದಿಗೆ ವಿಜೇತರಾಗಿದ್ದಾರೆ. ಭಾರತೀಯ ಜನತಾ ಪಕ್ಷದ ಕೆ.ಪೂರ್ಣಿಮಾ 61,728,  ಬಹುಜನ ಸಮಾಜ ಪಕ್ಷದ ಎನ್.ರಂಗಸ್ವಾಮಿ 935,  ಆಮ್ ಆದ್ಮಿ ಪಕ್ಷದ ಕೆ.ಟಿ.ತಿಪ್ಪೇಸ್ವಾಮಿ 1407,  ಜಾತ್ಯಾತೀತ ಜನತಾದಳ ಎಂ.ರವೀಂದ್ರಪ್ಪ 38,686,  ಕರ್ನಾಟಕ ರಾಷ್ಟ್ರೀಯ ಸಮಿತಿ ಪಕ್ಷದ ವಿನಯ್.ಎಸ್ 269,  ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ(ಕರ್ನಾಟಕ)ದ ಬಿ.ಪುಟ್ಟಲಿಂಗಪ್ಪ 851,  ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಹೆಚ್.ಮಹೇಶ್ 1520,  ಉತ್ತಮ ಪ್ರಜಾಕೀಯ ಪಕ್ಷದ ಈ.ಪಾತಲಿಂಗಪ್ಪ 1103, ಪಕ್ಷೇತರ ಅಭ್ಯರ್ಥಿಗಳಾದ ರಂಗಯ್ಯ.ಎನ್ 238,  ಎನ್.ಓ.ರಂಗಸ್ವಾಮಿ 219,  ಬಿ.ಶಶಿಕಲ 319 ಮತಗಳನ್ನು ಪಡೆದಿದ್ದಾರೆ. 691 ನೋಟಾ ಮತಗಳು ದಾಖಲಾಗಿವೆ.  286 ಮತಗಳು ತಿರಸ್ಕøತವಾಗಿವೆ.


ಹೊಸದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಬಿ.ಜಿ.ಗೋವಿಂದಪ್ಪ 81,050 ಮತಗಳನ್ನು ಪಡೆಯುವುದರೊಂದಿಗೆ ಸಮೀಪದ ಅಭ್ಯರ್ಥಿ ಭಾರತೀಯ ಜತನಾ ಪಕ್ಷದ ಎಸ್.ಲಿಂಗಮೂರ್ತಿ 32,816 ಮತಗಳ ಅಂತರದೊಂದಿಗೆ ವಿಜೇತರಾಗಿದ್ದಾರೆ. ಭಾರತೀಯ ಜತನಾ ಪಕ್ಷದ ಎಸ್.ಲಿಂಗಮೂರ್ತಿ 48,234, ಜಾತ್ಯಾತೀತ ಜನತಾ ದಳದ ತಿಪ್ಪೇಸ್ವಾಮಿ.ಎಂ 1,914,  ಬಹುಜನ ಸಮಾಜ ಪಕ್ಷದ ತಿಮ್ಮಪ್ಪ.ಕೆ 236,  ಆಮ್ ಆದ್ಮಿ ಪಕ್ಷದ ರಾಜು.ಎನ್.ವಿ 252,  ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕೆ.ಆರ್.ಎಸ್ ತನು ಚಿಕ್ಕಣ ಯಾದವ್ 302,  ಉತ್ತಮ ಪ್ರಜಾಕೀಯ ಪಕ್ಷದ ಸುನೀಲ್ ಕುಮಾರ್ ಎಸ್ ತುಂಬಿನಕೆರೆ 571,  ಪಕ್ಷೇತರ ಅಭ್ಯರ್ಥಿಗಳಾದ ಬಿ.ಗೀತಾಂಜಲಿ 136,  ಗೂಳಿಹಟ್ಟಿ ಡಿ ಶೇಖರ್ 10,449,  ಜಂಗಮ ಸತೀಶ ಬನಸಿಹಳ್ಳಿ 388, ಡಿ.ಪಾಂಡುರಂಗ ಗರಗ್ 1835, ಟಿ.ಮಂಜುನಾಥ 20,812, ಶೇಖರ್ ನಾಯ್ಕ್.ಎಂ.ಆರ್ 371 ಮತಗಳನ್ನು ಪಡೆದಿದ್ದಾರೆ. 1030 ನೋಟಾ ಮತಗಳು ದಾಖಲಾಗಿವೆ. 207 ಮತಗಳು ತಿರಸ್ಕøತವಾಗಿವೆ.


ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ ಎಂ.ಚಂದ್ರಪ್ಪ 88,732 ಮತಗಳನ್ನು ಪಡೆಯುವುದರೊಂದಿಗೆ ಸಮೀಪದ ಅಭ್ಯರ್ಥಿ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಹೆಚ್.ಆಂಜನೇಯ ಅವರಿಗಿಂತ 5682 ಮತಗಳನ್ನು ಪಡೆಯುವುದರೊಂದಿಗೆ ವಿಜೇತರಾಗಿದ್ದಾರೆ. ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಹೆಚ್.ಆಂಜನೇಯ 83,050,  ಜಾತ್ಯಾತೀತ ಜನತಾ ದಳದ ಎಸ್.ಆರ್.ಇಂದ್ರಜೀತ್ ನಾಯ್ಕ್ 1576,  ಬಹುಜನ ಸಮಾಜ ಪಕ್ಷದ ಕೆ.ಎನ್.ದೊಡ್ಡಟ್ಟೆಪ್ಪ 562, ಆಮ್ ಆದ್ಮಿ ಪಕ್ಷದ ಮಾಹಂತೇಶ್.ಸಿ.ಯು 170, ಸಮಾಜವಾದಿ ಪಕ್ಷದ ಪಿ.ಎಸ್.ಜಯಪ್ಪ 131,  ಜೈ ಮಹಾಭಾರತ್ ಪಕ್ಷದ ಪ್ರಕಾಶ್.ಹೆಚ್ 86,  ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಎಂ.ಎಸ್.ರಘುವೀರ ವರ್ಮಾ 109, ಉತ್ತಮ ಪ್ರಜಾಕೀಯ ಪಕ್ಷದ ರಾಜು.ಈ 526,  ಪಕ್ಷೇತರರಾದ ಡಾ.ಎಲ್.ಜಯಸಿಂಹ 19,685,  ಮಂಜುನಾಥ.ಟಿ 654,  ಮಹೇಶ್ ಕುಮಾರ್.ಎಂ.ಪಿ 372,  ಹನುಮಂತಪ್ಪ.ಡಿ 266 ಮತಗಳನ್ನು ಪಡೆದಿದ್ದಾರೆ. 1159 ನೋಟಾ ಮತಗಳು ದಾಖಲಾಗಿವೆ. 286 ಮತಗಳು ತಿರಸ್ಕøತವಾಗಿವೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಶಿಕ್ಷಣದಿಂದ ಮಾತ್ರ ಜೀವನದಲ್ಲಿ ಬದಲಾವಣೆ ಸಾಧ್ಯ : ಬಿ.ಕೆ.ರಹಮತ್‍ವುಲ್ಲಾ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,  ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮಾರ್ಚ್.19 : ಸಂವಿಧಾನದಲ್ಲಿ ಎಲ್ಲರಿಗೂ ಸಮಾನವಾದ ಹಕ್ಕಿದೆ. ಮಹಿಳೆಯರು ತಮ್ಮ ಹಕ್ಕುಗಳನ್ನು ಸರಿಯಾಗಿ ಚಲಾಯಿಸಬೇಕೆಂದು ಹಿರಿಯ

ಗ್ರಾಹಕರ ಮೋಸ ಹಾಗೂ ಶೋಷಣೆ ತಪ್ಪಿಸಲು ಕೃತಕ ಬುದ್ಧಿಮತ್ತೆ ಸಹಾಯಕ : ಜಿಲ್ಲಾ ನ್ಯಾಯಾಧೀಶೆ ಕೆ.ಬಿ.ಗೀತಾ ಅಭಿಮತ

ಚಿತ್ರದುರ್ಗ. ಮಾ.19:  ಇಂದಿನ ತಂತ್ರಜ್ಞಾನ ಯುಗದಲ್ಲಿ ಆನ್‍ಲೈನ್ ಮೂಲಕ ಗ್ರಾಹಕರಿಗೆ ವಂಚನೆಯಾಗುತ್ತಿದೆ. ಇದೇ ನಿಟ್ಟಿನಲ್ಲಿ ಗ್ರಾಹಕರಿಗೆ ಉಂಟಾಗುವ ಮೋಸ ಹಾಗೂ ಶೋಷಣೆ ತಪ್ಪಿಸಲು ಕೃತಕ ಬುದ್ಧಿಮತ್ತೆ ಸಹಾಯಕವಾಗಲಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ

ವಿ.ಸೋಮಣ್ಣ ಹಾಗೂ ಗಾಯತ್ರಿ ಸಿದ್ಧೇಶ್ವರ ಅವರು ಚಿತ್ರದುರ್ಗದ ಭೋವಿ ಗುರುಪೀಠಕ್ಕೆ ಭೇಟಿ

  ಸುದ್ದಿಒನ್, ಚಿತ್ರದುರ್ಗ, ಮಾರ್ಚ್.19 :  ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ವಿ.ಸೋಮಣ್ಣ ಹಾಗೂ ದಾವಣಗೆರೆ  ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಶ್ರೀಮತಿ ಗಾಯತ್ರಿ ಸಿದ್ದೇಶ್ವರ ಹಾಗೂ ಕರ್ನಾಟಕ ಸರ್ಕಾರದ ಕುವೆಂಪು ಭಾಷಾ

error: Content is protected !!