ಡಿಕೆಶಿಗೆ ಅಸಾಧ್ಯವಾದ ಭೇಟಿ ಹರಿಪ್ರಸಾದ್ ಗೆ ಸುಲಭವಾಗಿದ್ದೇಗೆ : ರಾಹುಲ್ ಗಾಂಧಿಗೆ ವರದಿ ಒಪ್ಪಿಸಿದರಾ..?

1 Min Read

ಬೆಂಗಳೂರು: ರಾಜ್ಯ ರಾಜಕಾರಣ ದೆಹಲಿಯನ್ನು ತಲುಪಿದೆ. ಯಾಕಂದ್ರೆ ಅಷ್ಟು ದೊಡ್ಡ ಬೆಳವಣಿಗೆ ನಡೆಯುತ್ತಿದೆ. ಆದರೆ ಈ ಬೆಳವಣಿಗೆಯ ನಡುವೆ ಇತ್ತೀಚೆಗಷ್ಟೇ ಡಿಕೆ ಶಿವಕುಮಾರ್ ಅವರು, ರಾಹುಲ್ ಗಾಂಧಿ ಅವರನ್ನ ಭೇಟಿ ಮಾಡುವುದಕ್ಕೆ ಹೋದಾಗ ಇಬ್ಬರ ಭೇಟಿ ಸಾಧ್ಯವಾಗಿರಲಿಲ್ಲ. ಆದರೆ ಎಂಎಲ್ಸಿ ಬಿಕೆ ಹರಿಪ್ರಸಾದ್ ಅವರಿಗೆ ಈ ಭೇಟಿ ಸಾಧ್ಯವಾಗಿದೆ. ಇಂದು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ, ವರದಿ ಒಪ್ಪಿಸಿ ಬಂದಿದ್ದಾರೆ.

ರಾಜ್ಯದಲ್ಲಿ ಖುರ್ಚಿ ಕದನ ಹೇಗೆಲ್ಲಾ ನಡೀತಾ ಇದೆ ಎಂಬುದು ರಾಜ್ಯದ ಜನತೆಯ ಅರಿವಿಗೂ ಬಂದಿದೆ. ಹೀಗಿರುವಾಗ ಮಂಗಳೂರು ಪ್ರವಾಸದಲ್ಲಿದ್ದ ಬಿಕೆ ಹರಿಪ್ರಸಾದ್ ದಿಢೀರನೇ ದೆಹಲಿಗೆ ತೆರಳಿದಾಗ ಅವರ ನಡೆ ಆಶ್ಚರ್ಯ ಉಂಟು ಮಾಡದೆ ಇರುತ್ತದೆಯೇ. ಸಹಜವಾಗಿಯೇ ರಾಜ್ಯ ರಾಜಕಾರಣದ ಪಡಸಾಲೆಯಲ್ಲಿ ಚರ್ಚಿತ ವಿಚಾರವಾಗಿದೆ. ಜೊತೆಗೆ ಪ್ರಸ್ತುತ ವಿಚಾರದ ಬಗ್ಗೆ ಬಿಕೆ ಹರಿಪ್ರಸಾದ್ ಅವರ ಬಳಿ ಮಾಹಿತಿಯನ್ನು ಹೈಕಮಾಂಡ್ ನಾಯಕರು ಪಡೆದಿದ್ದಾರೆ ಎನ್ನುತ್ತಿವೆ ಮೂಲಗಳು.

ಸದ್ಯಕ್ಕೆ ಡಿಕೆಶಿ ಅವರ ಬಣ ದೆಹಲಿಯಲ್ಲಿಯೇ ಬೀಡು ಬಿಟ್ಟಿದೆ. ಆದ ಕಾರಣ ಈ ಸಮಸ್ಯೆ ದೊಡ್ಡದಾದರೆ ಪಕ್ಷಕ್ಕೆ ಡ್ಯಾಮೇಜ್ ಆಗುವ ಸಾಧ್ಯತೆ ಇದೆ. ಹೀಗಾಗಿ ಹೈಕಮಾಂಡ್ ಮಧ್ಯಪ್ರವೇಶಿಸಿ ಮೊದಲು ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಈ ಎಲ್ಲಾ ಬೆಳವಣಿಗೆಯ ನಡುವೆ ನಾಳೆ ಮಲ್ಲಿಕಾರ್ಜುನ ಖರ್ಗೆ ಅವರು ರಾಹುಲ್ ಗಾಂಧಿ ಅವರನ್ನು ಭೇಟಿಯಾಗುತ್ತಿದ್ದಾರೆ. ಈಗಾಗಲೇ ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದ ಖರ್ಗೆ ಅವರನ್ನು ಡಿಕೆಶಿ ಪರ ಬೆಂವಲಿಗರು ಭೇಟಿಯಾಗಿದ್ದಾರೆ. ಸಿದ್ದರಾಮಯ್ಯ ಅವರು ಭೇಟಿಯಾಗಿದ್ದಾರೆ. ಈ ಎಲ್ಲದರ ವರದಿ ಒಪ್ಪಿಸಿ, ಒಂದು ತೀರ್ಮಾನಕ್ಕೆ ಬರುವ ಸಾಧ್ಯತೆ ಇರುತ್ತದೆ.

Share This Article
Enable Notifications OK No thanks