ಇಮ್ರಾನ್ ಖಾನ್ ಬಂಧನವಾಗುತ್ತಿದ್ದಂತೆ ಹೊತ್ತಿ ಉರಿದೇ ಬಿಡ್ತು ಪಾಕಿಸ್ತಾನ : ವಿಡಿಯೋ ನೋಡಿ…!

ಇಸ್ಲಾಮಾಬಾದ್: ಸದ್ಯ ಪಾಕಿಸ್ತಾನದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನವಾಗುತ್ತಿದ್ದಂತೆ, ಪಾಕಿಸ್ತಾನದ ಹಲವು ನಗರಗಳು ಹೊತ್ತಿ ಉರಿದಿದೆ. ಇಸ್ಲಾಮಾಬಾದ್, ಲಾಹೋರ್, ಕರಾಚಿಯಲ್ಲಿ ಪ್ರತಿಭಟನಾಕಾರರು ಪ್ರತಿಭಟನೆ ನಡೆಸುತ್ತಿದ್ದರು.

 

ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಆಲ್ ಖಾದಿರ್ ಟ್ರಸ್ಟ್ ನ ಭ್ರಷ್ಟಾಚಾರದ ಆರೋಪದಲ್ಲಿ ಇಮ್ರಾನ್ ಖಾನ್ ಇಂದು ಇಸ್ಲಾಮಾಬಾದ್ ಹೈಕೋರ್ಟ್ ಗೆ ಹಾಜರಾಗಿದ್ದರು. ಈ ವೇಳೆ ಪಾಕ್ ರೇಂಜರ್ಸ್ ರೂಮಿಗೆ ನುಗ್ಗಿ ಇಮ್ರಾನ್ ಖಾನ್ ರನ್ನು ಅರೆಸ್ಟ್ ಮಾಡಲಾಗಿದೆ.

ಪಾಕಿಸ್ತಾನದ ಅರೆಸೇನೆ, ಇಮ್ರಾನ್ ಖಾನ್ ರನ್ನು ಎಳೆದೊಯ್ಯುತ್ತಿದ್ದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವೇಳೆ ಇಮ್ರಾನ್ ಖಾನ್ ಹಾಗೂ ವರ ವಕೀಲರ ಮೇಲೆ ಹಲ್ಲೆ‌ ಮಾಡಲಾಗಿದೆ ಎಂಬ ಆರೋಪಗಳು ಕೇಳಿ ಬಂದಿದೆ. ಈ ಸುದ್ದಿ ಎಲ್ಲೆಡೆ ಹಬ್ಬುತ್ತಿದ್ದಂತೆ ಇಮ್ರಾನ್ ಖಾನ್ ಬೆಂಬಲಿಗರು ಆಕ್ರೋಶಗೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *