ಶ್ರೀನಗರ: ನಾಳೆ ಇಡೀ ದೇಶವೇ ಖುಷಿ ಪಡುವ ಸಂತಸದ ಗಳಿಗೆಯದು. ಮೊದಲ ಬಾರಿಗೆ ಜಮ್ಮು ಕಾಶ್ಮೀರದಲ್ಲಿ ನಮ್ಮ ತ್ರಿವರ್ಣ ಧ್ವಜ ಹಾರಾಡಲಿದ್ದು ಇತಿಹಾಸ ಸೃಷ್ಟಿಯಾಗಲಿದೆ. ನಾಳೆ ಗಣರಾಜ್ಯೋತ್ಸವದ ಈ ಸಂಭ್ರಮವನ್ನ ಕಣ್ತುಂಬಿಕೊಳ್ಳಬಹುದಾಗಿದೆ.
ಜಮ್ಮು ಕಾಶ್ಮೀರದ ಶ್ರೀನಗರದ ಲಾಲ್ ಚೌಕ್ ಬಳಿ ತ್ರಿವರ್ಣ ಧ್ವಜವನ್ನ ಹಾರಿಸಲಾಗುತ್ತೆ. ಕಳೆದ 30 ವರ್ಷಗಳ ಹಿಂದೆ ಉಗ್ರರೊಬ್ಬರು ಚಾಲೆಂಜ್ ಹಾಕಿದ್ದರು. ತಾಕತ್ತಿದ್ದರೆ ಇಲ್ಲಿ ಬಂದು ತ್ರಿವರ್ಣ ಧ್ವಜ ಹಾರಿಸಿ ಎಂದಿದ್ದರು. ಆಗ ಅಂದರೆ 1992 ರಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಮುರುಳಿ ಮನೋಹರ್ ಜೋಶಿ ಹಾಗೂ ನರೇಂದ್ರ ಮೋದಿಯವರು ಮಿಲಿಟರಿ ಪಡೆಯ ಸರ್ಪಗಾವಲಿನಲ್ಲಿ ತ್ರಿವರ್ಣ ಧ್ವಜ ಹಾರಿಸಿದ್ದರು.
ಇದೀಗ ತ್ರಿವರ್ಣ ಧ್ವಜ ಹಾರಾಟ ಮಾಡಿಯೇ ಮಾಡ್ತೀವಿ ಅಂತ ಕಾಶ್ಮೀರಿ ಸ್ಥಳೀಯ ರಾಜಕೀಯ ಕಾರ್ಯಕರ್ತರೊಬ್ಬರು ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಯಾರಿಗೂ ಹೆದರೋದಿಲ್ಲ ಎಂದಿದ್ದಾರೆ.